Union Cabinet Expansion ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಾಳೆ? 20 ಹೊಸಮುಖಗಳ ಸೇರ್ಪಡೆ ಸಾಧ್ಯತೆ
Narendra Modi: ಕೇಂದ್ರ ಸಚಿವ ಸಂಪುಟ 81 ಸದಸ್ಯರನ್ನು ಹೊಂದಬಹುದು. ಪ್ರಸ್ತುತ, 53 ಸಚಿವರಿದ್ದಾರೆ. 28 ಹೊಸ ಮುಖಗಳನ್ನು ಸೇರಿಸಲು ಅವಕಾಶವಿದೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಬುಧವಾರದಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ
ದೆಹಲಿ: ನಾಳೆ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುದ್ದಿ ಕೇಳಿಬಂದಿದ್ದು 20 ಹೊಸ ಸಚಿವರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮ ವರದಿಗಳ ಪ್ರಕಾರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉನ್ನತ ಸಚಿವರೊಂದಿಗೆ ಪ್ರಧಾನಿ ಮೋದಿ ಅವರ ಸಭೆ ರದ್ದುಗೊಂಡಿರುವುದರಿಂದ ಈ ನಿರ್ಧಾರ ವಿಳಂಬವಾಗಬಹುದು. ಸಭೆ ಇಂದು ಸಂಜೆ 5 ಗಂಟೆಗೆ ನಿಗದಿಯಾಗಿತ್ತು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಮತ್ತು ಇತರರು ಭಾಗವಹಿಸುವ ಸಾಧ್ಯತೆ ಇದೆ. ಇಂದಿನ ಸಭೆಯಲ್ಲಿ, ಪ್ರಧಾನ ಮಂತ್ರಿಗಳು ಮಂತ್ರಿಗಳ ಕಾರ್ಯಕ್ಷಮತೆ ಮತ್ತು ಮುಂದಿನ ಯೋಜನೆಗಳ ಪ್ರಸ್ತಾಪಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಜೂನ್ 20 ರಂದು ಪ್ರಧಾನಿ ಇದೇ ರೀತಿಯ ಸಭೆ ನಡೆಸಿದ್ದರು.
ಕೇಂದ್ರ ಸಚಿವ ಸಂಪುಟ 81 ಸದಸ್ಯರನ್ನು ಹೊಂದಬಹುದು. ಪ್ರಸ್ತುತ, 53 ಸಚಿವರಿದ್ದಾರೆ. 28 ಹೊಸ ಮುಖಗಳನ್ನು ಸೇರಿಸಲು ಅವಕಾಶವಿದೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಬುಧವಾರದಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇಲ್ಲಿವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಉತ್ತರ ಪ್ರದೇಶ ಸೇರಿದಂತೆ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಲಿರುವ ರಾಜ್ಯಗಳಿ ಪ್ರತಿನಿಧಿಗಳಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಸ್ಥಾನ ನೀಡುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳವು ಕೇಂದ್ರ ಸಚಿವ ಸಂಪುಟಗಲ್ಲಿ ತನ್ನ ಪ್ರಾತಿನಿಧ್ಯವನ್ನು ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು ಮತ್ತು ಅಪ್ನಾ ದಳ ಕೂಡ ಪ್ರಾತಿನಿಧ್ಯ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಶಿವಸೇನೆ ಮತ್ತು ಶಿರೋಮಣಿ ಅಕಾಲಿ ದಳದಂತಹ ಪಕ್ಷಗಳು ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡ ನಂತರ ಕಿರಿಯ ಸಚಿವರಾಗಿರುವ ರಿಪಬ್ಲಿಕನ್ ಪಕ್ಷದ ಮುಖಂಡ ರಾಮದಾಸ್ ಅಠವಾಳೆ ಅವರು ಸರ್ಕಾರದಲ್ಲಿರುವ ಮಿತ್ರ ಪಕ್ಷದ ಏಕೈಕ ಸಚಿವರಾಗಿದ್ದಾರೆ. ಲೋಕ ಜನಶಕ್ತಿ ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಕ್ಯಾಬಿನೆಟ್ ಸಚಿವರಾಗಿದ್ದು, ಕಳೆದ ವರ್ಷ ನಿಧನರಾದರು. ಅವರ ಸಹೋದರ ಪಶುಪತಿ ಕುಮಾರ್ ಪಾರಸ್ ವಿಸ್ತರಣೆಯ ಭಾಗವಾಗುತ್ತಾರೆಯೇ ಎಂಬ ಬಗ್ಗೆ ಎಲ್ಲರ ದೃಷ್ಟಿ ಇದೆ. ಪಕ್ಷದ ನಿಯಂತ್ರಣಕ್ಕಾಗಿ ಪಾರಸ್ ಪಾಸ್ವಾನ್ ಅವರ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಅವರೊಂದಿಗೆ ಜಗಳ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಾದ ಸರ್ಬಾನಂದ ಸೋನೊವಾಲ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸುಶೀಲ್ ಮೋದಿಯವರಿಗೆ ಸಚಿವ ಸಂಪುಟದಲ್ಲಿಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ಅದೇ ವೇಳೆ ಮನೋಜ್ ತಿವಾರಿ, ನಾರಾಯಣ್ ರಾಣೆ, ಆರ್‌ಸಿಪಿ ಸಿಂಗ್, ದಿಲೀಪ್ ಘೋಷ್, ಸಂತೋಷ್ ಕುಶ್ವಾಹ, ಜಮ್ಯಾಂಗ್ ತ್ಸೆರಿಂಗ್ ನಮ್‌ಗ್ಯಾಲ್, ಲಾಕೆಟ್ ಚಟರ್ಜಿ, ಜಾಫರ್ ಇಸ್ಲಾಂ ಮತ್ತು ಅನುಪ್ರಿಯಾ ಪಟೇಲ್ ಹೆಸರು ಸಂಭಾವ್ಯ ಪಟ್ಟಿಯಲ್ಲಿ ಕೇಳಿಬಂದಿದೆ.
2019 ರಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ಇದಾಗಿದೆ. ಇದಕ್ಕೂ ಮುನ್ನ ಶನಿವಾರ ಮತ್ತು ಭಾನುವಾರ, ಪ್ರಧಾನಿ ಮೋದಿ ಅವರು ಬಿಜೆಪಿಯ ಹಿರಿಯ ಮುಖಂಡರಾದ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ್ ಅವರ ಅಧಿಕೃತ ನಿವಾಸವಾದ ಲೋಕ್ ಕಲ್ಯಾಣ್ ಮಾರ್ಗದಲ್ಲಿ ಸಭೆ ನಡೆಸಿದ್ದಾರೆ.
ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಾಧ್ಯತೆ ಇರುವ ಪ್ರಮುಖರ ಪಟ್ಟಿ ಹೀಗಿದೆ 1. ಸರ್ಬಾನಂದ ಸೋನೊವಾಲ್ (ಬಿಜೆಪಿ) – ಮಾಜಿ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರ ಸಚಿವ (2014-2016), ಮಾಜಿ ಅಸ್ಸಾಂ ಸಿಎಂ ಮತ್ತು ಶಾಸಕ 2. ಸುಶೀಲ್ ಮೋದಿ (ಬಿಜೆಪಿ) – ಬಿಹಾರದ ಮಾಜಿ ಉಪ ಸಿಎಂ ಮತ್ತು ರಾಜ್ಯಸಭಾ ಸಂಸದ 3. ನಾರಾಯಣ್ ರಾಣೆ (ಬಿಜೆಪಿ) – ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ರಾಜ್ಯಸಭಾ ಸಂಸದ 4. ಹೀನಾ ಗವಿತ್ (ಬಿಜೆಪಿ) – ನಂದೂರ್‌ಬಾರ್‌ನ ಲೋಕಸಭಾ ಸಂಸದೆ 5. ಪ್ರೀತಂ ಮುಂಡೆ (ಬಿಜೆಪಿ) – ಬೀಡ್ ಲೋಕಸಭಾ ಸಂಸದ 6. ಜಾಫರ್ ಇಸ್ಲಾಂ (ಬಿಜೆಪಿ) – ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ 7. ಅನುಪ್ರಿಯಾ ಪಟೇಲ್ [ಅಪ್ನಾ ದಳ (ಎಸ್)] – ಮಿರ್ಜಾಪುರದ ಲೋಕಸಭಾ ಸಂಸದೆ 8. ಲಾಕೆಟ್ ಚಟರ್ಜಿ (ಬಿಜೆಪಿ) – ಹೂಗ್ಲಿಯ ಲೋಕಸಭಾ ಸಂಸದ 9. ದಿಲೀಪ್ ಘೋಷ್ (ಬಿಜೆಪಿ) – ಮದಿನಿಪುರದ ಲೋಕಸಭಾ ಸಂಸದ 10. ಶಾಂತನು ಠಾಕೂರ್ (ಬಿಜೆಪಿ) – ಬಂಗಾಂವ್‌ನ ಲೋಕಸಭಾ ಸಂಸದ 11.ತೀರಥ್ ಸಿಂಗ್ ರಾವತ್ (ಬಿಜೆಪಿ) – ಗರ್ಹ್ವಾಲ್‌ನ ಲೋಕಸಭಾ ಸಂಸದ 12. ಪಶುಪತಿ ಕುಮಾರ್ ಪಾರಸ್ (ಎಲ್ ಜೆಪಿ) – ಹಾಜಿಪುರದ ಲೋಕಸಭಾ ಸಂಸದ 13. ಶಿವ ಪ್ರತಾಪ್ ಶುಕ್ಲಾ (ಬಿಜೆಪಿ) – ಮಾಜಿ ಕೇಂದ್ರ ಖಾತೆಯ ರಾಜ್ಯಸಚಿವ ಮತ್ತು ರಾಜ್ಯಸಭಾ ಸಂಸದ 14. ಸುನೀತಾ ದುಗ್ಗಲ್ (ಬಿಜೆಪಿ) – ಸಿರ್ಸಾದ ಲೋಕಸಭಾ ಸಂಸದೆ 15. ಆರ್‌ಸಿಪಿ ಸಿಂಗ್ [ಜೆಡಿಯು] – ರಾಜ್ಯಸಭಾ ಸಂಸದ 16. ಲಲ್ಲನ್ ಸಿಂಗ್ [ಜೆಡಿಯು] – ಮುಂಗರ್ ಲೋಕಸಭಾ ಸಂಸದ 17. ರಾಹುಲ್ ಕಸ್ವಾನ್ (ಬಿಜೆಪಿ) – ಚುರು ಲೋಕಸಭಾ ಸಂಸದ 18. ಅಶ್ವಿನಿ ವೈಷ್ಣವ್ (ಬಿಜೆಪಿ) – ರಾಜ್ಯಸಭಾ ಸಂಸದ 19. ಮೀನಾಕ್ಷಿ ಲೇಖಿ (ಬಿಜೆಪಿ) – ನವದೆಹಲಿಯ ಲೋಕಸಭಾ ಸಂಸದೆ 20. ಮನೋಜ್ ತಿವಾರಿ (ಬಿಜೆಪಿ) – ಈಶಾನ್ಯ ದೆಹಲಿಯ ಲೋಕಸಭಾ ಸಂಸದ 21. ಜಮ್ಯಾಂಗ್ ತ್ಸೆರಿಂಗ್ ನಮ್ಯಾಗ್ಯಾಲ್ (ಬಿಜೆಪಿ) – ಲಡಾಕ್ ಮೂಲದ ಲೋಕಸಭಾ ಸಂಸದ
ಇದನ್ನೂ ಓದಿ: ರಾಜ್ಯದಿಂದ ಮೋದಿ ಸಂಪುಟ ಸೇರಲಿದ್ದಾರೆ ಎಡಗೈ ಸಮುದಾಯದ ನಾಯಕ..?
(Narendra Modi likely to expand his council of ministers soon 20 new ministers may be inducted)
Published On - 1:06 pm, Tue, 6 July 21