Parliament Special Session: ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಮಲಗುವ ಮಗು ಸಂಸತ್ ತಲುಪುತ್ತೆ ಎಂದರೆ ಇದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ: ಮೋದಿ

ಪ್ರಧಾನಿ ನರೇಂದ್ರ ಮೋದಿ(Narendra Modi) ಯವರು ಸಂಸದರಾಗಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಸಂದರ್ಭವನ್ನು ಮೆಲುಕು ಹಾಕಿದರು. ನಾನು ಮೊದಲ ಬಾರಿಗೆ ಸಂಸತ್ ಭವನವನ್ನು ಪ್ರವೇಶಿಸಿದಾಗ ಸಹಜವಾಗಿಯೇ ಸಂಸತ್ ಭವನದ ಹೊಸ್ತಿಲಿನಲ್ಲಿ ತಲೆ ಬಾಗಿಸಿದ್ದೆ, ಈ ಪ್ರಜಾಪ್ರಭುತ್ವದ ಮಂದಿರದ ಮೇಲೆ ಭಕ್ತಿಯಿಂದ ಹೆಜ್ಜೆ ಹಾಕಿದ್ದೆ, ಆ ಕ್ಷಣ ನನ್ನ ಮನ ತುಂಬಿ ಬಂದಿತ್ತು, ನಾನು ಊಹಿಸಲೂ ಸಾಧ್ಯವಿರಲಿಲ್ಲ.

Parliament Special Session: ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಮಲಗುವ ಮಗು ಸಂಸತ್ ತಲುಪುತ್ತೆ ಎಂದರೆ ಇದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ: ಮೋದಿ
ನರೇಂದ್ರ ಮೋದಿ

Updated on: Sep 18, 2023 | 12:09 PM

ಪ್ರಧಾನಿ ನರೇಂದ್ರ ಮೋದಿ(Narendra Modi) ಯವರು ಸಂಸದರಾಗಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಸಂದರ್ಭವನ್ನು ಮೆಲುಕು ಹಾಕಿದರು. ನಾನು ಮೊದಲ ಬಾರಿಗೆ ಸಂಸತ್ ಭವನವನ್ನು ಪ್ರವೇಶಿಸಿದಾಗ ಸಹಜವಾಗಿಯೇ ಸಂಸತ್ ಭವನದ ಹೊಸ್ತಿಲಿನಲ್ಲಿ ತಲೆ ಬಾಗಿಸಿದ್ದೆ, ಈ ಪ್ರಜಾಪ್ರಭುತ್ವದ ಮಂದಿರದ ಮೇಲೆ ಭಕ್ತಿಯಿಂದ ಹೆಜ್ಜೆ ಹಾಕಿದ್ದೆ, ಆ ಕ್ಷಣ ನನ್ನ ಮನ ತುಂಬಿ ಬಂದಿತ್ತು, ನಾನು ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಮಲಗುವ ಮಗು ಸಂಸತ್ತನ್ನು ಪ್ರವೇಶಿಸುತ್ತದೆ ಎಂದರೆ ಇದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ, ದೇಶ ನನ್ನನ್ನು ಇಷ್ಟು ಗೌರವಿಸುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದಿದ್ದಾರೆ.

ನಾವು ಹೊಸ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ ನಿಜ ಆದರೆ ಹಳೆಯ ಭವನವು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತಿರುತ್ತದೆ ಎಂದರು. ಇಂದಿನಿಂದ ಆರಂಭವಾದ ಸಂಸತ್ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಹಳೆ ಸಂಸತ್ ಭವನದಲ್ಲಿ ನಡೆಯಲಿರುವ ಕೊನೆಯ ಅಧಿವೇಶನ ಐತಿಹಾಸಿಕವಾಗಲಿದೆ. ಸ್ವಾತಂತ್ರ್ಯಕ್ಕೂ ಮುನ್ನ ಇದನ್ನು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಎಂದು ಕರೆಯುತ್ತಿದ್ದೆವು, ಸ್ವಾತಂತ್ರ್ಯ ನಂತರ ಸದನ ಎಂದು ಕರೆಯಲು ಶುರು ಮಾಡಿದೆವು. ಭಾರತದ ನಿರ್ಮಾಣದ ನಿರ್ಣ ವಿದೇಶಿ ಶಾಸಕರದ್ದಾಗಿತ್ತು.

ಆದರೆ ಈ ಸಂಸತ್ ಭವನ ನಿರ್ಮಾಣದಲ್ಲಿ ಬೆವರು ಭಾರತೀಯರದ್ದಿದೆ, ಪರಿಶ್ರಮ ನಮ್ಮ ದೇಶದವರದ್ದು, ಹಣ ಕೂಡ ನಮ್ಮ ದೇಶದವರದ್ದು. ಹೀಗಾಗಿ ಈ ಹಳೆಯ ಸಂಸತ್ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ .
ಈ ಅಮೃತ ಕಾಲದಲ್ಲಿ ಹೊಸ ಹುಮ್ಮಸ್ಸು, ಹೊಸ ಉತ್ಸಾಹ, ಹೊಸ ಸಂಕಲ್ಪವನ್ನು ಹೊತ್ತು ಹೊಸ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ಭಾರತದ ಹೊಸ ಸಾಮರ್ಥ್ಯಕ್ಕೆ ಇಡೀ ವಿಶ್ವವೇ ಬೆರಗಾಗುತ್ತಿದೆ.

ಮತ್ತಷ್ಟು ಓದಿ: Parliament Special Session: ನಾವು ಹೊಸ ಸಂಸತ್ ​ಭವನಕ್ಕೆ ಹೋಗುತ್ತಿರುವುದು ನಿಜ ಆದರೆ ಹಳೆಯ ಭವನವು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತಿರುತ್ತದೆ: ನರೇಂದ್ರ ಮೋದಿ

ಈ ಅಮೃತಕಾಲದಲ್ಲಿಯೇ ಚಂದ್ರಯಾನವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಹೊಸ ರೂಪ, ಆಧುನಿಕತೆ, ವಿಜ್ಞಾನ, ತಂತ್ರಜ್ಞಾನ, ವಿಜ್ಞಾನಿಗಳ ಸಾಮರ್ಥ್ಯ, ಸಂಕಲ್ಪ ಶಕ್ತಿಯಿಂದ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಜಿ-20 ಯಶಸ್ಸು ದೇಶದ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದು ಭಾರತದ ಯಶಸ್ಸು, ಯಾವುದೇ ವ್ಯಕ್ತಿಯ ಅಥವಾ ಯಾವುದೇ ಪಕ್ಷದ ಯಶಸ್ಸಲ್ಲ. ಇದು ದೇಶದ ಹೆಮ್ಮೆಯನ್ನು ಹೆಚ್ಚಿಸಲಿದೆ. ಭಾರತವು ಜಿ 20 ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದೆ ಎಂಬ ಅಂಶದ ಬಗ್ಗೆ ಭಾರತವು ಯಾವಾಗಲೂ ಹೆಮ್ಮೆಪಡುತ್ತದೆ. ಸ್ವಾತಂತ್ರ್ಯ ಬಂದ ನಂತರವೂ ದೇಶದ ಅನೇಕ ಜನರಲ್ಲಿ ದೇಶದ ಬಗ್ಗೆ ಅನುಮಾನದ ಭಾವನೆ ಇದೆ ಎಂದರು.

ಯಾರಾದರೂ ತನ್ನ ಹಳೆಯ ಮನೆಯನ್ನು ತೊರೆದು ಹೊಸದಕ್ಕೆ ಹೋದಾಗ, ಹಳೆಯ ನೆನಪುಗಳು ಕಾಡುತ್ತಿರುತ್ತದೆ, ಇಂದು ಸಂಸತ್ತಿನಲ್ಲಿ ನಮ್ಮ ಮನಸ್ಸು ಕೂಡ ನೆನಪುಗಳಿಂದ ತುಂಬಿದೆ. ಇಲ್ಲಿ ನಾವು ಸಿಹಿ ಮತ್ತು ಕಹಿ ಕ್ಷಣಗಳನ್ನು ನೋಡಿದ್ದೇವೆ, ಸ್ವತಂತ್ರ ಭಾರತದ ಪುನರ್ನಿರ್ಮಾಣಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ಈ 75 ವರ್ಷಗಳಲ್ಲಿ ಈ ಸದನದ ನಡೆದಿದ್ದವು ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us