ದೆಹಲಿ: ವಂಶಪಾರಂಪರ್ಯ ರಾಜಕಾರಣ ಪ್ರಜಾಪ್ರಭುತ್ವದ ಅತಿದೊಡ್ಡ ಶತ್ರು. ಅದನ್ನು ಬುಡಸಮೇತ ಕಿತ್ತು ಎಸೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಗರದಲ್ಲಿ ಮಂಗಳವಾರ ನಡೆದ 2ನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಪಾರಂಪರಿಕ ರಾಜಕೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ರಾಜಕಾರಣಕ್ಕೆ ಯುವ ಜನತೆ ಬರಬೇಕು. ಕೆಲವೊಂದು ಸಕಾರಾತ್ಮಕ ಬದಲಾವಣೆಗಾಗಿ ಯುವ ಜನತೆಯು ಅನಿವಾರ್ಯವಾಗಿ ರಾಜಕೀಯಕ್ಕೆ ಕಾಲಿಡಬೇಕಾಗುತ್ತದೆ ಎಂದು ತಿಳಿಸಿದರು.
ಕುಟುಂಬ ರಾಜಕಾರಣ ಉಳಿಸುವ ನಿಟ್ಟಿನಲ್ಲಿ ಹಲವರು ಯೋಚಿಸುತ್ತಾರೆ. ಇದು ದೇಶದ ಅಭಿವೃದ್ದಿಗೆ ಒಳಿತಲ್ಲ. ನಿಸ್ವಾರ್ಥ ಮನಸ್ಸಿನಿಂದ ರಾಜಕೀಯಕ್ಕೆ ಬರಬೇಕಾಗುತ್ತದೆ ಎಂದು ತಿಳಿಸಿದ ಪ್ರಧಾನಿ ಮೋದಿ ವಿವೇಕಾನಂದರ ವಿಚಾರಗಳು ಎಲ್ಲರಿಗೂ ಸ್ಫೂರ್ತಿ. ಇವರ ವಿಚಾರಗಳನ್ನು ಮನಗಂಡು ಸಾಗಿದರೆ ಯಶಸ್ಸು ಸಾಧ್ಯವೆಂದರು.
ರಾಜಕೀಯ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ಕಾಲಿಡಬೇಕು. ಯಾವುದೇ ರೀತಿಯ ಸ್ವಾರ್ಥಕ್ಕೆ ಒಳಪಡದೇ ಇದ್ದಾಗ ಜನರು ಮೆಚ್ಚಿಕೊಳ್ಳುತ್ತಾರೆ ಎಂದು ತಿಳಿ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆದ ಯುವ ಸಂಸತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾಗವಹಿಸಿದ್ದರು.
ಸಾಮುದಾಯಿಕ ರೋಗ ಪ್ರತಿರೋಧ ಶಕ್ತಿ ಹೆಚ್ಚಾಗುತ್ತಿಲ್ಲ.. ಹಾಗಾದರೆ ಏನು ಮಾಡಬೇಕು? WHO ಹೇಳುವುದೇನು?