ಹರಿದ್ವಾರದ ಹರ್ ಕಿ ಪೌರಿಯಲ್ಲಿ ಕಾಲಾ ಚಶ್ಮಾ ಹಾಡಿಗೆ ಹೆಜ್ಜೆ ಹಾಕಿದ ಯುವಕರ ವಿಡಿಯೊ ವೈರಲ್, ನೆಟ್ಟಿಗರಿಂದ ಆಕ್ರೋಶ
ಈ ಕೃತ್ಯ ವಿರುದ್ಧ ದೂರು ಬಂದರೆ ‘ಮಿಷನ್ ಮರ್ಯಾದಾ’ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಅಧಿಕಾರಿ ತಿಳಿಸಿದ್ದಾರೆ.
ಉತ್ತರಾಖಂಡ್‌ನ ಹರಿದ್ವಾರದಲ್ಲಿರುವ (Haridwar) ದೇವಸ್ಥಾನದ ಆವರಣದಲ್ಲಿ ಕೆಲವು ಯುವಕರು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ತೋರಿಸುವ ವೈರಲ್ ವಿಡಿಯೊಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ದೂರು ದಾಖಲಾದರೆ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಆಡಳಿತ ಭರವಸೆ ನೀಡಿದೆ. ಈ ಕೃತ್ಯ ವಿರುದ್ಧ ದೂರು ಬಂದರೆ ‘ಮಿಷನ್ ಮರ್ಯಾದಾ’ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಅಧಿಕಾರಿ ತಿಳಿಸಿದ್ದಾರೆ. ಹರಿದ್ವಾರದ ಪ್ರಸಿದ್ಧ ಹರ್ ಕಿ ಪೌರಿ ಘಾಟ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಟ್ರೆಂಡ್‌ಗಾಗಿ ಜನರ ಗುಂಪೊಂದು ‘ಬಾರ್ ಬಾರ್ ದೇಖೋ’ ಚಿತ್ರದ ‘ಕಾಲಾ ಚಶ್ಮಾ’ ಹಾಡಿಗೆ ಹೆಜ್ಜೆ ಹಾಕಿದೆ. ಹಲವಾರು ಹಿಂದೂ ಸಂಘಟನೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೊವನ್ನು ಟೀಕಿಸಿದ್ದಾರೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಕೆ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ದೇಶದ ದಕ್ಷಿಣ ಭಾಗದಲ್ಲಿರುವ ದೇವಾಲಯಗಳಲ್ಲಿ ಅನುಸರಿಸುವ ನಿಯಮಗಳನ್ನು ಅನೇಕರು ಉಲ್ಲೇಖಿಸಿದ್ದಾರೆ.
बवlसीर at #HarkiPauri of #Haridwar ?♀️?♀️?♀️?♀️?♀️?♀️?♀️?♀️
No words ?♀️?♀️?♀️?♀️?♀️?♀️?♀️?♀️
Can I use D words for these Hindus ? pic.twitter.com/WQC2IPImNX
— Agorl Ethaana (@ahorl_Eteena) September 13, 2022
ದಕ್ಷಿಣ ಭಾರತದ ಬಹುತೇಕ ದೇವಾಲಯಗಳು ಆವರಣವನ್ನು ಪ್ರವೇಶಿಸುವ ಮೊದಲು ಭಕ್ತರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಬೇಕು ಎಂಬ ನಿಯಮ ಇದೆ. ಆದರೆ ಉತ್ತರ ಭಾರತದಲ್ಲಿ ಪ್ರಕರಣ ಭಿನ್ನವಾಗಿದೆ. ಕೆಲವು ಸ್ಥಳಗಳಿಗೆ ಡ್ರೆಸ್ ಕೋಡ್ ಇರಬೇಕು ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ. “ದೇಗುಲದ ಆವರಣದಲ್ಲಿ ಕ್ಯಾಮೆರಾ ಮತ್ತು ಮೊಬೈಲ್ ಅನ್ನು ನಿಷೇಧಿಸಬೇಕು” ಎಂದು ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಧಾರ್ಮಿಕ ಮತ್ತು ಪ್ರವಾಸೋದ್ಯಮ ತಾಣಗಳಿಗೆ ಅಗೌರವ ತೋರುವವರನ್ನು ಶಿಕ್ಷಿಸಲು ಪೌರಿ ಪೊಲೀಸರು ಕಳೆದ ವರ್ಷ “ಮಿಷನ್ ಮರ್ಯಾದಾ” ಆರಂಭಿಸಿದ್ದರು. ಮಾದಕ ದ್ರವ್ಯ ಸೇವನೆ, ದ್ವೇಷ ಹರಡುವುದು, ಸಾರ್ವಜನಿಕ ಶಾಂತಿಗೆ ಅಡ್ಡಿಪಡಿಸುವುದು ಮತ್ತು ಪೂಜಾ ಸ್ಥಳದಲ್ಲಿ ಯಾವುದೇ ರೀತಿಯ ಗಲಭೆಗಳನ್ನು ಸಭ್ಯತೆಯ ಉಲ್ಲಂಘನೆ ವಿರುದ್ಧ ಮಿಷನ್ ಮರ್ಯಾದಾ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು
Published On - 4:57 pm, Thu, 15 September 22