Narendra Modi Birthday: ಮೋದಿ ಹುಟ್ಟುಹಬ್ಬದಂದು ಭಾರತಕ್ಕೆ ಬರಲು ಸಿದ್ಧವಾದ 8 ಚಿರತೆಗಳಿಗೆ ವಿಶೇಷ ವಿಮಾನ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 15, 2022 | 2:31 PM

ಎಂಟು ಚಿರತೆಗಳು, ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ರಾಜಸ್ಥಾನದ ಜೈಪುರಕ್ಕೆ ಸೆಪ್ಟೆಂಬರ್ 17 ರಂದು ಸರಕು ವಿಮಾನದಲ್ಲಿ ಇಂಟರ್-ಕಾಂಟಿನೆಂಟಲ್ ಟ್ರಾನ್ಸ್‌ಲೊಕೇಶನ್ ಯೋಜನೆಯ ಭಾಗವಾಗಿ ತರಲಾಗುವುದು.

Narendra Modi Birthday: ಮೋದಿ ಹುಟ್ಟುಹಬ್ಬದಂದು ಭಾರತಕ್ಕೆ ಬರಲು ಸಿದ್ಧವಾದ 8 ಚಿರತೆಗಳಿಗೆ ವಿಶೇಷ ವಿಮಾನ
Special flight
Image Credit source: ANI
Follow us on

ಮೋದಿ ಹುಟ್ಟು ಹಬ್ಬಕ್ಕೆ ಭಾರತಕ್ಕೆ ಬರಲು ಸಿದ್ದವಾಗಿರುವ 8 ಚಿರತೆಗಳಿಗೆ ವಿಶೇಷ ವಿಮಾನವನ್ನು ನಮೀಬಿಯಾ ರಾಜಧಾನಿಗೆ   ತಲುಪಿದೆ.   ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳು ಒಟ್ಟು ಎಂಟು ಚಿರತೆಗಳು ಸೆಪ್ಟೆಂಬರ್ 17ರಂದು ರಾಜಸ್ಥಾನದ ಜೈಪುರಕ್ಕೆ ತರಲಾಗುವುದು. ವಿಶೇಷವಾಗಿ ಕಸ್ಟಮೈಸ್ ಮಾಡಿದ B747 ಜಂಬೋ ಜೆಟ್ ನಮೀಬಿಯಾ ರಾಜಧಾನಿಯಲ್ಲಿ ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲು  ಆಗಮಿಸಿದೆ. ಎಂಟು ಚಿರತೆಗಳು, ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ರಾಜಸ್ಥಾನದ ಜೈಪುರಕ್ಕೆ ಸೆಪ್ಟೆಂಬರ್ 17 ರಂದು ಸರಕು ವಿಮಾನದಲ್ಲಿ ಇಂಟರ್-ಕಾಂಟಿನೆಂಟಲ್ ಟ್ರಾನ್ಸ್‌ಲೊಕೇಶನ್ ಯೋಜನೆಯ ಭಾಗವಾಗಿ ತರಲಾಗುವುದು. ಜೈಪುರದಿಂದ ಹೆಲಿಕಾಪ್ಟರ್‌ಗಳಲ್ಲಿ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದ ಹೊಸ ಮನೆಗೆ ಕರೆದೊಯ್ಯಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಈ ಚಿರತೆಗಳನ್ನು ಬಿಡಲಿದ್ದಾರೆ. ಚಿರತೆಗಳನ್ನು ಭಾರತಕ್ಕೆ ಕರೆತರುವ ವಿಮಾನವು ಮುಖ್ಯ ಕ್ಯಾಬಿನ್‌ನಲ್ಲಿ ಪಂಜರಗಳ ಭದ್ರತೆಯನ್ನು ಮಾಡಿಕೊಂಡಿದೆ. ಆದರೆ ಹಾರಾಟದ ಸಮಯದಲ್ಲಿ ಚಿರತೆಗೆ ವೆಟ್ಸ್​ನ್ನು ಮೂಲಕ ಅನುಮತಿ ನೀಡಲಾಗಿದೆ.

ಈ ವಿಮಾನಕ್ಕೆ ಹುಲಿಯ ಚಿತ್ರವನ್ನು ಬಿಡಿಸಲಾಗಿದೆ. ವಿಮಾನವು 16 ಗಂಟೆಗಳವರೆಗೆ ಹಾರುವ ಸಾಮರ್ಥ್ಯವಿರುವ ಅಲ್ಟ್ರಾ-ಲಾಂಗ್ ರೇಂಜ್ ಜೆಟ್ ಆಗಿದ್ದು, ಇಂಧನ ತುಂಬಲು ನಿಲುಗಡೆ ಇಲ್ಲದೆ ನೇರವಾಗಿ ನಮೀಬಿಯಾದಿಂದ ಭಾರತಕ್ಕೆ ಹಾರಬಲ್ಲದು, ಚಿರತೆಗಳ ಯೋಗಕ್ಷೇಮದ ಪ್ರಮುಖ ವ್ಯವಸ್ಥೆಗಳನ್ನು ಮಾಡಲಾಗಿದೆ. ಚಿರತೆ ಭಾರತಕ್ಕೆ ಬರುವ ವರೆಗೆ ಯಾವುವೆ ಆಹಾರವನ್ನು ಸೇವನೆ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ದೀರ್ಘ ಪ್ರಯಾಣವು ಪ್ರಾಣಿಗಳಲ್ಲಿ ವಾಕರಿಕೆ ಮತ್ತು ಆರೋಗ್ಯ ಸಮಸ್ಯೆ ಉಂಟು ಮಾಡುವುದರಿಂದ ಇತರ ತೊಡಕುಗಳಿಗೆ ಕಾರಣವಾಗುವುದರಿಂದ ಇಂತಹ ಮುನ್ನೆಚ್ಚರಿಕೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಸಾಲ್ ಅರಣ್ಯದಲ್ಲಿ 1948 ರಲ್ಲಿ ಕೊನೆಯದಾಗಿ ಮಚ್ಚೆಯುಳ್ಳ ಚಿರತೆ ಸಾವನ್ನಪ್ಪಿತು. 1970 ರ ದಶಕದಿಂದ ದೇಶದಲ್ಲಿ ಐತಿಹಾಸಿಕ ವಿಚಾರಗಳಲ್ಲಿ ಇದು ಒಂದಾಗಿದೆ. ಈ ಜಾತಿಯ ಚಿರತೆಗಳನ್ನು ಭಾರತಕ್ಕೆ ತರಲು ಭಾರತ ಸರ್ಕಾರವು ನಮೀಬಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಹುಲಿಯ ನಾಡಿಗೆ ಸದ್ಭಾವನಾ ರಾಯಭಾರಿಗಳನ್ನು ಕೊಂಡೊಯ್ಯಲು ವಿಶೇಷ ಹಕ್ಕಿಯೊಂದು ಬ್ರೇವ್‌ನ ಭೂಮಿಯನ್ನು ಮುಟ್ಟಿದೆ”ಎಂದು ವಿಂಡ್‌ಹೋಕ್‌ನಲ್ಲಿರುವ ಭಾರತದ ಹೈಕಮಿಷನ್ ಬುಧವಾರ ಟ್ವೀಟ್ ಮಾಡಿದೆ.

Published On - 2:30 pm, Thu, 15 September 22