ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ಸಂಭ್ರಮ ಆಚರಿಸಿದ ಮುಸ್ಲಿಂ ಯುವಕನ ಹತ್ಯೆ; ತನಿಖೆಗೆ ಸಿಎಂ ಯೋಗಿ ಆದೇಶ
ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ವಿಜಯೋತ್ಸವ ಆಚರಿಸಿದ್ದಕ್ಕಾಗಿ ಉತ್ತರ ಪ್ರದೇಶದಲ್ಲಿ 25 ವರ್ಷದ ಮುಸ್ಲಿಂ ವ್ಯಕ್ತಿ ಬಾಬರ್ ಅಲಿ ಎಂಬುವವರನ್ನು ಆತನ ನೆರೆಹೊರೆಯವರು ಥಳಿಸಿ, ಕೊಲೆ ಮಾಡಿದ್ದಾರೆ.
ಲಕ್ನೋ: ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಕ್ಕೆ ಹಾಗೂ ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (UP Assembly Elections) ಬಿಜೆಪಿ ಗೆದ್ದಿದ್ದಕ್ಕೆ ವಿಜಯೋತ್ಸವ ಆಚರಿಸಿದ್ದಕ್ಕಾಗಿ ಉತ್ತರ ಪ್ರದೇಶದ ಖುಷಿನಗರದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಈ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತನಿಖೆಗೆ ಆದೇಶಿಸಿದ್ದಾರೆ. ಮಾರ್ಚ್ 20ರಂದು ಕಥರ್‌ಗರ್ಹಿಯಲ್ಲಿ ಬಾಬರ್ ಅಲಿಯನ್ನು ಥಳಿಸಲಾಯಿತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಭಾನುವಾರ ಅವರ ಮೃತದೇಹವನ್ನು ಅವರ ಗ್ರಾಮಕ್ಕೆ ಕೊಂಡೊಯ್ಯಿದಾಗ, ಅವರ ಕುಟುಂಬದವರು ಆತನ ಅಂತ್ಯಕ್ರಿಯೆಯನ್ನು ಮಾಡಲು ನಿರಾಕರಿಸಿದ್ದಾರೆ. ಆತನನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವವರೆಗೂ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ವಿಜಯೋತ್ಸವ ಆಚರಿಸಿದ್ದಕ್ಕಾಗಿ ಉತ್ತರ ಪ್ರದೇಶದ ಖುಶಿನಗರ ಜಿಲ್ಲೆಯಲ್ಲಿ 25 ವರ್ಷದ ಮುಸ್ಲಿಂ ವ್ಯಕ್ತಿ ಬಾಬರ್ ಅಲಿ ಎಂಬುವವರನ್ನು ಆತನ ನೆರೆಹೊರೆಯವರು ಥಳಿಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
#UPCM श्री @myogiadityanath जी ने कुशीनगर के कठघरही गांव के श्री बाबर जी की लोगों द्वारा पिटाई से हुई मौत पर गहरा शोक व्यक्त किया है।
मुख्यमंत्री जी ने शोक संतप्त परिजनों के प्रति संवेदना व्यक्त की है।
उन्होंने मामले की गहनता से निष्पक्ष जांच हेतु अधिकारियों को निर्देश दिए हैं।
— CM Office, GoUP (@CMOfficeUP) March 27, 2022
ಬಾಬರ್‌ನ ಕುಟುಂಬದ ಪ್ರಕಾರ, ಬಾಬರ್ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದ ಕಾರಣ ಅವರ ನೆರೆಹೊರೆಯವರು ಅಸಮಾಧಾನಗೊಂಡಿದ್ದರು. ಮಾರ್ಚ್ 10ರಂದು ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಇದರಿಂದ ಬಾಬರ್ ತನ್ನ ಊರಿನ ಸುತ್ತಮುತ್ತ ಸಿಹಿ ಹಂಚಿದ್ದರು ಎಂದು ಅವರ ಕುಟುಂಬ ಮಾಹಿತಿ ನೀಡಿದೆ. ಬಿಜೆಪಿಯನ್ನು ಬೆಂಬಲಿಸದಿರುವ ಬಗ್ಗೆ ಅವರ ನೆರೆಹೊರೆಯವರು ಆತನಿಗೆ ಪದೇಪದೆ ಎಚ್ಚರಿಕೆ ನೀಡಿದ್ದರು ಎಂದು ಕುಟುಂಬ ಹೇಳಿಕೊಂಡಿದೆ.
ಮುಸ್ಲಿಂ ಯುವಕನ ಹತ್ಯೆಯನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ಖಂಡಿಸಿದ್ದಾರೆ. ಬಾಬರ್ ಅವರ ಹತ್ಯೆಗೆ ಸಿಎಂ ಯೋಗಿ ಆದಿತ್ಯನಾಥ್ ಟ್ವಿಟ್ಟರ್ನಲ್ಲಿ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಏಕೈಕ ಸಚಿವ ಇವರು; ಕಳೆದ ಬಾರಿ ಇದ್ದವರಿಗಿಲ್ಲ ಸ್ಥಾನ
21 ಸಚಿವರನ್ನು ಉಳಿಸಿ 22 ಸಚಿವರನ್ನು ಕೈ ಬಿಟ್ಟ ಯೋಗಿ ಆದಿತ್ಯನಾಥ; ಸಚಿವ ಸಂಪುಟದಲ್ಲಿ 31 ಹೊಸಬರು, ಐವರು ಮಹಿಳೆಯರು
Published On - 3:42 pm, Mon, 28 March 22