ರಿಯಲ್ ಹಿಂದೂ ವರ್ಸಸ್ ರೀಲ್ ಹಿಂದೂ ಎನ್ನುವ ಚರ್ಚೆಯನ್ನು ಎಕ್ಸ್ನಲ್ಲಿ ಬಿಜೆಪಿಯು ಹುಟ್ಟುಹಾಕಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಬಗ್ಗೆ ಕಾಳಜಿ ಇಲ್ಲ ಎಂದು ಬಿಜೆಪಿ ಹೇಳಿದೆ. ಈ ಕುರಿತು ಬಿಜೆಪಿ ವಕ್ತಾರ ಶೆಹಜಾದ್ ಎಕ್ಸ್ ಖಾತೆಯಲ್ಲಿ ರಿಯಲ್ ಹಿಂದೂ ವರ್ಸಸ್ ರೀಲ್ ಹಿಂದೂ ಎನ್ನುವ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದು ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನ ವಿಚಾರಧಾರೆಯೊಂದಿಗೆ ಮಾಡಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದ ಹಂಗಾಮಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿರುವ ಮೊಹಮ್ಮದ್ ಯೂಸುಫ್ಗೆ ಶುಭಾಶಯ ತಿಳಿಸಿದ್ದಾರೆ. ಜತೆಗೆ ಹಿಂದೂ ಹಾಗೂ ಇತರೆ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಮಾತನಾಡಿದ್ದಾರೆ.
ಆದರೆ ರಾಹುಲ್ ಗಾಂಧಿಯಾಗಲಿ, ಪ್ರಿಯಾಂಕಾಗಾಂಧಿಯಾಗಲಿ ಕೇವಲ ಯೂನಸ್ಜೆ ಶುಭಾಶಯ ತಿಳಿಸಿರುವುದು ಬಿಟ್ಟರೆ ಯಾರೂ ಕೂಡ ಹಿಂದೂಗಳ ಸುರಕ್ಷತೆ ಬಗ್ಗೆ ಮಾತನಾಡಿಲ್ಲ.
Real Hindu vs Reel Hindu pic.twitter.com/HOD8lRCuto
— Shehzad Jai Hind (Modi Ka Parivar) (@Shehzad_Ind) August 8, 2024
ಇನ್ನು ಗಾಜಾ ವಿಚಾರಕ್ಕೆ ಬಂದರೆ, ಅಲ್ಲಿನ ಸಮಸ್ಯೆ ಕುರಿತು ಗಮನ ಕೊಟ್ಟಂತೆ ಇಲ್ಲಿ ಕೊಟ್ಟಿಲ್ಲ, ಗಾಜಾದಂತಹ ಸಮಸ್ಯೆಗಳ ಕುರಿತು, ಗಮನ ಸೆಳೆಯಲು ದೀರ್ಘ ಪೋಸ್ಟ್‌ಗಳನ್ನು ರಾಹುಲ್ ಗಾಂಧಿ ಮಾಡಿದ್ದರು.
ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬರೆದಿದ್ದರು. ಹೀಗಾಗಿ ನರೇಂದ್ರ ಮೋದಿ ನಿಜವಾದ ಹಿಂದೂ ಆದರೆ ರಾಹುಲ್ ರೀಲ್ ಹಿಂದೂ ಎಂದು ಪೋಸ್ಟ್ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ