Breaking: ಮುಂಬೈನಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧಿಸಿದ ಗುಜರಾತ್ ಎಟಿಎಸ್

| Updated By: ರಶ್ಮಿ ಕಲ್ಲಕಟ್ಟ

Updated on: Jun 25, 2022 | 9:34 PM

ಗುಜರಾತ್ ಎಟಿಎಸ್ ತಂಡ ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ಅವರ ಮನೆಯ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. 

Breaking: ಮುಂಬೈನಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧಿಸಿದ ಗುಜರಾತ್ ಎಟಿಎಸ್
Teesta Settlewad
Follow us on

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಶನಿವಾರ ಮುಂಬೈನಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ (Teesta Setalvad) ಅವರನ್ನು ಬಂಧಿಸಿದೆ. ಎಟಿಎಸ್  ತಂಡವು ಮಧ್ಯಾಹ್ನ ಸೆಟಲ್ವಾಡ್ ಅವರ ಮುಂಬೈ(Mumbai) ಮನೆಗೆ ಆಗಮಿಸಿ ಅವರನ್ನು ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ. ಗುಜರಾತ್ ಎಟಿಎಸ್ ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಸೆಟಲ್ವಾಡ್ ಪರ ವಕೀಲ ವಿಜಯ್ ಹಿರೇಮಠ್ ಹೇಳಿದ್ದಾರೆ. “ನಮಗೆ ಮಾಹಿತಿ ನೀಡಿಲ್ಲ. ಅವರು ತಿಸ್ತಾ ಅವರ ಮನೆಗೆ ನುಗ್ಗಿ ಆಕೆ ಮೇಲೆ ಹಲ್ಲೆ ನಡೆಸಿದರು. ಆನಂತರ ಆಕೆಯನ್ನು ಅವಳನ್ನು ಕರೆದೊಯ್ದರು. ಪೊಲೀಸರು ಐಪಿಸಿಯ ಸೆಕ್ಷನ್ 468 (ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ) ಮತ್ತು 471 (ನಿಜವಾದ ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಬಳಸುವುದು) ಅಡಿಯಲ್ಲಿ ಆರೋಪಗಳನ್ನು ಹೇರಿದ್ದಾರೆ ಎಂದು ಹೀರೇಮಠ್ ಹೇಳಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಸೆಟಲ್ವಾಡ್ ಅವರು 2002 ರ ಗುಜರಾತ್ ಗಲಭೆಗಳ ಬಗ್ಗೆ ಆಧಾರರಹಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ಆರೋಪಿಸಿದ ಕೆಲವೇ ಗಂಟೆಗಳ ನಂತರ ಸೆಟಲ್ವಾಡ್ ಬಂಧನ ನಡೆದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿಜಿಪಿ ಆರ್‌ಬಿ ಶ್ರೀಕುಮಾರ್ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪೊಲೀಸರು ಶ್ರೀಕುಮಾರ್ ಮತ್ತು ಸೆಟಲ್ವಾಡ್ ವಿರುದ್ಧ ಫೋರ್ಜರಿ, ಪಿತೂರಿ ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರರಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯಲ್ಲಿ ಝಾಕಿಯಾ ಜಾಫ್ರಿ ಅವರು ಮಾಡಿದ “ದೊಡ್ಡ ಪಿತೂರಿ” ಆರೋಪಗಳನ್ನು ಶುಕ್ರವಾರ ಸುಪ್ರೀಂ ಕೋರ್ಟ್ ತಳ್ಳಿಹಾಕಿತು. ಝಾಕಿಯಾ ಅವರು ಗಲಭೆಯಲ್ಲಿ ಹತರಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ.

ಯಾರು ತೀಸ್ತಾ ಸೆಟಲ್ವಾಡ್? 

ತೀಸ್ತಾ ಸೆಟಲ್ವಾಡ್ ಪತ್ರಕರ್ತೆ,ಸಾಮಾಜಿಕ ಕಾರ್ಯಕರ್ತೆ. ಈಕೆ ಗುಜರಾತ್ ಗಲಭೆ ಪ್ರಕರಣ ವಿಚಾರದಲ್ಲಿ ಸುದ್ದಿಯಾಗಿದ್ದರು. ತೀಸ್ತಾ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (CJP) ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದು, ಇದು 2002 ರ ಗಲಭೆಗಳ ಸಂತ್ರಸ್ತರ ಪರವಾಗಿ ವಕಾಲತ್ತು ವಹಿಸುತ್ತದೆ ಎಂದು ಹೇಳಿದ್ದರು.ಈ ಸಂಸ್ಥೆಯು ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಪ್ರತಿವಾದಿಯಾಗಿತ್ತು.
ಆದಾಗ್ಯೂ, ಸೆಟಲ್ವಾಡ್ ಅವರು ಅರ್ಜಿದಾರರಾದ ಝಕಿಯಾ ಜಾಫ್ರಿ ಅವರ ಭಾವನೆಗಳನ್ನು ದುರುದ್ದೇಶದಿಂದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

1993 ರಲ್ಲಿ ತೀಸ್ತಾ ತಮ್ಮ ಪತಿಯೊಂದಿಗೆ ಕಮ್ಯುನಲಿಸಂ ಕೋಂಬಾಟ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ದೇಶವನ್ನು ಆವರಿಸಿದ್ದ ಕೋಮುಗಲಭೆಗೆ ಉತ್ತರವಾಗಿತ್ತು ಎಂದು ಹೇಳಲಾಗಿದೆ. 2002ರಲ್ಲಿ ತೀಸ್ತಾ, 2002 ರ ಗಲಭೆಗಳ ಸಂತ್ರಸ್ತರಿಗೆ ಮೊಕದ್ದಮೆ ಹೂಡಲು ಸೆಡ್ರಿಕ್ ಪ್ರಕಾಶ್, ಅನಿಲ್ ಧಾರ್ಕರ್, ಅಲಿಕ್ ಪದಮ್ಸೀ, ಜಾವೇದ್ ಅಖ್ತರ್, ವಿಜಯ್ ತೆಂಡೂಲ್ಕರ್ ಮತ್ತು ರಾಹುಲ್ ಬೋಸ್ ಅವರೊಂದಿಗೆ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಅನ್ನು ಪ್ರಾರಂಭಿಸಿದರು.

Published On - 6:08 pm, Sat, 25 June 22