ಮುಂಬೈ: ಮುಂಬೈನಲ್ಲಿ ಹಲವಾರು ಮಹಿಳೆಯರು ರಸ್ತೆಗಿಳಿದು ಮದ್ಯವ್ಯಸನಿಗಳನ್ನು ರಸ್ತೆಯಲ್ಲಿ ಥಳಿಸಿದ್ದಾರೆ. ಮಹಿಳೆಯರು ರಸ್ತೆಗಳಲ್ಲಿ ನಿರಂತರವಾಗಿ ಕಂಡುಬರುವ ಕುಡುಕರ ಕಾಟದಿಂದ ಬೇಸತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ ಅವರು ರಸ್ತೆಯಲ್ಲಿ ಕುಡಿದು ಓಡಾಡುತ್ತಿದ್ದವರಿಗೆ ಪೊರಕೆ ಪೂಜೆ ಮಾಡಿದ್ದಾರೆ.
ಈ ಮಹಿಳೆಯರು ರಸ್ತೆಗಿಳಿಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಜನರ ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಿಳೆಯರನ್ನು ಹಲವರು ಶ್ಲಾಘಿಸುತ್ತಿದ್ದಾರೆ. ಈ ಘಟನೆಯು ಮುಂಬೈನ ಲಾಲ್ಜಿ ಪದಾ, ಕಂಡಿವಲಿಯಲ್ಲಿ ನಡೆದಿದೆ. ಕುಡಿತದ ಚಟ ಮತ್ತು ಸಾರ್ವಜನಿಕರ ಕಿರುಕುಳದಿಂದ ಹತಾಶರಾದ ಈ ಮಹಿಳೆಯರು ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಮದ್ಯ ಸೇವಿಸುವ ಪುರುಷರನ್ನು ಎದುರಿಸಲು ನಿರ್ಧರಿಸಿದರು. ಆ ಮೂಲಕ ಅವರನ್ನು ಥಳಿಸಲು ನಿರ್ಧರಿಸಿದರು.
Housewives thrashed alcoholics consuming liquor on the street of Lalji Pada in Kandivali, Mumbai
pic.twitter.com/IcsdEPqcS5— Ghar Ke Kalesh (@gharkekalesh) August 25, 2024
ಇದನ್ನೂ ಓದಿ: Shocking Video: ದೇವಸ್ಥಾನದೊಳಗೆ ಅಶ್ಲೀಲ ಚಿತ್ರ ನೋಡುತ್ತಾ ಹಸ್ತಮೈಥುನ ಮಾಡಿಕೊಂಡ ಯುವಕ; ಶಾಕಿಂಗ್ ವಿಡಿಯೋ ವೈರಲ್
ಈ ವಿಡಿಯೋದಲ್ಲಿ ಮಹಿಳೆಯರ ಗುಂಪೊಂದು ಕೈಯಲ್ಲಿ ಪೊರಕೆ ಹಿಡಿದು ಮದ್ಯವ್ಯಸನಿಗಳತ್ತ ಸಾಗುತ್ತಿರುವುದನ್ನು ಕಾಣಬಹುದು. ಮದ್ಯಪಾನ ಮಾಡುತ್ತಿದ್ದವರನ್ನು ಕಂಡ ಕೂಡಲೇ ಪೊರಕೆಯಿಂದ ಥಳಿಸಿ ಆ ಜಾಗ ಬಿಟ್ಟು ಹೋಗುವಂತೆ ಮಾಡುತ್ತಾರೆ.
ಈ ವೀಡಿಯೊವನ್ನು ಆಗಸ್ಟ್ 24ರಂದು ಹಂಚಿಕೊಳ್ಳಲಾಗಿದೆ. ಇದನ್ನು ಪೋಸ್ಟ್ ಮಾಡಿದ ನಂತರ, ಇದು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸುಮಾರು 8,000 ಲೈಕ್‌ಗಳನ್ನು ಪಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Mon, 26 August 24