ಭಾರತ ಗ್ರೀನ್ ಹೈಡ್ರೋಜನ್​ ಹಬ್ ಆಗಬೇಕಿದೆ: ಪ್ರಲ್ಹಾದ್ ಜೋಶಿ

ಭೂಮಿಯ ಸುರಕ್ಷತೆ ವಿಚಾರದಲ್ಲಿ ಭಾರತ ಜಾಗತಿಕ ನಾಯಕನಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಗ್ರೀನ್​ ಹೈಡ್ರೋಜನ್​ ಮಿಷನ್​​​​ ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳ ಜತೆ ಕರ್ನಾಟಕ ರಾಜಕೀಯಕ್ಕೆ ಸಂಬಂಧಿಸಿಯೂ ಮಾತನಾಡಿದರು.

ಭಾರತ ಗ್ರೀನ್ ಹೈಡ್ರೋಜನ್​ ಹಬ್ ಆಗಬೇಕಿದೆ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on: Sep 04, 2024 | 12:46 PM

ನವದೆಹಲಿ, ಸೆಪ್ಟೆಂಬರ್ 4: ಭಾರತ ಗ್ರೀನ್ ಹೈಡ್ರೋಜನ್​ ಹಬ್ ಆಗಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ದೆಹಲಿಯಲ್ಲಿ ಸೆಪ್ಟೆಂಬರ್ 11ರಿಂದ 13ರ ವರೆಗೆ ನಡೆಯಲಿರುವ ಗ್ರೀನ್​ ಹೈಡ್ರೋಜನ್​ ಮಿಷನ್​​​​ ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರೀನ್ ಹೈಡ್ರೋಜನ್​ ಹಬ್​​ನಿಂದ ಸುಸ್ಥಿರ ಭವಿಷ್ಯ ನಿರ್ಮಾಣ ಸಾಧ್ಯ. ಭೂಮಂಡಲ ಸುರಕ್ಷತೆ ವಿಚಾರದಲ್ಲಿ ಭಾರತ ಜಾಗತಿಕ ನಾಯಕನಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಂತೆ ಭಾರತವೂ ಹೊಸ ಆವಿಷ್ಕಾರ ಶುರುಮಾಡಿದೆ ಎಂದರು.

ಗ್ರೀನ್​ ಹೈಡ್ರೋಜನ್​ ಮಿಷನ್​​​​ ಅಂತಾರಾಷ್ಟ್ರೀಯ ಸಮ್ಮೇಳನದ ಉತ್ಪನ್ನ ಮತ್ತು ತಂತ್ರಜ್ಞಾನದ ಪ್ರದರ್ಶನದಲ್ಲಿ 120 ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. 150ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಿಕರು ಭಾಗವಹಿಸಲಿದ್ದಾರೆ.

ಗ್ರೀನ್​ ಹೈಡ್ರೋಜನ್ ಸಂಬಂಧ ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ, ಸಿಂಗಾಪುರ್ ಮತ್ತು ನೆದರ್ಲ್ಯಾಂಡ್ಸ್ ಬಗ್ಗೆ ಅಧಿವೇಶನಗಳಲ್ಲಿ ಚರ್ಚೆ ನಡೆಯಲಿದೆ.

ಕಾರ್ಯಕ್ರಮವನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಭಾರತ ಸರ್ಕಾರದ ಪ್ರಧಾನ ವಿಜ್ಞಾನಿಗಳ ಕಚೇರಿಯ ಸಹಯೋಗದೊಂದಿಗೆ ಆಯೋಜಿಸುತ್ತಿದೆ.

ಕಾಂಗ್ರೆಸ್ ಜತೆಗಿದ್ದಾಗ ಕತ್ತೆ ಕಾಯ್ತಿದ್ದರಾ: ಜೋಶಿ ಪ್ರಶ್ನೆ

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ವಿಚಾರಗಳನ್ನು ರಾಜ್ಯಪಾಲರು ಪರಿಶೀಲನೆ ಮಾಡುತ್ತಾರೆ ಎಂದರು. ನಾನು ಈಗಾಗಲೇ ಕೇಳಿರುವ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ನೀಡಲಿ. ಕುಮಾರಸ್ವಾಮಿ ಪ್ರಕರಣ ನಡೆದಿರೋದು ಯಾವಾಗ? 2006ರಲ್ಲಿ ಹೆಚ್​​ಡಿಕೆ ಪ್ರಕರಣ ನಡೆದಿದೆ ಎಂದರು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 2018ರಲ್ಲಿ ಕುಮಾರಸ್ವಾಮಿ ಕೈ ಕಾಲು ಹಿಡಿದು ಸಿಎಂ ಮಾಡಿದ್ದರು. ಆಗ ಯಾಕೆ ಹೆಚ್​ಡಿಕೆ ವಿರುದ್ಧ ಪ್ರಾಸಿಕ್ಯೂಷನ್​​ಗೆ ಕೊಡಲಿಲ್ಲ. 8 ವರ್ಷಗಳ ಕಾಲ ಏನೂ ಮಾಡದೆ ಈಗ ಡ್ರಾಮಾ ಮಾಡ್ತಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕೆಐಎಡಿಬಿ ಅಕ್ರಮ ಆರೋಪ: ಛಲವಾದಿ ನಾರಾಯಣಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು

ಮಾಜಿ ಸಚಿವ ಮುರುಗೇಶ್​​ ನಿರಾಣಿ ಮೇಲಿನ ಆರೋಪ ಹಳೆಯದ್ದು. ಛಲವಾದಿ ನಾರಾಯಣಸ್ವಾಮಿ ಮೇಲಿನ ಆರೋಪ 2004ರದ್ದು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್​ನವರು ಏನು ಮಾಡ್ತಿದ್ದರು? ಕಾಂಗ್ರೆಸ್​ನವರ ಡ್ರಾಮಾವನ್ನು ಜನರು ಅರ್ಥ ಮಾಡಿಕೊಳ್ತಾರೆ ಎಂದು ಜೋಶಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ