ಬಾಲಿವುಡ್ ನಟ ಸಲ್ಮಾನ್ ಖಾನ್​​​ಗೆ ಜೀವ ಬೆದರಿಕೆ ಪ್ರಕರಣ: ಗ್ಯಾಂಗ್​​ಸ್ಟರ್​​​ ಲಾರೆನ್ಸ್​​​​ ಬಿಷ್ಣೋಯ್​​​ ವಿಚಾರಣೆಗಾಗಿ ದೆಹಲಿಗೆ ಬಂದ ಮುಂಬೈ ಪೊಲೀಸ್

| Updated By: ರಶ್ಮಿ ಕಲ್ಲಕಟ್ಟ

Updated on: Jun 08, 2022 | 7:32 PM

ಇದೀಗ ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ತಂಡ ಇಲ್ಲಿಗೆ ಬಂದಿದೆ. ಇದು ಮುಂಬೈ ಪೊಲೀಸರಿಗೆ ಸಂಬಂಧಿಸಿದ ಪ್ರಕರಣವಾಗಿದೆ. ಆದ್ದರಿಂದ ಅವರು ನಮ್ಮ ಘಟಕದೊಂದಿಗೆ ಜಂಟಿಯಾಗಿ ಪ್ರಕರಣದಲ್ಲಿ ಬಿಷ್ಣೋಯ್ ಅವರನ್ನು ವಿಚಾರಣೆ ನಡೆಸುತ್ತಾರೆ...

ಬಾಲಿವುಡ್ ನಟ ಸಲ್ಮಾನ್ ಖಾನ್​​​ಗೆ ಜೀವ ಬೆದರಿಕೆ ಪ್ರಕರಣ: ಗ್ಯಾಂಗ್​​ಸ್ಟರ್​​​ ಲಾರೆನ್ಸ್​​​​ ಬಿಷ್ಣೋಯ್​​​ ವಿಚಾರಣೆಗಾಗಿ ದೆಹಲಿಗೆ ಬಂದ ಮುಂಬೈ ಪೊಲೀಸ್
ಸಲೀಂಖಾನ್- ಸಲ್ಮಾನ್ ಖಾನ್
Follow us on

ದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಮತ್ತು ಅವರ ಅಪ್ಪ ಸಲೀಂ ಖಾನ್​​​ಗೆ (Salim Khan) ಜೀವ ಬೆದರಿಕೆ ಪತ್ರ ಪ್ರಕರಣದಲ್ಲಿ ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್​​​ನ್ನು (gangster Lawrence Bishnoi) ವಿಚಾರಣೆ ಮಾಡಲು ಮುಂಬೈ ಪೊಲೀಸರ ಅಪರಾಧ ದಳ ದೆಹಲಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಂಬೈ ಪೊಲೀಸರು ಸಲ್ಮಾನ್ ಖಾನ್ ಮತ್ತು ಅವರ ಅಪ್ಪನ ಹೇಳಿಕೆಯನ್ನು ದಾಖಲಿಸಿದ್ದು ಸಬರ್ಬನ್ ಬಾಂದ್ರಾದಲ್ಲಿರುವ ಸಲ್ಮಾನ್ ನಿವಾಸಕ್ಕೆ ಬಿಗಿ ಭದ್ರತೆಯೊದಗಿಸಿದ್ದಾರೆ. ಪೊಲೀಸರು ಸಲೀಂ ಖಾನ್ ಅವರ ಇಬ್ಬರು ಅಂಗರಕ್ಷಕರ ಹೇಳಿಕೆಗಳನ್ನೂ ದಾಖಲಿಸಿದ್ದಾರೆ.

ಪತ್ರದಲ್ಲೇನಿದೆ?

ಪೊಲೀಸರ ಮೂಲದ ಪ್ರಕಾರ ಬೆದರಿಕೆ ಪತ್ರದಲ್ಲಿ ಸಲೀಂ ಖಾನ್, ಸಲ್ಮಾನ್ ಖಾನ್ ಬಹೋತ್ ಜಲ್ದ್ ಆಪ್ಕಾ ಮೂಸೆ ವಾಲಾ ಹೋಗಾ ಜಿ.ಬಿ ಎಲ್.ಬಿ ( ಸಲೀಂ ಖಾನ್, ಸಲ್ಮಾನ್ ಖಾನ್ ಆದಷ್ಟು ಬೇಗ ನಿಮಗೂ ಮೂಸೆ ವಾಲಾಗೆ ಆದಂತೆ ಆಗಲಿದೆ). ಈ ಪತ್ರದಲ್ಲಿ ಜಿ.ಬಿ ಮತ್ತು ಎಲ್.ಬಿ ಎಂದು ಬರೆದಿರುವುದು ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಎಂಬುದನ್ನು ಹೇಳುತ್ತದೆ ಎಂದು ಶಂಕಿಸಿದ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ
Sidhu Moose Wala murder ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಆರೋಪಿ, ತಲೆಮರೆಸಿಕೊಂಡಿದ್ದ ಶೂಟರ್ ಮಹಾಕಾಲ್ ಬಂಧನ
Sidhu Moosewala murder ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಸೆಲ್ಫಿ ಕ್ಲಿಕ್ಕಿಸಿದ್ದ ಅಭಿಮಾನಿ ಸೇರಿ 8 ಮಂದಿ ಬಂಧನ
Salman Khan Net Worth: ಸಲ್ಮಾನ್ ಖಾನ್​ ಸಂಭಾವನೆ, ಒಟ್ಟೂ ಆಸ್ತಿ ಎಷ್ಟು? ಅಬ್ಬಬ್ಬಾ ಇಷ್ಟೊಂದಾ?
Sidhu Moose Wala Murder: ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ; ನಾವೇ ಕೊಲೆ ಮಾಡಿದ್ದು ಎಂದ ಗ್ಯಾಂಗ್​ಸ್ಟರ್ ಬಿಷ್ಣೋಯ್

ಮೇ 29 ರಂದು ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಗ್ಯಾಂಗ್​​ಸ್ಟರ್​​​ ಲಾರೆನ್ಸ್ ಬಿಷ್ಣೋಯ್ ಅವರು ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಈತನನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಗೆ ಸಂಬಂಧಿಸಿದಂತೆ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮೂಸೆ ವಾಲಾ ಹತ್ಯೆಯಲ್ಲಿ ಆತನ ಸಹಚರರ ಹೆಸರುಗಳು, ಗಾಯಕನೊಂದಿಗೆ ತನಗೆ ತೀವ್ರ ಪೈಪೋಟಿ ಇದೆ ಎಂದು ಅವನು ಒಪ್ಪಿಕೊಂಡಿದ್ದಾನೆ” ಎಂದು ಹೆಸರು ಹೇಳಲು ನಿರಾಕರಿಸಿರುವ ದೆಹಲಿ ಪೊಲೀಸ್ ಹೇಳಿದ್ದಾರೆ.

ಇದೀಗ ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ತಂಡ ಇಲ್ಲಿಗೆ ಬಂದಿದೆ. ಇದು ಮುಂಬೈ ಪೊಲೀಸರಿಗೆ ಸಂಬಂಧಿಸಿದ ಪ್ರಕರಣವಾಗಿದೆ. ಆದ್ದರಿಂದ ಅವರು ನಮ್ಮ ಘಟಕದೊಂದಿಗೆ ಜಂಟಿಯಾಗಿ ಪ್ರಕರಣದಲ್ಲಿ ಬಿಷ್ಣೋಯ್ ಅವರನ್ನು ವಿಚಾರಣೆ ನಡೆಸುತ್ತಾರೆ ಎಂದು ಅವರು ಹೇಳಿದ್ದಾರೆ.

ಸಿಧು ಮೂಸೆ ವಾಲಾ ಹತ್ಯೆಯ ನಂತರ ಪೊಲೀಸರು ಈ ಘಟನೆಯನ್ನು ಗ್ಯಾಂಗ್ ನಡುವಿನ ಪೈಪೋಟಿಯ ಪ್ರಕರಣ ಎಂದು ಹೇಳಿದ್ದಾರೆ. ಕೊಲೆಯ ಹಿಂದೆ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದು ಹೇಳಲಾಗಿದೆ. ಬಿಷ್ಣೋಯ್ ಗ್ಯಾಂಗ್ ಸದಸ್ಯ ಕೆನಡಾ ಮೂಲದ ಗೋಲ್ಡಿ ಬ್ರಾರ್ ಕೊಲೆಯ ಹೊಣೆ ಹೊತ್ತುಕೊಂಡಿದ್ದಾನೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ