ತಮಿಳು ಹೊಸ ವರ್ಷಾಚರಣೆಯಲ್ಲಿ ಮೋದಿ ಭಾಗಿ; ತಮಿಳುನಾಡಿನ ಸಂಸ್ಕೃತಿಯನ್ನು ಹಾಡಿ ಹೊಗಳಿದ ಪ್ರಧಾನಿ

ಕೇಂದ್ರ ಸಚಿವ ಎಲ್. ಮುರುಗನ್ ಅವರ ನಿವಾಸದಲ್ಲಿ ತಮಿಳು ವರ್ಷಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ತಮಿಳು ಜನರ ಪ್ರೀತಿಗೆ ಆಭಾರಿಯಾಗಿದ್ದೇನೆ. ನಾನು ಎಷ್ಟು ಪ್ರೀತಿ ನೀಡಿದ್ದೇನೆಯೋ ಅದಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಪ್ರೀತಿಯನ್ನು ಅವರು ನನಗೆ ನೀಡಿದ್ದಾರೆ.

Follow us
ರಶ್ಮಿ ಕಲ್ಲಕಟ್ಟ
|

Updated on:Apr 13, 2023 | 10:09 PM

ಕೇಂದ್ರ ಸಚಿವ ಎಲ್ ಮುರುಗನ್ ನಿವಾಸದಲ್ಲಿ ತಮಿಳು ಹೊಸ ವರ್ಷಾಚರಣೆ (Tamil New Year celebrations) ನಡೆದಿದ್ದು, ಈ ಸಂಭ್ರಮಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾಗವಹಿಸಿದ್ದಾರ. ಇದಕ್ಕಿಂತ ಮುಂಚೆ ಟ್ವೀಟ್ ಮಾಡಿದ ಮೋದಿ ಇನ್ನು ಸ್ವಲ್ಪ ಸಮಯದ ನಂತರ, ರಾತ್ರಿ 8:15 ರ ಸುಮಾರಿಗೆ, ನಾನು ನನ್ನ ಸಚಿವ ಸಹೋದ್ಯೋಗಿ ಎಲ್. ಮುರುಗನ್ ಜಿ ಅವರ ನಿವಾಸದಲ್ಲಿ ತಮಿಳು ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ತಮಿಳು ಸಂಸ್ಕೃತಿಯ ಮಹಾನ್ ಅಭಿಮಾನಿಯಾಗಿರುವ ನಾನು ಈ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.  ಈ ಟ್ವೀಟ್ ರೀಟ್ವೀಟ್ ಮಾಡಿದ ಮುರುಗನ್ ನಿಮ್ಮಭೇಟಿಗಾಗಿ ನಾನು ಮತ್ತು ತಮಿಳು ಜನರು ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಚೆನ್ನೈನಿಂದ ಕ್ಯಾಲಿಫೋರ್ನಿಯಾದವರೆಗೆ, ಮಧುರೈನಿಂದ ಮೆಲ್ಬೋರ್ನ್‌ಗೆ, ಕೊಯಮತ್ತೂರಿನಿಂದ ಕೇಪ್‌ಟೌನ್‌ಗೆ ಮತ್ತು ಸೇಲಂನಿಂದ ಸಿಂಗಾಪುರದವರೆಗೆ, ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅವರೊಂದಿಗೆ ಸಾಗಿಸಿದ ತಮಿಳು ಜನರನ್ನು ನೀವು ಕಾಣಬಹುದು. ಪೊಂಗಲ್ ಆಗಿರಲಿ ಅಥವಾ ಪುತಾಂಡ್ ಆಗಿರಲಿ, ಪ್ರಪಂಚದಾದ್ಯಂತ ಅವುಗಳನ್ನು ಗುರುತಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಮಿಳು ಪ್ರಪಂಚದ ಅತ್ಯಂತ ಹಳೆಯ ಭಾಷೆ. ಪ್ರತಿಯೊಬ್ಬ ಭಾರತೀಯನೂ ಈ ಬಗ್ಗೆ ಹೆಮ್ಮೆಪಡುತ್ತಾನೆ. ತಮಿಳು ಸಾಹಿತ್ಯವೂ ವ್ಯಾಪಕವಾಗಿ ಗೌರವಿಸಲ್ಪಟ್ಟಿದೆ. ತಮಿಳು ಚಲನಚಿತ್ರೋದ್ಯಮವು ನಮಗೆ ಕೆಲವು ಅಪ್ರತಿಮ ಕಲೆಗಳನ್ನು ನೀಡಿದೆ ಎಂದು ಮೋದಿ ಹೇಳಿದ್ದಾರೆ.

ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಾನು ಕೆಂಪು ಕೋಟೆಯಿಂದ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಬಗ್ಗೆ ಮಾತನಾಡಿದೆ. ಹೆಚ್ಚು ಪುರಾತನವಾದ ವಿಷಯವು ಹೆಚ್ಚು ಸಮಯ ಪರೀಕ್ಷಿತವಾಗಿದೆ. ಅದಕ್ಕಾಗಿಯೇ ತಮಿಳು ಸಂಸ್ಕೃತಿ ಮತ್ತು ತಮಿಳು ಜನರು ಶಾಶ್ವತ ಮತ್ತು ಜಾಗತಿಕ ಸ್ವಭಾವದವರು.

ಭಾರತ ಪ್ರಜಾಪ್ರಭುತ್ವದ ತಾಯಿ. ಅದರ ಹಿಂದೆ ಹಲವಾರು ಐತಿಹಾಸಿಕ ಉಲ್ಲೇಖಗಳಿವೆ. ಅವುಗಳಲ್ಲಿ ಅತ್ಯಂತ ಮಹತ್ವದ ಉಲ್ಲೇಖವೆಂದರೆ ತಮಿಳುನಾಡು. ಉತಿರಮೇರೂರ್ ಎಂಬ ಸ್ಥಳವು ಬಹಳ ವಿಶೇಷವಾಗಿದೆ. ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಹಲವಾರು ವಿಷಯಗಳನ್ನು 1100- 1200 ವರ್ಷಗಳ ಹಳೆಯ ಶಾಸನದಲ್ಲಿ ಬರೆಯಲಾಗಿದೆ. ಇದು ಆ ಕಾಲದ ಗ್ರಾಮಸಭೆಗೆ ಸ್ಥಳೀಯ ಸಂವಿಧಾನದಂತಿದೆ. ಇದು ವಿಧಾನಸಭೆಯನ್ನು ಹೇಗೆ ನಡೆಸಬೇಕು, ಸದಸ್ಯರ ಅರ್ಹತೆ ಹೇಗಿರಬೇಕು, ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹಾಗೂ ಸದಸ್ಯರ ಅನರ್ಹತೆ ಬಗ್ಗೆ ಹೇಳಲಾಗಿದೆ.

ಇದನ್ನೂ ಓದಿಪಿಎಂ ಆವಾಸ್ ಯೋಜನೆಯಿಂದ ಬದಲಾದ ಬದುಕು: ಮಧುರೈನ ಮಹಿಳೆ ಬರೆದ ಪತ್ರ ಹಂಚಿಕೊಂಡ ಪ್ರಧಾನಿ ಮೋದಿ

ಪ್ರತಿ ವರ್ಷ ಪುತಾಂಡ್​​ನಿಂದ ಹೊಸ ಶಕ್ತಿಯನ್ನು ತೆಗೆದುಕೊಳ್ಳುವ ಪ್ರಾಚೀನ ತಮಿಳು ಸಂಸ್ಕೃತಿ ಮತ್ತು ಸಂಪ್ರದಾಯವು ನಿಜವಾಗಿಯೂ ಅದ್ಭುತವಾಗಿದೆ. ಇದು ತಮಿಳುನಾಡು ಮತ್ತು ತಮಿಳು ಜನರನ್ನು ತುಂಬಾ ವಿಶೇಷವಾಗಿಸುತ್ತದೆ. ಅದಕ್ಕಾಗಿಯೇ, ನಾನು ಯಾವಾಗಲೂ ಈ ಸಂಪ್ರದಾಯವನ್ನು ಇಷ್ಟಪಡುತ್ತೇನೆ ಮತ್ತು ಇದರೊಂದಿಗೆ ಭಾವನಾತ್ಮಕ ಬಾಂಧವ್ಯವನ್ನೂ ಹೊಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:46 pm, Thu, 13 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್