Mumbai: ಸಿಗ್ನಲ್ ಜಂಪ್ ಮಾಡಿದ್ರು ಎಂದು ತಡೆದಿದ್ದಕ್ಕೆ, ಟ್ರಾಫಿಕ್ ಪೊಲೀಸ್​ ಮೇಲೆ ಹಲ್ಲೆ ನಡೆಸಿದ ಯುವಕರು

|

Updated on: Mar 13, 2023 | 11:53 AM

ಸಿಗ್ನಲ್ ಜಂಪ್ ಮಾಡಿದ್ದಕ್ಕೆ ತಡೆದ ಟ್ರಾಫಿಕ್ ಪೊಲೀಸ್​ರನ್ನು ಇಬ್ಬರು ಯುವಕರು ಥಳಿಸಿರುವ ಘಟನೆ ಮುಂಬೈನ ಕುರ್ಲಾ ಪ್ರದೇಶದಲ್ಲಿ ನಡೆದಿದೆ.

Mumbai: ಸಿಗ್ನಲ್ ಜಂಪ್ ಮಾಡಿದ್ರು ಎಂದು ತಡೆದಿದ್ದಕ್ಕೆ, ಟ್ರಾಫಿಕ್ ಪೊಲೀಸ್​ ಮೇಲೆ ಹಲ್ಲೆ ನಡೆಸಿದ ಯುವಕರು
ಟ್ರಾಫಿಕ್ ಪೊಲೀಸ್
Image Credit source: India Tv News
Follow us on

ಸಿಗ್ನಲ್ ಜಂಪ್ ಮಾಡಿದ್ದಕ್ಕೆ ತಡೆದ ಟ್ರಾಫಿಕ್ ಪೊಲೀಸ್​ರನ್ನು ಇಬ್ಬರು ಯುವಕರು ಥಳಿಸಿರುವ ಘಟನೆ ಮುಂಬೈನ ಕುರ್ಲಾ ಪ್ರದೇಶದಲ್ಲಿ ನಡೆದಿದೆ. ಕುರ್ಲಾ ಪೊಲೀಸ್ ಅಧಿಕಾರಿಗಳ ಪ್ರಕಾರ, 36 ವರ್ಷದ ರಾಕೇಶ್ ರಮೇಶ್ ಠಾಕೂರ್ ಅವರು ಶನಿವಾರ ಸಂಜೆ ಕುರ್ಲಾ ಪಶ್ಚಿಮದ ಎಲ್‌ಬಿಎಸ್ ರಸ್ತೆಯ ಕುರ್ಲಾ ಡಿಪೋ ಸಿಗ್ನಲ್ ಬಳಿ ಕರ್ತವ್ಯದಲ್ಲಿದ್ದರು. ಸವಾರರು ಸಿಗ್ನಲ್ ಜಂಪ್ ಮಾಡಿದ್ದರು ಹೆಲ್ಮೆಟ್ ಕೂಡ ಧರಿಸಿರದ ಕಾರಣ ಕುರ್ಲಾ ಡಿಪೋ ಬಳಿ ಠಾಕೂರ್ ಬೈಕ್ ನಿಲ್ಲಿಸಿದ್ದರು.

ಇಬ್ಬರೂ ಪೊಲೀಸರ ಬಳಿ ಜಗಳ ಶುರು ಮಾಡಿದ್ದರು, ಇ-ಚಲನ್ ಮೂಲಕ ದಂಡ ವಿಧಿಸಬೇಡಿ ಎಂದು ಒತ್ತಾಯಿಸಿದರು.
ಠಾಕೂರ್ ಅವರು ಇ-ಚಲನ್ ಸಾಧನದಲ್ಲಿ ಅವರ ಚಿತ್ರವನ್ನು ಕ್ಲಿಕ್ ಮಾಡಿದಾಗ, ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಯೇ ನಿಲ್ಲಿಸಿದ್ದ ಬೈಕ್ ಮೇಲೆ ಅವರನ್ನು ತಳ್ಳಿದ್ದಾರೆ, ಅದೃಷ್ಟವಶಾತ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಹಿರಿಯ ಪೊಲೀಸ್ ಇನ್​ಸ್ಪೆಕ್ಟರ್ ರವೀಂದ್ರ ಹೂವಾಲೆ ತಿಳಿಸಿದ್ದಾರೆ.

ಮತ್ತಷ್ಟು ಓದಿ:Traffic Fine Rebate: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ಇನ್ನೂ 15 ದಿನ ಅವಕಾಶ

ಠಾಕೂರ್ ತಕ್ಷಣವೇ ಕುರ್ಲಾ ಪೊಲೀಸರನ್ನು ಸಂಪರ್ಕಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಓರ್ವನನ್ನು ಬಂಧಿಸಲಾಗಿದೆ.

ಆರೋಪಿಯನ್ನು ಮಾಹಿಮ್ ನಿವಾಸಿ ಖಾಲಿದ್ ಐಸಾಕ್ ವಸಿಕರ್ (53) ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಾಗಿ ಶೋಧ ನಡೆಯುತ್ತಿದೆ. ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಸೆಕ್ಷನ್ 353, 332, 504ರಡಿ ಪ್ರಕರಣ ದಾಖಲಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ