ಸೇನಾ ಪಡೆಯಿಂದ ಎಚ್ಚರಿಕೆ ಪತ್ರ ಸಿಕ್ಕ ಬೆನ್ನಲ್ಲೇ ಅಗ್ನಿಪಥ್ ನೇಮಕಾತಿಗೆ ಬೆಂಬಲಿಸುವುದಾಗಿ ಹೇಳಿದ ಪಂಜಾಬ್ ಸಿಎಂ

ವರದಿಯ ಪ್ರತಿಯನ್ನು ಟ್ವೀಟ್ ಮಾಡಿದ ಮಾನ್ ಪಂಜಾಬ್‌ನಲ್ಲಿ ಅಗ್ನಿವೀರ್‌ಗಳ ನೇಮಕಾತಿಗಾಗಿ ಸೇನಾ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುವಂತೆ ಎಲ್ಲಾ ಡೆಪ್ಯೂಟಿ ಕಮಿಷನರ್‌ಗಳಿಗೆ ಸೂಚಿಸಲಾಗಿದೆ.

ಸೇನಾ ಪಡೆಯಿಂದ ಎಚ್ಚರಿಕೆ ಪತ್ರ ಸಿಕ್ಕ ಬೆನ್ನಲ್ಲೇ ಅಗ್ನಿಪಥ್ ನೇಮಕಾತಿಗೆ ಬೆಂಬಲಿಸುವುದಾಗಿ ಹೇಳಿದ ಪಂಜಾಬ್ ಸಿಎಂ
ಭಗವಂತ್ ಮಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 15, 2022 | 1:50 PM

ಅಲ್ಪಾವಧಿಯ ಅಗ್ನಿಪಥ್ ಯೋಜನೆಯಡಿ ಪಂಜಾಬ್‌ನಲ್ಲಿ(Punjab) ನಡೆಸಲುದ್ದೇಶಿಸಿದ ಸೇನಾ ನೇಮಕಾತಿ ರ್ಯಾಲಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತೇವೆ ಅಥವಾ ನೆರೆಯ ರಾಜ್ಯಕ್ಕೆ ವರ್ಗಾಯಿಸುತ್ತೇವೆ ಎಂದು ಸೇನಾಪಡೆ ಎಚ್ಚರಿಕೆ ನೀಡಿದ ನಂತರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅಗ್ನಿಪಥ್​​ಗೆ (Agnipath)ಸಂಪೂರ್ಣ ಬೆಂಬಲ ನೀಡುವಂತೆ ಉಪ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಅದೇ ವೇಳೆ ಈ ಬಗ್ಗೆ ಏನಾದರೂ ಕುಂದುಕೊರತೆಗಳು ಕಂಡುಬಂದರೆ ಗಂಭೀರವಾಗಿ ಅದನ್ನು ಪರಿಗಣಿಸಲಾಗುವುದು ಎಂದಿದ್ದಾರೆ ಮಾನ್.ಬುಧವಾರ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, ಸೆಪ್ಟೆಂಬರ್ 8 ರಂದು ಪಂಜಾಬ್ ಮುಖ್ಯ ಕಾರ್ಯದರ್ಶಿ ವಿ ಕೆ ಜಂಜುವಾ ಮತ್ತು ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯ ಪ್ರಧಾನ ಕಾರ್ಯದರ್ಶಿ ಕುಮಾರ್ ರಾಹುಲ್ ಅವರಿಗೆ ಜಲಂಧರ್‌ನಲ್ಲಿರುವ ಸೇನೆಯ ವಲಯ ನೇಮಕಾತಿ ಅಧಿಕಾರಿ, ಮೇಜರ್ ಜನರಲ್ ಶರದ್ ಬಿಕ್ರಮ್ ಸಿಂಗ್ ಪತ್ರ ಬರೆದಿದ್ದಾರೆ. ಪೊಲೀಸ್ ನೆರವು, ವೈದ್ಯಕೀಯ ನೆರವು ಮತ್ತು ಮೂಲಭೂತ ಸೌಕರ್ಯಗಳಿಗೆ ವ್ಯವಸ್ಥೆಗಳನ್ನು ಒಳಗೊಂಡಂತೆ ನಾಗರಿಕ ಆಡಳಿತವು ಪೂರೈಸಬೇಕಾದ ಎಲ್ಲ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.. ಈ ವ್ಯವಸ್ಥೆಗಳನ್ನು ಮಾಡಲು ಬದ್ಧತೆ ಇಲ್ಲದೇ ಇದ್ದರೆ ರಾಜ್ಯದಲ್ಲಿ ಭವಿಷ್ಯದ ಎಲ್ಲಾ ನೇಮಕಾತಿ ರ್ಯಾಲಿಗಳು ಮತ್ತು ಕಾರ್ಯವಿಧಾನಗಳನ್ನು ಸ್ಥಗಿತಗೊಳಿಸಲು ನಾವು ಸೇನಾ ಪ್ರಧಾನ ಕಚೇರಿಗೆ ಹೇಳುತ್ತೇವೆ ಅಥವಾ  ಪರ್ಯಾಯವಾಗಿ ನೆರೆಹೊರೆಯಲ್ಲಿ ರ್ಯಾಲಿಗಳನ್ನು ನಡೆಸುತ್ತೇವೆ ಎಂದು ಸೇನೆ ಪತ್ರದಲ್ಲಿ ಎಚ್ಚರಿಸಿದೆ.

ವರದಿಯ ಪ್ರತಿಯನ್ನು ಟ್ವೀಟ್ ಮಾಡಿದ ಮಾನ್ ಪಂಜಾಬ್‌ನಲ್ಲಿ ಅಗ್ನಿವೀರ್‌ಗಳ ನೇಮಕಾತಿಗಾಗಿ ಸೇನಾ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುವಂತೆ ಎಲ್ಲಾ ಡೆಪ್ಯೂಟಿ ಕಮಿಷನರ್‌ಗಳಿಗೆ ಸೂಚಿಸಲಾಗಿದೆ. ಯಾವುದೇ ಕುಂದು ಕೊರತೆಯನ್ನು  ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಿಂದ ಸೇನೆಗೆ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿಗಳು ಅಧಿಕೃತ ಪ್ರವಾಸದಲ್ಲಿ ಜರ್ಮನಿಯಲ್ಲಿದ್ದಾರೆ.

ಆದರೆ, ಆಮ್ ಆದ್ಮಿ ಪಕ್ಷವು ಅಗ್ನಿವೀರ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ ಎಂದು ರಾಜ್ಯ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಚೀಮಾ ಈ ವಿಷಯ ನನಗೆ ತಿಳಿದಿಲ್ಲ. ಆದರೆ ಯಾರೂ ಪಂಜಾಬ್ ಮೇಲೆ ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಪಂಜಾಬ್‌ನ ಯುವಕರು ಈ ಹಿಂದೆ ಸೇನೆಗೆ ನೇಮಕಗೊಳ್ಳುತ್ತಿದ್ದರು. ಅಗ್ನಿವೀರ್ ಯೋಜನೆಯನ್ನು ನಾವು ಹಿಂದೆಯೂ ವಿರೋಧಿಸಿದ್ದೆವು, ಇಂದಿಗೂ ವಿರೋಧಿಸುತ್ತಿದ್ದೇವೆ ಎಂದಿದ್ದಾರೆ

ಜೂನ್‌ ತಿಂಗಳಲ್ಲಿ ಪಂಜಾಬ್ ಅಸೆಂಬ್ಲಿ ಅಗ್ನಿಪಥ್ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಕೇಳುವ ನಿರ್ಣಯವನ್ನು ಅಂಗೀಕರಿಸಿತ್ತು. ಮಾನ್ ಅವರು ನಿರ್ಣಯವನ್ನು ಮಂಡಿಸಿದ್ದು, ಬಿಜೆಪಿ ಶಾಸಕರು ಅದನ್ನು ವಿರೋಧಿಸಿದ್ದರು.

Published On - 1:49 pm, Thu, 15 September 22