ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆಯಲು ವ್ಯಕ್ತಿ ಹೀಗೆ ಮಾಡೋದಾ?

ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆಯಲು ವ್ಯಕ್ತಿಯೊಬ್ಬ ಲಿವ್​ಇನ್ ರಿಲೇಷನ್​ಶಿಪ್ ಒಪ್ಪಂದವನ್ನು ತಯಾರಿಸಿ ನ್ಯಾಯಾಲಯಕ್ಕೆ ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈಗಾಗಲೇ ಆತನಿಗೆ ಜಾಮೀನು ಸಿಕ್ಕಿದ್ದು, ಯುವತಿ ಅದರಲ್ಲಿರುವ ಸಹಿ ತನ್ನದಲ್ಲ ಎಂದು ಹೇಳುತ್ತಿದ್ದಾಳೆ.

ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆಯಲು ವ್ಯಕ್ತಿ ಹೀಗೆ ಮಾಡೋದಾ?
ಲಿವ್ ಇನ್ ಸಂಬಂಧ
Follow us
|

Updated on: Sep 04, 2024 | 11:27 AM

ಲಿವ್​-ಇನ್ ಸಂಗಾತಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿರುವ ಆರೋಪಿಯು ಜಾಮೀನು ಪಡೆಯಲು ಲಿವ್​-ಇನ್​-ರಿಲೇಷನ್​ಶಿಪ್ ಒಪ್ಪಂದವನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವಿಚಿತ್ರ ಘಟನೆ ನಡೆದಿದೆ. 29 ವರ್ಷದ ಯುವತಿಯೊಬ್ಬರು ಲಿವ್​ ಇನ್​ ಸಂಗಾತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ಪಡೆಯಲು ವ್ಯಕ್ತಿಯೊಬ್ಬ ಲಿವ್​ ಇನ್ ರಿಲೇಷನ್​ಶಿಪ್ ಒಪ್ಪಂದ ಪತ್ರ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 29 ರಂದು ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು. ಆದರೆ ಆತನ ವಿರುದ್ಧ ಪ್ರಕರಣ ದಾಖಲಿಸಿರುವ ಯುವತಿ ದಾಖಲೆಯಲ್ಲಿನ ಸಹಿ ತನ್ನದಲ್ಲ ಎಂದು ಮುಂಬೈ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.

ಮಹಿಳೆ ವೃದ್ಧರೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದು, ಆರೋಪಿ ಸರ್ಕಾರಿ ನೌಕರನಾಗಿದ್ದಾನೆ. ಅಧಿಕಾರಿಗಳು ಈ ಒಪ್ಪಂದವನ್ನು ಪರಿಶೀಲಿಸುತ್ತಿದ್ದಾರೆ. ಮಹಿಳೆ ಮಾಡಿದ ಆರೋಪದ ಪ್ರಕಾರ, ಅವರು ಒಟ್ಟಿಗೆ ವಾಸಿಸುತ್ತಿದ್ದ ಸಮಯದಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ ಸಂಗಾತಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆಂದು ಹೇಳಿದ್ದಾಳೆ.

ನ್ಯಾಯಾಲಯದಲ್ಲಿ ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಸುನೀಲ್ ಪಾಂಡೆ ಇದನ್ನು ವಂಚನೆ ಪ್ರಕರಣ ಎಂದು ಕರೆದಿದ್ದಾರೆ. ಅರ್ಜಿದಾರನನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ, ಅವರಿಬ್ಬರು ಲಿವ್ ಇನ್​ ರಿಲೇಷನ್​ಶಿಪ್​ನಲ್ಲಿದ್ದರು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Crime News: ಹೇಟ್ ಸ್ಟೋರಿ; ಐಆರ್​ಎಸ್ ಅಧಿಕಾರಿ ಮನೆಯೊಳಗೆ ಯುವತಿಯ ಶವ ಪತ್ತೆ

ಆ ಒಪ್ಪಂದದಲ್ಲೇನಿದೆ? ಇಬ್ಬರ ನಡುವೆ ಸಹಿ ಮಾಡಲಾದ ಏಳು ಅಂಶಗಳ ಒಪ್ಪಂದದ ಪ್ರಕಾರ ಆಗಸ್ಟ್ 1 2024 ರಿಂದ ಜೂನ್ 30, 2025 ರವರೆಗೆ ಒಟ್ಟಿಗೆ ಇರಲು ನಿರ್ಧರಿಸಿದ್ದರು. ಎರಡನೇ ಷರತ್ತಿನಲ್ಲಿ, ಈ ಅವಧಿಯಲ್ಲಿ ಇಬ್ಬರೂ ಪರಸ್ಪರ ಲೈಂಗಿಕ ಕಿರುಕುಳದ ಯಾವುದೇ ಪ್ರಕರಣವನ್ನು ದಾಖಲಿಸುವುದಿಲ್ಲ ಮತ್ತು ಶಾಂತಿಯುತವಾಗಿ ಸಮಯ ಕಳೆಯುತ್ತೇವೆ ಎಂದು ಬರೆಯಲಾಗಿದೆ.

ಮೂರನೇ ಷರತ್ತಿನ ಪ್ರಕಾರ, ಮಹಿಳೆಯು ಆ ವ್ಯಕ್ತಿಯೊಂದಿಗೆ ಅವನ ಮನೆಯಲ್ಲಿ ಇರುತ್ತಾಳೆ ಮತ್ತು ಯಾವುದೇ ಸಂದರ್ಭದಲ್ಲಿ ಅವಳು ಅವನ ನಡವಳಿಕೆಯನ್ನು ಅನುಚಿತವೆಂದು ಕಂಡುಕೊಂಡರೆ ಅವರು ಯಾವುದೇ ಸಮಯದಲ್ಲಿ ಬೇರ್ಪಡಬಹುದು ಆದರೆ ಒಂದು ತಿಂಗಳ ಮೊದಲು ನೋಟಿಸ್ ನೀಡಬೇಕು.

ಮಹಿಳೆಯ ಸಂಬಂಧಿಕರು ಆತನೊಂದಿಗೆ ಇರುವ ಸಮಯದಲ್ಲಿ ಆಕೆಯ ಮನೆಗೆ ಬರುವಂತಿಲ್ಲ ಎಂದು ನಾಲ್ಕನೇ ಷರತ್ತು ಹೇಳುತ್ತದೆ. ಐದನೇ ಷರತ್ತು ಮಹಿಳೆಯು ಪುರುಷನಿಗೆ ಯಾವುದೇ ರೀತಿಯ ಕಿರುಕುಳ ಅಥವಾ ಮಾನಸಿಕ ಸಂಕಟವನ್ನು ಉಂಟುಮಾಡಬಾರದು ಎಂದು ಹೇಳಿದೆ.

ಈ ಅವಧಿಯಲ್ಲಿ ಮಹಿಳೆ ಗರ್ಭಿಣಿಯಾದರೆ, ಪುರುಷನು ಜವಾಬ್ದಾರನಾಗಿರುವುದಿಲ್ಲ ಎಂದು ಆರನೇ ಷರತ್ತು ಹೇಳುತ್ತದೆ. ಅಂತಿಮ ಮತ್ತು ಏಳನೇ ಷರತ್ತಿನಲ್ಲಿ, ಕಿರುಕುಳವು ಪುರುಷನಿಗೆ ಯಾವುದೇ ರೀತಿಯ ಮಾನಸಿಕ ಆಘಾತವನ್ನು ಉಂಟುಮಾಡಿದರೆ ಮತ್ತು ಅವನ ಜೀವನವನ್ನು ಹಾಳುಮಾಡಿದರೆ, ಮಹಿಳೆಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇದರಲ್ಲಿರುವ ಎಲ್ಲಾ ಅಂಶಗಳು ಆ ವ್ಯಕ್ತಿಯೊಬ್ಬನ ಪರವಾಗಿರುವ ಹಿನ್ನೆಲೆಯಲ್ಲಿ ಯುವತಿ ಸತ್ಯವನ್ನೇ ಹೇಳುತ್ತಿರಬಹುದು ಎಂದು ಭಾವಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ