My India My Life Goals: ‘ಮೈ ಇಂಡಿಯಾ ಮೈ ಲೈಫ್ ಗೋಲ್ಸ್‘ ಯೋಜನೆಗೆ ಸೆಲಿಬ್ರಿಟಿಗಳ ಸಾಥ್

ಟಿವಿ 9 ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ‘ಮೈ ಇಂಡಿಯಾ ಮೈ ಲೈಫ್ ಗೋಲ್ಸ್‘ ಯೋಜನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸೆಲಿಬ್ರಿಟಿಗಳು ಸಾಥ್ ನೀಡಿದ್ದಾರೆ. ಹಾಗಾದರೆ ಅವರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ.

My India My Life Goals: ‘ಮೈ ಇಂಡಿಯಾ ಮೈ ಲೈಫ್ ಗೋಲ್ಸ್‘ ಯೋಜನೆಗೆ ಸೆಲಿಬ್ರಿಟಿಗಳ ಸಾಥ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 24, 2023 | 4:12 PM

ಪ್ರಕೃತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಯೋಜನೆ ಮಾಡಿರುವ, ‘ಮೈ ಇಂಡಿಯಾ ಮೈ ಲೈಫ್ ಗೋಲ್ಸ್‘ (My India My Life Goals) ಎಂಬ ವಿಶೇಷ ಕಾರ್ಯಕ್ರಮ ಟಿವಿ 9 ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದ್ದು ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಜೊತೆಗೆ ಸ್ವಚ್ಛ ಮತ್ತು ಮಾಲಿನ್ಯರಹಿತ ಪರಿಸರಕ್ಕಾಗಿ ಕೆಲ ಸೆಲಿಬ್ರಿಟಿಗಳು ತಮ್ಮ ತಮ್ಮ ಕೊಡುಗೆಗಳನ್ನು ನೀಡುವುದರ ಜೊತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದು ಮತ್ತೊಬ್ಬರಿಗೆ ಪ್ರೇರಣೆ ಯಾಗುವುದರಲ್ಲಿ ಸಂಶಯವೇ ಇಲ್ಲ. ಅಂತಹ ಸೆಲಿಬ್ರಿಟಿಗಳು ನೀಡಿದ ಕೆಲವು ಸಲಹೆಗಳು ಇಲ್ಲಿದೆ.

ಪರಿಸರವನ್ನು ಮಾಲಿನ್ಯ ಮುಕ್ತವಾಗಿಸುವ ಸಮಯ ಬಂದಿದೆ : ಅಭಿಮನ್ಯು ಸಿಂಗ್

ಪಂಚಭಾಷಾ ನಟರಾಗಿರುವ ಅಭಿಮನ್ಯು ಸಿಂಗ್ ಅವರು ಮಾಲಿನ್ಯರಹಿತ ಪರಿಸರದ ಬಗ್ಗೆ ಮಾತನಾಡಿದ್ದು ಅವರು ಅನುಸರಿಸುವ ಕ್ರಮಗಳನ್ನು ಹಂಚಿಕೊಂಡಿದ್ದಾರೆ. “ನಮ್ಮ ಪರಿಸರವನ್ನು ಸ್ವಚ್ಛ ಮತ್ತು ಸುರಕ್ಷಿತವಾಗಿರಿಸಲು ನಾನು ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ. ಎರಡನೇಯದಾಗಿ ನನಗೆ ಯಾವಾಗ ಸಮಯ ಸಿಗುತ್ತದೆಯೋ ಆಗ ಆದಷ್ಟು ಗಿಡಗಳನ್ನು ನೇಡುತ್ತೇನೆ. ಮೂರನೇಯದಾಗಿ ನನ್ನ ಗೆಳೆಯರು ತಮ್ಮ ವಾಹನದ ಹೊಗೆ ತಪಾಸಣೆ (ಎಮಿಶನ್ ಟೆಸ್ಟ್) ಮಾಡಿಸದೇ ಇದ್ದಲ್ಲಿ ಕೂಡಲೇ ಅವರಿಗೆ ಮಾಡಲು ತಿಳಿಸುತ್ತೆನೆ. ಏಕೆಂದರೆ ವಾಹನಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಪರಿಸರವನ್ನು ಮಾಲಿನ್ಯ ಮುಕ್ತ ವಾಗಿಸುವ ಸಮಯ ಬಂದಿದ್ದು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದ್ದಾರೆ.

ಯಾರು ಸಂಗೀತದ ಪ್ರೇಮಿಯಾಗಿರುತ್ತಾರೋ ಅವರು ಪ್ರಕೃತಿಯನ್ನೂ ಪ್ರೇಮಿಸುತ್ತಾರೆ: ಅನೂಪ್ ಜಲೋಟಾ

ಗಾಯಕ, ಸಂಗೀತಗಾರ ಮತ್ತು ನಟರಾಗಿ ಗುರುತಿಸಿಕೊಂಡಿರುವ ಅನೂಪ್ ಜಲೋಟಾ ತಮ್ಮ ಪರಿಸರ ಪ್ರೇಮವನ್ನು ಮಾವಿನ ಮರ ಬೆಳೆದ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. “ಯಾರು ಸಂಗೀತದ ಪ್ರೇಮಿಯಾಗಿರುತ್ತಾರೋ ಅವರು ಪ್ರಕೃತಿಯನ್ನೂ ಪ್ರೇಮಿಸುತ್ತಾರೆ. ನಾವು ನೀವೆಲ್ಲರೂ ಅಷ್ಟೇ ಹಸಿರನ್ನು ಪ್ರೀತಿಸಬೇಕು ಎಂದು ನಾನು ಬಯಸುತ್ತೇನೆ. ಸಂಗೀತವನ್ನು ಪ್ರೀತಿಸುವಂತೆ ಪ್ರೀತಿಸಬೇಕು. ನನಗೆ ಈಗಲೂ ನೆನಪಿದೇ 25 ವರ್ಷಗಳ ಹಿಂದೆ ನಮ್ಮ ಮನೆಯ ಕೆಳಗೆ ಮಾವಿನ ಸಸಿಯೊಂದನ್ನು ನೆಟ್ಟಿದ್ದೆ, ಇಂದು ಮೂರನೇ ಮಹಡಿಯಲ್ಲಿ ನಿಂತು ಮಾವಿನ ರುಚಿಯನ್ನು ಸವಿಯುತ್ತಿದ್ದೇನೆ. ನಿಮ್ಮ ಜೀವನದಲ್ಲಿಯೂ ಈ ರೀತಿಯ ಆನಂದವನ್ನು ಆಸ್ವಾದಿಸುವಂತಾಗಲಿ ಎಂದಿದ್ದಾರೆ.

ಗಾಳಿಯೇ ಗುರು, ಜಲಜೀವವೇ ತಂದೆ, ಭೂಮಿಯೇ ಮಹಾತಾಯಿ : ಅಶೋಕ್ ಮಸ್ತಿ

ಪಂಜಾಬಿನ ಖ್ಯಾತ ಹಿನ್ನೆಲೆ ಗಾಯಕ ಅಶೋಕ್ ಮಸ್ತಿ ನಮ್ಮೆಲ್ಲರಿಗೆ ಚಿರಪರಿಚಿತ. ಅವರು ತಮ್ಮ ಪರಿಸರ ಪ್ರೀತಿಯನ್ನು ಒಂದು ಯುಕ್ತಿಯ ಮೂಲಕ ತಿಳಿಸಿದ್ದಾರೆ “ಪವನ ಗುರು ಪಾನಿ ಪಿತಾಮಹ ಧರಹಾ ಮಹಾ ಅಂದರೆ ಗಾಳಿಯೇ ಗುರು, ಜಲಜೀವವೇ ತಂದೆ, ಭೂಮಿಯೇ ಮಹಾತಾಯಿ. ಗುರುವಾಣಿಯಲ್ಲಿ ಗುರುನಾನಕರು ಈ ಭೂಮಿಯನ್ನು ರಕ್ಷಿಸಲು, ನೀರನ್ನು ಕಾಪಾಡಲು, ಗಾಳಿಯನ್ನು ಶುದ್ಧವಾಗಿಡಲು ಸಂದೇಶ ನೀಡಿದ್ದಾರೆ. ನನ್ನ ಜನ್ಮ ಪಂಜಾಬಿನಲ್ಲಿ ಆಗಿರುವುದರಿಂದ ಈ ಮಾತು ನನಗೆ ಮೊದಲಿನಿಂದಲೂ ನೆನಪಿದೆ” ಎನ್ನುತ್ತಾರೆ ಅಶೋಕ್. ಹಾಗಾದರೆ ಯಾವ ರೀತಿಯಲ್ಲಿ ನಮ್ಮ ಪರಿಸರವನ್ನು ಕಾಪಾಡಬಹುದು ಎಂಬುದಕ್ಕೆ ಅವರು ಕೆಲವು ಸರಳ ಸಲಹೆಗಳನ್ನು ನೀಡಿದ್ದಾರೆ. ಅದೇನೆಂದರೆ “ನೀರನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ, ಜೊತೆಗೆ ಯಾವಾಗ ತಾವು ಸಂಪೂರ್ಣವಾಗಿ ಎಸಿ ಮೊರೆ ಹೋಗುತ್ತಿರೋ ಅದು ಒಳ್ಳೆಯದಲ್ಲ. ಎಸಿ ಇಲ್ಲದೆ ನಿದ್ದೆಯೇ ಬರುವುದಿಲ್ಲ ಎಂಬ ಸ್ಥಿತಿ ಎಂದಿಗೂ ಬರಬಾರದು. ಪರಿಸರವನ್ನು ಕಾಪಾಡಲು ಬಹಳಷ್ಟು ದಾರಿ ಇದೆ. ನಮ್ಮ ಪರಿಸರವನ್ನು ನಾವು ಕಾಪಾಡಿಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ಅತ್ಯುತ್ತಮ ವಾತಾವರಣ ಕಲ್ಪಿಸಿಕೊಡಬಹುದು”. ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: ಹೊಸ ತಂತ್ರಜ್ಞಾನ ಬಳಸಿಕೊಂಡು ನಮ್ಮ ಭೂಮಿಯನ್ನು ಹಚ್ಚ ಹಸುರಿನಿಂದ ಕಂಗೊಳಿಸುವಂತೆ ಮಾಡಬೇಕಿದೆ: ಸಚಿವ ಭೂಪೇಂದ್ರ ಯಾದವ್

ಸುರಕ್ಷಿತ ಪರಿಸರ ನಿರ್ಮಾಣ ನಮ್ಮದೇ ಜವಾಬ್ದಾರಿ: ಇಶಿಕಾ ತನೇಜಾ

ನಟಿಯಾಗಿ ಗುರುತಿಸಿಕೊಂಡಿರುವ ಇಶಿಕಾ ತನೇಜಾ, “ನಾನು ಈ ಪರಿಸರ ಕಾಪಾಡಲು ಚರ್ಮ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಅತೀ ಕಡಿಮೆ ಬಳಸಲು ಆರಂಭಿಸಿದ್ದೇನೆ” ಎಂದಿದ್ದಾರೆ. ಈಗಿನ ಜನತೆಗೆ ಅವರು ಕೆಲವು ಸಲಹೆ ನೀಡಿದ್ದು, “ನನಗೆ ಅನಿಸುವ ಪ್ರಕಾರ ಸಾಕಷ್ಟು ನೈಸರ್ಗಿಕ ವಸ್ತುಗಳೇ ನಮ್ಮ ಮುಂದೆ ಇದೆ. ಉದಾಹರಣೆಗೆ ಉಣ್ಣೆ, ಖಾದಿ ಅಹಿಂಸಾ ಸಿಲ್ಕ್ ಗಳು ಲಭ್ಯವಿದೆ. ಇವು ಈಗಿನ ಫ್ಯಾಷನಿಗೂ ಹೊಂದಿಕೊಳ್ಳುತ್ತವೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರು ಇದೊಂದು ವೆಚ್ಚ ಅನ್ನುವುದಕ್ಕಿಂತ ಇನ್ವೆಸ್ಟ್ಮೆಂಟ್ ಅಂತ ಕರೆಯಬಹುದು. ನಿಮಗೆ ಮತ್ತು ನಮ್ಮ ಭೂಮಿಗೆ ಒಳಿತನ್ನೇ ಮಾಡುತ್ತದೆ. ಫ್ಯಾಷನ್ ಹೆಸರಲ್ಲಿ ನಾವು ಯಾವುದೇ ಯೋಚನೆ ಮಾಡದೆಯೇ ಪರಿಸರದಲ್ಲಿ ಕರಗದ ತ್ಯಾಜ್ಯಗಳನ್ನು ಸುರಿಯುತ್ತಲೇ ಇದ್ದೇವೆ. ಹಾಗಾಗಿ ಬೇರೆ ಯಾರೋ ಬರುತ್ತಾರೆ ನಮ್ಮ ಪರಿಸರವನ್ನು ಕಾಪಾಡುತ್ತಾರೆ ಎಂದು ಅಂದುಕೊಂಡಿದ್ದೇವೆ ಆದರೆ ಸುರಕ್ಷಿತ ಪರಿಸರ ನಿರ್ಮಾಣ ನಮ್ಮದೇ ಜವಾಬ್ಧಾರಿ” ಎನ್ನುವುದು ಇಶಿಕಾ ಅಭಿಪ್ರಾಯ.

ಮೈ ಇಂಡಿಯಾ ಮೈ ಲೈಫ್ ಗೋಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:49 pm, Tue, 18 July 23

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್