ಗುಜರಾತ್‌ನಲ್ಲಿ ನಾಳೆ ಮಿಯಾವಾಕಿ ಅರಣ್ಯ, ಮೇಜ್ ಗಾರ್ಡನ್ ಉದ್ಘಾಟನೆ; ಈ ಹೊಸ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿಗಳ ಕಚೇರಿ ಹೊರಡಿಸಿದ ಹೇಳಿಕೆಯ ಪ್ರಕಾರ, ಮೇಜ್ ಗಾರ್ಡನ್ ಮೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಇದು ದೇಶದಲ್ಲೇ ಅತಿ ದೊಡ್ಡ ಉದ್ಯಾನವಾಗಿದೆ

ಗುಜರಾತ್‌ನಲ್ಲಿ ನಾಳೆ ಮಿಯಾವಾಕಿ ಅರಣ್ಯ, ಮೇಜ್ ಗಾರ್ಡನ್ ಉದ್ಘಾಟನೆ; ಈ ಹೊಸ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ
ಮೇಜ್ ಗಾರ್ಡನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 30, 2022 | 6:31 PM

ಗುಜರಾತ್‌ನಲ್ಲಿ ನಾಳೆ(ಸೋಮವಾರ) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೆವಾಡಿಯಾದಲ್ಲಿ ಎರಡು ಹೊಸ ಪ್ರವಾಸಿ ಆಕರ್ಷಣೆಗಳಾದ ಮೇಜ್ ಗಾರ್ಡನ್ (Maze Garden) ಮತ್ತು ಮಿಯಾವಾಕಿ ಅರಣ್ಯವನ್ನು (Miyawaki Forest) ಉದ್ಘಾಟಿಸಲಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿ (PMO) ಹೊರಡಿಸಿದ ಹೇಳಿಕೆಯ ಪ್ರಕಾರ, ಮೇಜ್ ಗಾರ್ಡನ್ ಮೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಇದು ದೇಶದಲ್ಲೇ ಅತಿ ದೊಡ್ಡ ಉದ್ಯಾನವಾಗಿದೆ. ಮಿಯಾವಾಕಿ ಅರಣ್ಯವನ್ನು ಸುಮಾರು ಎರಡು ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರ ತಂತ್ರವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.

ಕೆವಾಡಿಯಾದಲ್ಲಿನ ಎರಡು ಹೊಸ ಪ್ರವಾಸಿ ಆಕರ್ಷಣೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಮೇಜ್ ಗಾರ್ಡನ್

  1. ಮೇಜ್ ಗಾರ್ಡನ್ ಮೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ, ಇದು ಭಾರತದಲ್ಲಿನ ದೊಡ್ಡ ಉದ್ಯಾನವನವಾಗಿದೆ.
  2. ಉದ್ಯಾನವು ಸುಮಾರು 2.1 ಕಿಲೋಮೀಟರ್ ಮಾರ್ಗವನ್ನು ಹೊಂದಿದೆ ಎಂದು ಪಿಎಂಒ ಹೇಳಿಕೆ ತಿಳಿಸಿದೆ. ಇದನ್ನು ‘ಶ್ರೀಯಂತ್ರ’ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ, ಇದು ಸ್ಥಳಕ್ಕೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ.
  3. ಉದ್ಯಾನದಲ್ಲಿ 1.8 ಲಕ್ಷ ಸಸಿಗಳನ್ನು ನೆಡಲಾಗಿದೆ. ಇದು ಭೂದೃಶ್ಯದ ಸೌಂದರ್ಯವನ್ನು ಹೆಚ್ಚಿಸಿದೆ ಎಂದು ಪಿಎಂಒ ಹೇಳಿಕೆಯಲ್ಲಿ ಸೇರಿಸಲಾಗಿದೆ. ಆರೆಂಜ್ ಜೆಮಿನ್, ಮಧು ಕಾಮಿನಿ, ಗ್ಲೋರಿ ಬೋವರ್ ಮತ್ತು ಮೆಹಂದಿ ಸಸಿಗಳು ಇಲ್ಲಿವೆ.
  4. ಈ ಸ್ಥಳವು ಮೂಲತಃ  ಅವಶೇಷಗಳ ಡಂಪಿಂಗ್  ತಾಣವಾಗಿತ್ತು, ಅದು ಈಗ ಹಸಿರು ಭೂದೃಶ್ಯವಾಗಿ ಮಾರ್ಪಟ್ಟಿದೆ. ಈ ಭೂಮಿ ಸುತ್ತಮುತ್ತಲ ಪ್ರದೇಶವನ್ನು ಸುಂದರಗೊಳಿಸುವುದಲ್ಲದೆ, ಪಕ್ಷಿಗಳು, ಚಿಟ್ಟೆಗಳು ಮತ್ತು ಜೇನುನೊಣಗಳು ಅಭಿವೃದ್ಧಿ ಹೊಂದುತ್ತಿರುವ ಚಂದದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡಿದೆ.

ಮಿಯಾವಾಕಿ ಅರಣ್ಯ

  1. ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರು ಪ್ರವರ್ತಿಸಿದ ತಂತ್ರವನ್ನು ಬಳಸಿಕೊಂಡು ಅರಣ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕಡಿಮೆ ಅವಧಿಯಲ್ಲಿ ದಟ್ಟವಾದ, ಸ್ಥಳೀಯ ಕಾಡುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
  2. ಈ ವಿಧಾನವನ್ನು ಬಳಸಿಕೊಂಡು ಸಸ್ಯಗಳ ಬೆಳವಣಿಗೆಯು ಹತ್ತು ಪಟ್ಟು ವೇಗವಾಗಿರುತ್ತದೆ. ಇದರ ಪರಿಣಾಮವಾಗಿ, ಅಭಿವೃದ್ಧಿ ಹೊಂದಿದ ಅರಣ್ಯವು ಮೂವತ್ತು ಪಟ್ಟು ದಟ್ಟವಾಗಿರುತ್ತದೆ.
  3. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಹರಡಿರುವ ಮಿಯಾವಾಕಿ ಅರಣ್ಯವು ಸ್ಥಳೀಯ ಹೂವಿನ ಉದ್ಯಾನ, ಒಂದು ಟಿಂಬರ್ ಗಾರ್ಡನ್,  ಒಂದು ಹಣ್ಣಿನ ಉದ್ಯಾನ; ಒಂದು ಔಷಧೀಯ ಉದ್ಯಾನ, ಮಿಶ್ರ ಜಾತಿಗಳ ಮಿಯಾವಾಕಿ ವಿಭಾಗ,ಡಿಜಿಟಲ್ ಓರಿಯಂಟೇಶನ್ ಸೆಂಟರ್ ಅನ್ನು ಹೊಂದಿದೆ.
  4. ಮೇಜ್ ಗಾರ್ಡನ್ ಮತ್ತು ಮಿಯಾವಾಕಿ ಅರಣ್ಯವು ಐಕಾನಿಕ್ ಸ್ಟ್ಯಾಚ್ಯೂ ಆಫ್ ಯೂನಿಟಿಯ ಪ್ರವಾಸಿ ಮೌಲ್ಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಸರ್ದಾರ್‌ ಪಟೇಲರ ಬಾನೆತ್ತರದ ಏಕತಾ ಪ್ರತಿಮೆಗೆ ಮೆರುಗು ನೀಡುವ ಮೇಜ್‌ ಗಾರ್ಡನ್‌ ಹೇಗಿದೆ ನೋಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ