ದೆಹಲಿ ನವೆಂಬರ್ 14: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ( Smriti Irani) ಅವರು ಆಕಾಶವಾಣಿಗಾಗಿ (Akashvani) ಉದ್ಯಮ, ಕೌಶಲ್ಯ ಅಭಿವೃದ್ಧಿ, ಕ್ರೀಡೆ, ಆರೋಗ್ಯ ಮತ್ತು ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಯಶಸ್ಸನ್ನು ಆಚರಿಸುವ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ವಾರದಲ್ಲಿ ಒಂದು ಗಂಟೆಯ ಕಾರ್ಯಕ್ರಮ ‘ನಯೀ ಸೋಚ್ ನಯೀ ಕಹಾನಿ -ಎ ರೇಡಿಯೋ ಜರ್ನಿ ವಿತ್ ಸ್ಮೃತಿ ಇರಾನಿ’ ಭಾರತದ ಅತಿದೊಡ್ಡ ಪ್ರಸಾರಕ ಆಕಾಶವಾಣಿಯಲ್ಲಿ ಪ್ರತಿ ಬುಧವಾರ ಬೆಳಿಗ್ಗೆ 9 ರಿಂದ 10 ರವರೆಗೆ ಪ್ರಸಾರವಾಗಲಿದೆ.
ಮೊದಲ ಶೋ ನಾಳೆ ಅಂದರೆ ನವೆಂಬರ್ 15 ರಂದು ದೆಹಲಿಯಲ್ಲಿ ಆಕಾಶವಾಣಿ ಗೋಲ್ಡ್ 100.1 MHz ನಲ್ಲಿ ಪ್ರಸಾರವಾಗಲಿದೆ. ಇದನ್ನು ದೇಶಾದ್ಯಂತ ಆಕಾಶವಾಣಿ ಕೇಂದ್ರಗಳು ಪ್ರಸಾರ ಮಾಡುತ್ತವೆ. ಕಾರ್ಯಕ್ರಮವು NewsOnAIR ಅಪ್ಲಿಕೇಶನ್‌ನಲ್ಲಿ, ಆಕಾಶವಾಣಿ ವೆಬ್‌ಸೈಟ್ www.newsonair.gov.in ನಲ್ಲಿ, ಆಕಾಶವಾಣಿ ಯೂಟ್ಯೂಬ್ ಚಾನೆಲ್ @airnewsofficial ಮತ್ತು ಅದರ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಭ್ಯವಿರುತ್ತದೆ.
ಈ ಕಾರ್ಯಕ್ರಮ ಸರ್ಕಾರದ ಉಪಕ್ರಮಗಳ ಸಹಾಯದಿಂದ ಮಹಿಳೆಯರ ಸಬಲೀಕರಣದ ಅದ್ಭುತ ಕಥೆಗಳನ್ನು ಮತ್ತು ಭಾರತದಲ್ಲಿ ಮಹಿಳೆಯರ ಜೀವನವನ್ನು ರೂಪಿಸುವಲ್ಲಿ ಅವರ ಪಾತ್ರವನ್ನು ಸಂಭ್ರಮಿಸುವುದಾಗಿದೆ. ಮೊದಲ ಶೋನಲ್ಲಿ ಸ್ಟಾರ್ಟ್-ಅಪ್‌ಗಳ ಮಹಿಳೆಯರು ಮತ್ತು ಸೆಲ್ಫ್ ಮೇಡ್ ಉದ್ಯಮಿ ಮಹಿಳೆಯರನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿದ್ದಾರೆ: ರಾಹುಲ್ ಗಾಂಧಿ
ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳಲಿದ್ದುತಮ್ಮ ಪ್ರಯತ್ನಗಳಲ್ಲಿ ಸರ್ಕಾರದ ಉಪಕ್ರಮಗಳ ಲಾಭವನ್ನು ಹೇಗೆ ಪಡೆಯುತ್ತಿದ್ದಾರೆ ಎಂಬುದನ್ನು ಹೇಳಲಿದ್ದಾರೆ. ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ವಿವರಿಸುವ ವಿವಿಧ ಕೇಂದ್ರ ಸರ್ಕಾರದ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ