ನಾಗಾಲ್ಯಾಂಡ್: ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ; ಇದು ಕ್ರೈಸ್ತರ ರಾಜ್ಯಕ್ಕಾದ ಅವಮಾನ ಎಂದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ

| Updated By: ರಶ್ಮಿ ಕಲ್ಲಕಟ್ಟ

Updated on: Mar 23, 2022 | 10:33 PM

ಜನಪ್ರಿಯ ಮಾಧ್ಯಮವಾದ ನಾಗಾಲ್ಯಾಂಡ್ ಪೇಜ್‌ನಲ್ಲಿನ ವರದಿಯ ಪ್ರಕಾರ, ಕೊನ್ಯಾಕ್ ಅವರನ್ನು ಆಯ್ಕೆ ಮಾಡಿದ 60 ಶಾಸಕರು ಕ್ರಿಶ್ಚಿಯನ್ ಮತಗಳನ್ನು "ಅವಮಾನಿಸಿದ್ದಾರೆ" ಮತ್ತು "ಪ್ರತಿ ಕ್ರಿಶ್ಚಿಯನ್ ಮತ್ತು ಕ್ರಿಶ್ಚಿಯನ್ ರಾಜ್ಯದ ಇಮೇಜ್ ಅನ್ನು ನಾಶಪಡಿಸಿದ್ದಾರೆ" ಎಂದು ಥೆರಿ ಹೇಳಿದ್ದಾರೆ.

ನಾಗಾಲ್ಯಾಂಡ್: ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ; ಇದು ಕ್ರೈಸ್ತರ ರಾಜ್ಯಕ್ಕಾದ ಅವಮಾನ ಎಂದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ
ಎಸ್ ಫಾಂಗ್ನಾನ್ ಕೊನ್ಯಾಕ್
Follow us on

ಈ ವಾರದ ಆರಂಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ ಎಸ್ ಫಾಂಗ್ನಾನ್ ಕೊನ್ಯಾಕ್ ( S Phangnon Konyak) ಅವರು ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಕೊನ್ಯಾಕ್ ನಾಗಾಲ್ಯಾಂಡ್​ನ(
Nagaland) ಮೊದಲ ಮಹಿಳಾ ರಾಜ್ಯಸಭಾ ಸಂಸದೆಯಾಗಿದ್ದಾರೆ. ಕೊನ್ಯಾಕ್ ನಾಗಾಲ್ಯಾಂಡ್‌ನ ಎರಡನೇ ಮಹಿಳಾ ಸಂಸದೆ ಮೊದಲನೆಯವರು ರಾನೊ ಎಂ ಶೈಜಾ. ಶೈಜಾ ಅವರು 1977 ರಲ್ಲಿ ರಾಜ್ಯದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. ನಾಗಾಲ್ಯಾಂಡ್‌ಗೆ 1963 ರಲ್ಲಿ ರಾಜ್ಯ ಸ್ಥಾನಮಾನ ದೊರೆತಾಗಿನಿಂದ ಒಬ್ಬರೇ ಒಬ್ಬರು ಮಹಿಳಾ ಶಾಸಕಿ ಇರಲಿಲ್ಲ. ಕೊನ್ಯಾಕ್ ಅವರ ಆಯ್ಕೆಯನ್ನು ದೇಶದಾದ್ಯಂತ ಮಹಿಳಾ ಗುಂಪುಗಳು ಮತ್ತು ಎಲ್ಲಾ ಬಲಪಂಥೀಯ ಚಿಂತನೆಯ ನಾಗರಿಕರು ಶ್ಲಾಘಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅವರು ರಾಜ್ಯ ಅಸೆಂಬ್ಲಿಯಲ್ಲಿ ಎಲ್ಲಾ 60 ಶಾಸಕರಿಂದ ಸರ್ವಾನುಮತದ ಆಯ್ಕೆಯಾಗಿದ್ದರು.  ಆದರೆ ನಾಗಾಲ್ಯಾಂಡ್ ಪ್ರದೇಶ ಕಾಂಗ್ರೆಸ್ ಸಮಿತಿ (NPCC) ಮುಖ್ಯಸ್ಥ ಕೆವೆಖಾಪೆ ಥೆರಿ ಬಿಜೆಪಿ ಕಾರ್ಯಾಧ್ಯಕ್ಷರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದಕ್ಕೆ ಕೊಂಕು ನುಡಿದಿದ್ದಾರೆ. ಜನಪ್ರಿಯ ಮಾಧ್ಯಮವಾದ ನಾಗಾಲ್ಯಾಂಡ್ ಪೇಜ್‌ನಲ್ಲಿನ ವರದಿಯ ಪ್ರಕಾರ, ಕೊನ್ಯಾಕ್ ಅವರನ್ನು ಆಯ್ಕೆ ಮಾಡಿದ 60 ಶಾಸಕರು ಕ್ರಿಶ್ಚಿಯನ್ ಮತಗಳನ್ನು “ಅವಮಾನಿಸಿದ್ದಾರೆ” ಮತ್ತು “ಪ್ರತಿ ಕ್ರಿಶ್ಚಿಯನ್ ಮತ್ತು ಕ್ರಿಶ್ಚಿಯನ್ ರಾಜ್ಯದ ಇಮೇಜ್ ಅನ್ನು ನಾಶಪಡಿಸಿದ್ದಾರೆ” ಎಂದು ಥೆರಿ ಹೇಳಿದ್ದಾರೆ.

ಹಿರಿಯ ರಾಜಕಾರಣಿಗಳು ಮತ್ತು ನಾಗರಿಕ ಸಮಾಜದ ಮುಖಂಡರು ಸೇರಿದಂತೆ ಅನೇಕ ನಾಗಾಗಳು ರಾಜ್ಯವನ್ನು ‘ಕ್ರಿಶ್ಚಿಯನ್ ರಾಜ್ಯ’ ಎಂದು ಉಲ್ಲೇಖಿಸುತ್ತಾರೆ.ಏಕೆಂದರೆ ಇಲ್ಲಿ ಬಹುಪಾಲು ನಾಗಾಗಳು ಕ್ರಿಶ್ಚಿಯನ್ನರು. ‘ನಾಗಾಲ್ಯಾಂಡ್ -ಕ್ರೈಸ್ತರ ನಾಡು’ ಗೆ ಭೇಟಿ ನೀಡುವವರನ್ನು ಸ್ವಾಗತಿಸುವ ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳು ದಿಮಾಪುರ್ ಮತ್ತು ಕೊಹಿಮಾದ (ರಾಜ್ಯ ರಾಜಧಾನಿ) ಅನೇಕ ಸ್ಥಳಗಳಲ್ಲಿ ಕಾಣಬಹುದು.
ಬಿಜೆಪಿ ರಾಜ್ಯಸಭಾ ನಾಮನಿರ್ದೇಶಿತರಿಗೆ ಮತ ಹಾಕಿದ 60 ಶಾಸಕರು (ವಾಸ್ತವದಲ್ಲಿ, ಬೇರೆ ಅಭ್ಯರ್ಥಿ ಇಲ್ಲದ ಕಾರಣ ಅವರು ಮತ ಹಾಕಲಿಲ್ಲ) “ನಾಗಲ್ಯಾಂಡ್ ಅನ್ನು ಹಿಂದುತ್ವದ ರಾಜ್ಯವಾಗಿ ಪರಿವರ್ತಿಸಿದ್ದಾರೆ” ಎಂದು ಥೆರಿ ಹೇಳಿದರು. ಅವರು ಬಹುಶಃ ‘ಹಿಂದೂ ರಾಜ್ಯ’ ಎಂದು ಉದ್ದೇಶಿಸಿರಬೇಕು. ಕೊನ್ಯಾಕ್, ಬಹುತೇಕ ಎಲ್ಲಾ ನಾಗಾಗಳಂತೆ, ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ.

ಕ್ರಿಶ್ಚಿಯನ್ ಮತದಾರರಿಂದ ಚುನಾಯಿತರಾದ ಶಾಸಕರು ತಮ್ಮ ಮತದಾರರನ್ನು ಕಡೆಗಣಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದು ಥೆರಿ ಹೇಳಿದ್ದಾರೆ. ನಿರ್ದಿಷ್ಟ ಪರಿಸ್ಥಿತಿಯಲ್ಲಿ ಕ್ರಿಶ್ಚಿಯನ್ ಮತಗಳೊಂದಿಗೆ ಜನರ ಸರ್ಕಾರವು (ರಚಿಸಲ್ಪಟ್ಟಿದೆ).  ಪ್ರತಿಯೊಬ್ಬ ಕ್ರಿಶ್ಚಿಯನ್ನರ ಮತ್ತು ಕ್ರಿಶ್ಚಿಯನ್ ರಾಜ್ಯದ ಘನತೆಯವನ್ನು ಅದು ಅವಮಾನಿಸಿದೆ ಮತ್ತು ನಾಶಪಡಿಸಿದೆ. ಇಂದು ಅವರ ನಿರ್ಧಾರಗಳ ಪ್ರಕಾರ ಎಲ್ಲಾ 60 ಶಾಸಕರು ಬಿಜೆಪಿಗೆ ಮತ ಹಾಕಲು ಹಿಂಜರಿಯಲಿಲ್ಲ, ಹೀಗಾಗಿ ಅವರು ನಾಗಾಲ್ಯಾಂಡ್ ಅನ್ನು ಹಿಂದುತ್ವದ ರಾಜ್ಯ ಸರ್ಕಾರ ಆಗಿ ಪರಿವರ್ತಿಸಿದ್ದಾರೆ ಎಂದು ಥೆರಿ ಅವರು ಸಹಿ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಗಾಗಳು ಕಾಂಗ್ರೆಸ್ ಅನ್ನು ತಿರಸ್ಕರಿಸಿದ ಬಗ್ಗೆ ಥೆರಿ ವಿಷಾದಿಸಿದ್ದರು. ಹಲವು ದಶಕಗಳ ಕಾಲ ರಾಜ್ಯವನ್ನು ಆಳಿದ ಅವರ ಪಕ್ಷವು 60 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಒಬ್ಬನೇ ಒಬ್ಬ ಶಾಸಕರನ್ನು ಹೊಂದಿಲ್ಲ.

ಥೆರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು “ಕಾಂಗ್ರೆಸ್‌ನ ಧ್ವನಿಯನ್ನು ಪದೇ ಪದೇ ಕಡೆಗಣಿಸಲಾಗಿದೆ. ಕ್ರಿಶ್ಚಿಯನ್ನರ ಧ್ವನಿಗಳು ದಮನಿಸಲ್ಪಟ್ಟವು. ನಾವು ಮತ್ತು ನೀವು ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ನಾವು ಸಮಾನ ಮನಸ್ಸಿನ ಪುರುಷರು ಮತ್ತು ಮಹಿಳೆಯರು ಕೈಜೋಡಿಸಿದಾಗ ಮಾತ್ರ ನಾವು ಕ್ರಿಶ್ಚಿಯನ್ ಪ್ರಪಂಚದ ಮುಂದೆ ತಲೆ ಎತ್ತಲು ಸಾಧ್ಯವಾಗುತ್ತದೆ.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು ಕಾಂಗ್ರೆಸ್ ಅನ್ನು ಕ್ರಿಶ್ಚಿಯನ್ನರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಾಗುವ ‘ಕ್ರಿಶ್ಚಿಯನ್ ಪಕ್ಷ’ ಎಂದು ಬಣ್ಣಿಸಿದರು. ಯಾವುದೇ ನಾಗಾ ಕಾಂಗ್ರೆಸ್ ನಾಯಕರಾಗಲೀ ಅಥವಾ ರಾಜ್ಯದ ಹೊರಗಿನ ಯಾವುದೇ ಕಾಂಗ್ರೆಸ್ ನಾಯಕರಾಗಲೀ ಥೆರಿ ಅವರ ಹೇಳಿಕೆಗಳ ವಿರುದ್ಧ ಮಾತನಾಡಿಲ್ಲ. ಪಕ್ಷ ಈ ಹೇಳಿಕೆಯಿಂದ ಅಂತರ ಕಾಪಾಡಿದೆ.

ಇದನ್ನೂ ಓದಿ: ಯಾವುದೇ ಪರಿಸ್ಥಿತಿಯಲ್ಲಿಯೂ ರಾಜೀನಾಮೆ ನೀಡುವುದಿಲ್ಲ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್

Published On - 10:30 pm, Wed, 23 March 22