Gaganyaan Mission Astronauts: ಭಾರತದಿಂದ ಹಾರಲಿರುವ ಮೊದಲ ಗಗನಯಾತ್ರಿಗಳು; ಇಂದು ಹೆಸರು ಬಹಿರಂಗಪಡಿಸಲಿದ್ದಾರೆ ಪ್ರಧಾನಿ ಮೋದಿ; ಯಾರವರು ಈ ನಾಲ್ವರು

Names of 4 Indian Astronauts: ಇಸ್ರೋ ನಡೆಸುತ್ತಿರುವ ಐತಿಹಾಸಿಕ ಗಗನಯಾನ ಯೋಜನೆ ಮೂಲಕ ನಾಲ್ವರು ಗಗನಯಾತ್ರಿಕರು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ಇವರ ಹೆಸರು ಅಧಿಕೃತವಾಗಿ ಬಹಿರಂಗಗೊಳ್ಳಲಿದೆ. ಕೇರಳದ ತಿರುವನಂತಪುರಂನಲ್ಲಿನ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್​ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈ ನಾಲ್ವರನ್ನು ಭೇಟಿ ಮಾಡಲಿದ್ದಾರೆ. 12 ಟೆಸ್ಟ್ ಪೈಲಟ್​ಗಳ ಪೈಕಿ ಈ ನಾಲ್ವರು ಆಯ್ಕೆಗೊಂಡಿದ್ದು, ರಷ್ಯಾ ಸೇರಿದಂತೆ ವಿವಿಧೆಡೆ ಕಠಿಣ ತರಬೇತಿ ಪಡೆದಿದ್ದಾರೆ.

Gaganyaan Mission Astronauts: ಭಾರತದಿಂದ ಹಾರಲಿರುವ ಮೊದಲ ಗಗನಯಾತ್ರಿಗಳು; ಇಂದು ಹೆಸರು ಬಹಿರಂಗಪಡಿಸಲಿದ್ದಾರೆ ಪ್ರಧಾನಿ ಮೋದಿ; ಯಾರವರು ಈ ನಾಲ್ವರು
ಗಗನಯಾತ್ರಿ (ಸಾಂದರ್ಭಿಕ ಚಿತ್ರ)
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 27, 2024 | 12:22 PM

ತಿರುವನಂತಪುರಂ, ಫೆಬ್ರುವರಿ 27: ಕೇರಳ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಸ್ರೋ ಗಗನಯಾನ ಯೋಜನೆ ಅಡಿ (ISRO Gaganyaan) ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳು (Indian Astronauts) ಯಾರು ಎಂದು ಇಂದು ಹೆಸರು ಬಹಿರಂಗಪಡಿಸಲಿದ್ದಾರೆ. ಕೇರಳ ರಾಜಧಾನಿ ನಗರಿ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್​ನಲ್ಲಿ ಪ್ರಧಾನಿಯವರು ಈ ನಾಲ್ವರು ಗಗನಯಾನಿಗಳನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ. ಆ ಬಳಿಕ ಅವರ ಹೆಸರನ್ನು ಮಾಧ್ಯಮಗಳಿಗೆ ತಿಳಿಸಲಿದ್ದಾರೆ. ಇಸ್ರೋ ಛೇರ್ಮನ್ ಎಸ್ ಸೋಮನಾಥ್ ಈ ವಿಚಾರವನ್ನು ತಿಳಿಸಿದ್ದಾರೆ.

ಯಾರು ಈ ನಾಲ್ವರು ಗಗನಯಾತ್ರಿಗಳು?

ಚಂದ್ರಯಾನವನ್ನು ಯಶಸ್ವಿಯಾಗಿ ಮಾಡಿರುವ ಇಸ್ರೋ ಮೊದಲ ಬಾರಿಗೆ ಗಗನಯಾನಕ್ಕೆ ಕೈಹಾಕುತ್ತಿದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿರುವ ನಾಲ್ಕನೇ ದೇಶ ಭಾರತವಾಗಿದೆ. ಹೀಗಾಗಿ ಇದು ಐತಿಹಾಸಿಕ ಎನಿಸಿದೆ. ಗಗನಯಾನವು ಮಾನವರನ್ನು ಬಾಹ್ಯಾಕಾಶಕ್ಕೆ ಹೊತ್ತು ಹೋಗುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಲಿರುವ ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಟೈಮ್ಸ್ ಆಫ್ ಇಂಡಿಯಾ ನಿನ್ನೆ ಪ್ರಕಟಿಸಿದ ವರದಿಯೊಂದರಲ್ಲಿ ಈ ನಾಲ್ವರ ಹೆಸರನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಹೊರಕ್ಕೆ; ಬ್ಯಾಂಕ್ ಮಂಡಳಿ ಪುನಾರಚನೆ

ಪ್ರಶಾಂತ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಚೌಹಾಣ್ ಅವರು ಭಾರತದ ಗಗನಯಾನದಲ್ಲಿ ಭಾಗಿಯಾಗಲಿರುವ ನಾಲ್ವರು ಗಗನಯಾತ್ರಿಗಳು. ಇವರೆಲ್ಲರೂ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಮತ್ತು ಗ್ರೂಪ್ ಕ್ಯಾಪ್ಟನ್​ಗಳಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಇಸ್ರೋದಿಂದ ಈವರೆಗೂ ಅಧಿಕೃತವಾಗಿ ಇವರ ಹೆಸರನ್ನು ತಿಳಿಸಲಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಇಂದು ಖುದ್ದಾಗಿ ಇವರ ಹೆಸರನ್ನು ಬಹಿರಂಗಪಡಿಸಲಿದ್ದಾರೆ.

ಯಾವಾಗ ಆಗಲಿದೆ ಗಗನಯಾನ?

ಬಾಹ್ಯಾಕಾಶಕ್ಕೆ ಖಾಲಿ ನೌಕೆಗಳನ್ನು ಕಳುಹಿಸುವುದಕ್ಕೂ ಮನುಷ್ಯರನ್ನು ಕಳುಹಿಸುವುದಕ್ಕೂ ವ್ಯತ್ಯಾಸ ಇದೆ. ಗಗನಯಾತ್ರಿಗಳಿಗೆ ಎಂಥ ಸಂದರ್ಭದಲ್ಲೂ ಅಪಾಯವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಅದಕ್ಕಾಗಿ, ಇಸ್ರೋ ಸಂಸ್ಥೆ ತರಾತುರಿಯಲ್ಲಿ ಗಗನಯಾನ ಯೋಜನೆ ನಡೆಸುತ್ತಿಲ್ಲ. ಮನುಷ್ಯರನ್ನು ಹೊತ್ತೊಯ್ಯುವ ಮುನ್ನ ಎರಡರಿಂದ ಮೂರು ಮಾನವರಹಿತ ಗಗನಯಾನಗಳನ್ನು ಕೈಗೊಳ್ಳಲಿದೆ. ಈ ವರ್ಷವೇ ಸರಣಿಯಾಗಿ ಈ ಅನ್​ಮಾನ್ಡ್ ಮಿಷನ್ ನಡೆಯಲಿದೆ. ಇವು ಯಶಸ್ವಿಯಾಗಿದ್ದು ಖಾತ್ರಿಯಾದ ಬಳಿಕ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಯೋಜಿಸಬಹುದು. ಮುಂದಿನ ವರ್ಷ ಈ ಐತಿಹಾಸಿಕ ಹೆಜ್ಜೆ ಇಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ತಾವು ಏನು ಧರಿಸಬೇಕೆಂಬುದನ್ನು ಹೆಣ್ಣುಮಕ್ಕಳೇ ನಿರ್ಧರಿಸಬೇಕು, ಬೇರೆ ಯಾರೂ ಅಲ್ಲ: ರಾಹುಲ್ ಗಾಂಧಿ

ಬೆಂಗಳೂರಿನಲ್ಲಿ ತರಬೇತಿ ಪಡೆದಿರುವ ನಾಲ್ವರು ಯಾತ್ರಿಗಳು

2019ರಲ್ಲಿ ಗಗನಯಾನ ಯೋಜನೆಯಲ್ಲಿ ಪಾಲ್ಗೊಳ್ಳಲು ಟೆಸ್ಟ್ ಪೈಲಟ್​ಗಳನ್ನು ಆಹ್ವಾನಿಸಲಾಗಿತ್ತು. 12 ಪರೀಕ್ಷಾರ್ಥ ಪೈಲಟ್​ಗಳು ಮೊದಲ ಸುತ್ತಿನಲ್ಲಿ ಆಯ್ಕೆಯಾಗಿದ್ದರು. ಮುಂದಿನ ಹಲವು ಸುತ್ತುಗಳ ಬಳಿಕ ನಾಲ್ವರನ್ನು ಶಾರ್ಟ್ ಲಿಸ್ಟ್ ಮಾಡಲಾಯಿತು.

ಈ ನಾಲ್ವರನ್ನು ಭಾರತದ ವಿವಿಧ ಸೇನಾ ಪಡೆಗಳಲ್ಲಿ ನಿಯೋಜಿಸಿ ನಾನಾ ತರಬೇತಿಗಳನ್ನು ಕೊಡಿಸಲಾಗಿದೆ. ರಷ್ಯಾದಲ್ಲೂ ಇವರಿಗೆ ಟ್ರೈನಿಂಗ್ ನೀಡಲಾಗಿದೆ. ಸಿಮುಲೇಟರ್​ಗಳನ್ನು ಬಳಸಿಯೂ ತರಬೇತಿ ಕೊಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು