ಅಪ್ರಾಪ್ತ ಬಾಲಕಿಯ ಶವ ಪತ್ತೆ, ಕೊಲೆ ಶಂಕೆ
ಸುಮಾರು 16 ವರ್ಷದ ಬಾಲಕಿ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದಳು. ಆಕೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಅಪಹರಣಕಾರರು ಕುಟುಂಬಸ್ಥರಿಗೆ ತಿಳಿಸಿ, ₹ 5 ಲಕ್ಷ ಹಣ ನೀಡುವಂತೆ ಒತ್ತಡ ಹೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪಾಟ್ನಾ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅಲಿಗಡ್ ಗಾಂಧಿ ಪಾರ್ಕ್ ರೈಲ್ವೆ ಹಳಿ ಬಳಿ ಶವ ಸಿಕ್ಕಿದೆ.
ಸುಮಾರು 16 ವರ್ಷದ ಬಾಲಕಿ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದಳು. ಆಕೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಅಪಹರಣಕಾರರು ಕುಟುಂಬಸ್ಥರಿಗೆ ತಿಳಿಸಿ, ₹ 5 ಲಕ್ಷ ಹಣ ನೀಡುವಂತೆ ಒತ್ತಡ ಹೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.
₹ 5 ಲಕ್ಷ ಹಣ ನೀಡದಿದ್ದರೆ ಬಾಲಕಿಯ ಅತ್ಯಾಚಾರ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಭಯಗೊಂಡ ಕುಟುಂಬಸ್ಥರು ನಂತರ ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೆ ಇದೀಗ ಗಾಂಧಿ ಪಾರ್ಕ್ ರೈಲ್ವೆ ಹಳಿಯ ಬಳಿ ಬಾಲಕಿ ಶವ ಸಿಕ್ಕಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ಎದ್ದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಮಾತನಾಡಿರುವ ಪೊಲೀಸರು ಶವ ಸಿಕ್ಕ ಜಾಗದಲ್ಲಿ ಡೆತ್ ನೋಟ್ ಸಿಕ್ಕಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳಲು ಗೋಲ್ಡ್ ಕಂಪನಿಗೆ ದೋಖಾ: ಸೂಟು ಬೂಟು ಧರಿಸಿ ಬಂದ ‘ನರಿ’ ಖಾಕಿ ಬಲೆಗೆ!