ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 17 ರಂದು ವಿಶ್ವ ಆರ್ಥಿಕ ವೇದಿಕೆಯ (World Economic Forum WEF) ಆನ್‌ಲೈನ್ ದಾವೋಸ್ ಅಜೆಂಡಾ 2022 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆದಾಗ್ಯೂ, ಈ ವೇಳೆ ಭಾಷಣದ ಮಧ್ಯೆ ಅಡಚಣೆಯುಂಟಾಗಿ ಮೋದಿ ತಡವರಿಸುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರ ದೊಡ್ಡ ವಿಭಾಗವು ಮೋದಿ ಭಾಷಣದ ನಡುವೆ ಟೆಲಿಪ್ರಾಂಪ್ಟರ್ ಕೈಕೊಟ್ಟಿದೆ ಎಂದು ಹೇಳಿವೆ. ಅದೇ ವೇಳೆ ಮೋದಿಗೆ ಟೆಲಿಪ್ರಾಂಪ್ಟರ್ ಇಲ್ಲದೆ ಭಾಷಣ ಮಾಡಲು ಸಾಧ್ಯವೇ ಇಲ್ಲ ಎಂಬುದಕ್ಕೆ ಪುರಾವೆ ಇದು ಎಂದು ಲೇವಡಿ ಮಾಡಲಾಗಿದೆ. ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯು #TelepromptorPM ಹ್ಯಾಶ್‌ಟ್ಯಾಗ್ ಜೊತೆಗೆ ಲೈವ್ ಸ್ಟ್ರೀಮ್ ಸಮಯದಲ್ಲಿ ಅಡಚಣೆ ಕಂಡು ಬಂದ 37 ಸೆಕೆಂಡುಗಳ ವಿಡಿಯೊವನ್ನು ಪೋಸ್ಟ್ ಮಾಡಿದೆ. #TelepromptorPM ಎಂಬ ಹ್ಯಾಶ್‌ಟ್ಯಾಗ್ ಬಳಸಿ ಹಲವಾರು ಕಾಂಗ್ರೆಸ್ ನಾಯಕರು ಪ್ರಧಾನಮಂತ್ರಿಯವರ ಕಾಲೆಳೆದಿದ್ದಾರೆ. ಕಾಂಗ್ರೆಸ್ ವಕ್ತಾರ ಶಮಾ ಮೊಹಮ್ಮದ್, ಪಶ್ಚಿಮ ಬಂಗಾಳ ಕಾಂಗ್ರೆಸ್, ಪಶ್ಚಿಮ ಬಂಗಾಳ ಪ್ರದೇಶ ಮಹಿಳಾ ಕಾಂಗ್ರೆಸ್, ಮಣಿಪುರ ಪ್ರದೇಶ ಕಾಂಗ್ರೆಸ್ ಸೇವಾದಳ ಮತ್ತು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸೇವಾದಳ ಕೂಡ ಇದೇ ರೀತಿ ಲೇವಡಿ ಮಾಡಿದೆ.
Teleprompter guy: Achha chalta hun, duaon mein yaad rakhna#TeleprompterPM pic.twitter.com/1Zy11MF984
— Congress (@INCIndia) January 17, 2022
ಮೋದಿ ಮಾತನಾಡಲು ಟೆಲಿಪ್ರಾಂಪ್ಟರ್ ಬಳಸುತ್ತಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿಯ ಹಳೆಯ ವಿಡಿಯೊ, ಮತ್ತು ಬಲಭಾಗದಲ್ಲಿ ದಾವೋಸ್‌ನಲ್ಲಿ ಪ್ರಧಾನಿ ಮೋದಿಯವರ ಅಡ್ಡಿಪಡಿಸಿದ ಭಾಷಣದ ವಿಡಿಯೊ ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಎರಡು ಮೋದಿಯವರ ಕಾಲೆಳೆದಿದ್ದಾರೆ. ಈ ವಿಡಿಯೊವನ್ನು ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ ಮತ್ತು ರಾಮ್‌ಕಿಶನ್ ಓಜಾ, ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸೇವಾದಳ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸೇವಾದಳ ಕೂಡಾ ಹಂಚಿಕೊಂಡಿದೆ. ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ಇದೇ ರೀತಿ ಹೇಳಿದ್ದಾರೆ .
As always Rahul ji’s prediction about PM has come true…
This is embarrassing for all Indians.#TeleprompterPM pic.twitter.com/bfloBs8GnG
— Revanth Reddy (@revanth_anumula) January 18, 2022
ಅಡಚಣೆಯಾಗಿದ್ದು ಟೆಲಿಪ್ರಾಂಪ್ಟರ್ನಿಂದ ಅಲ್ಲ
ವರ್ಲ್ಡ್ ಎಕನಾಮಿಕ್ ಫೋರಮ್ (ಡಬ್ಲ್ಯುಇಎಫ್) ಆನ್‌ಲೈನ್ ಈವೆಂಟ್‌ನಲ್ಲಿ ಪ್ರಧಾನಿ ಮೋದಿಯವರ ಭಾಷಣಕ್ಕೆ ಸಂಬಂಧಿಸಿದ ವಿವಾದವನ್ನು ಅರ್ಥಮಾಡಿಕೊಳ್ಳಲು, ಅಡಚಣೆಗೆ ಕಾರಣವಾಗುವ ಘಟನೆಗಳ ಅನುಕ್ರಮವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಡಬ್ಲ್ಯುಇಎಫ್ ನಲ್ಲಿ ಪ್ರಧಾನಿ ಮೋದಿಯವರ ಭಾಷಣವು ಈ ಕೆಳಗಿನ YouTube ಚಾನಲ್‌ಗಳಲ್ಲಿ ಲಭ್ಯವಿದೆ – ನರೇಂದ್ರ ಮೋದಿ, ದೂರದರ್ಶನ ನ್ಯಾಷನಲ್ ಮತ್ತು ವಿಶ್ವ ಆರ್ಥಿಕ ವೇದಿಕೆ (World Economic Forum). ಡಿಡಿ ಮತ್ತು ಡಬ್ಲ್ಯುಇಎಫ್ ಚಾನೆಲ್‌ಗಳಂತೆ ನರೇಂದ್ರ ಮೋದಿಯವರ ಚಾನೆಲ್ ನಲ್ಲಿ ಅಡಚಣೆ ಆಗಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಆಲ್ಟ್ ನ್ಯೂಸ್ ಈ ರೀತಿ ವಿವರಿಸಿದೆ.
ಡಿಡಿ ಆವೃತ್ತಿಯ ವಿಡಿಯೊದಲ್ಲಿ ಪ್ರಧಾನಿ ಈಗಾಗಲೇ ಆರು ನಿಮಿಷಗಳ ಕಾಲ ಮಾತನಾಡುತ್ತಿರುವಾಗ, ಅವರ ಭಾಷಣದ ಈ ಭಾಗವನ್ನು ಡಬ್ಲ್ಯುಇಎಫ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿಲ್ಲ ಎಂಬುದನ್ನು ಗಮನಿಸಬಹುದು. ನಿಜವಾಗಿ ಲೈವ್ ಸ್ಟ್ರೀಮ್‌ನ ಡಬ್ಲ್ಯುಇಎಫ್ನಆವೃತ್ತಿಯ ಮೊದಲ ಎಂಟು ನಿಮಿಷಗಳು ಬ್ಲಾಂಕ್ ಆಗಿದೆ ಮತ್ತು ಲೈವ್ ಸ್ಟ್ರೀಮ್ ಪ್ರಾರಂಭವಾದಾಗ ಪ್ರಧಾನಿ ಈಗಾಗಲೇ ಭಾಷಣದ ಮಧ್ಯೆ ತಲುಪಿರುವುದನ್ನು ಅಂದರೆ ಅರ್ಧ ಭಾಷಣ ಮುಗಿಸಿರುವುದನ್ನು ಕಾಣಬಹುದು. ಡಬ್ಲ್ಯುಇಎಫ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಧಾನಮಂತ್ರಿಯ ಭಾಷಣದ ಆರಂಭಿಕ ಭಾಗವನ್ನು ಲೈವ್-ಸ್ಟ್ರೀಮ್ ಮಾಡದ ಕಾರಣ ತಾಂತ್ರಿಕ ದೋಷವಿತ್ತು ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ.
ಎಲ್ಲಾ ಟೈಮ್‌ಸ್ಟ್ಯಾಂಪ್‌ಗಳು ಡಿಡಿಯಿಂದ ಬಂದಿವೆ ಎಂಬುದನ್ನು ಓದುಗರು ಗಮನಿಸಬೇಕು.
ಡಿಡಿಯ ಯೂಟ್ಯೂಬ್ ಚಾನೆಲ್‌ನಲ್ಲಿನ ವಿಡಿಯೊದ ಆರಂಭಿಕ ನಾಲ್ಕು ನಿಮಿಷಗಳಲ್ಲಿ, ಪಿಎಂ ಮೋದಿ ಮತ್ತು ಹೋಸ್ಟ್, ಡಬ್ಲ್ಯುಇಎಫ್ ಎಕ್ಸಿಕ್ಯೂಟಿವ್ ಚೇರ್ಮನ್ ಕ್ಲಾಸ್ ಶ್ವಾಬ್ ಸ್ವಾಗತ ಮಾತು ವಿನಿಮಯ ಮಾಡಿಕೊಂಡರು. 5:04 ಕ್ಕೆ, ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಇಲ್ಲಿ ಯಾವುದೇ ಪರಿಚಯ ಮಾಡುವ ಮಾತುಗಳಿರಲಿಲ್ಲ. ಆದಾಗ್ಯೂ, ಕೆಲವು ಸೆಕೆಂಡುಗಳ ಮೊದಲು [5:00 ರಿಂದ 5:01 ನಿಮಿಷಕ್ಕೆ], ಒಬ್ಬ ವ್ಯಕ್ತಿಯು ಇಂಗ್ಲಿಷ್‌ನಲ್ಲಿ “ಗ್ರಾಫಿಕ್ಸ್ ಸರ್?” ಎಂದು ಕೇಳುವುದನ್ನು ಕೇಳಬಹುದು. ಅದರ ನಂತರ ಪ್ರಧಾನಿ 5:12 ಕ್ಕೆ ತಮ್ಮ ಇಯರ್‌ಪೀಸ್ ಅನ್ನು ತೆಗೆದು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ.
ಆದಾಗ್ಯೂ, 7:07 ನಿಮಿಷಕ್ಕೆ ಪ್ರಧಾನಿ ಮೋದಿ ಎಡಕ್ಕೆ ನೋಡುತ್ತಾರೆ ಮತ್ತು ಮಾತನಾಡುವುದನ್ನು ನಿಲ್ಲಿಸುತ್ತಾರೆ. ಸುಮಾರು, 7:15, ಅವರು ಆತಿಥೇಯರನ್ನು ಸಂಬೋಧಿಸಿ “ನಿಮಗೆ ನನ್ನ ದನಿ ಕೇಳಿಸುತ್ತಿದೆಯೇ ಎಂದು ಕೇಳುತ್ತಾರೆ?” ಶ್ವಾಬ್ ಅವರು ಪಿಎಂ ಮೋದಿಗೆ ಕೇಳುತ್ತದೆ ಎಂದು ಖಚಿತಪಡಿಸಿದ್ದಾರೆ. ಆಗ ಪ್ರಧಾನಮಂತ್ರಿಯವರು “ನಮ್ಮ ಇಂಟರ್ಪ್ರಿಟರ್ ಕೂಡ ಕೇಳುತ್ತದೆಯೇ?” ಎಂದು ಕೇಳುತ್ತದೆ. ಶ್ವಾಬ್ ಹೂಂ ಅಂತಾರೆ ಮತ್ತು “ಸಂಗೀತದೊಂದಿಗೆ ಒಂದು ಸಣ್ಣ ಪರಿಚಯದ ನಂತರ” ಅಧಿಕೃತ ಅಧಿವೇಶನವು ((7:45 ನಿಮಿಷದಲ್ಲಿ)ಮತ್ತೆ ಪ್ರಾರಂಭವಾಗುತ್ತದೆ.
10:49 ನಿಮಿಷದಲ್ಲಿ, ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪುನರಾರಂಭಿಸುತ್ತಾರೆ. ಅವರ ಭಾಷಣವು 5:04 ನೇ ನಿಮಿಷಯದಲ್ಲಿ ಅವರ ಹಿಂದಿನ ಆರಂಭಿಕ ಹೇಳಿಕೆಗಳೇ ಎಂಬುದನ್ನು ಗಮನಿಸಬೇಕು. ಸಂವಾದಕ್ಕೆ ಟೆಲಿಪ್ರೊಂಪ್ಟರ್ ಅನ್ನು ಬಳಸುವುದು ಸಾಮಾನ್ಯ ಸಂಗತಿ ಆಗಿದೆ.
ಡಬ್ಲ್ಯುಇಎಫ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ವಿಡಿಯೊವನ್ನು ವೀಕ್ಷಿಸಿದ ನಂತರ, ಪಿಎಂ ಮೋದಿ ಎಡಕ್ಕೆ ನೋಡಿದಾಗ ನಿಖರವಾದ ಕ್ಷಣದಲ್ಲಿ, ಈವೆಂಟ್ ಮ್ಯಾನೇಜ್‌ಮೆಂಟ್ ತಂಡದಿಂದ ಈವೆಂಟ್ ಅನ್ನು ಸ್ಪಷ್ಟವಾಗಿ ನಿರ್ವಹಿಸುತ್ತಿದ್ದ ಯಾರೋ ಒಬ್ಬರು ಪ್ರಧಾನ ಮಂತ್ರಿಯವರು ಎಲ್ಲರೂ ಸೇರಿದ್ದಾರೆಯೇ ಅಥವಾ ಇಲ್ಲವೇ ಎಂದು ಕೇಳಬೇಕೆಂದು ಸೂಚಿಸುತ್ತಾರೆ. ಹಿಂದಿಯಲ್ಲಿ ಒಂದು ಧ್ವನಿಯು ಪ್ರಧಾನಿ ಮೋದಿಯನ್ನು ಉದ್ದೇಶಿಸಿ, “ಸರ್, ಎಲ್ಲರೂ ಸೇರಿದ್ದಾರೆಯೇ ಅವರನ್ನು ಒಮ್ಮೆ ಕೇಳಿ… ಎಂದು ಹೇಳುವುದು ಕೇಳಿಸುತ್ತದೆ”. ಇದಾದ ನಂತರವೇ ಪ್ರಧಾನಿಯವರು ತಮ್ಮ ಭಾಷಣ ಮತ್ತು ದುಭಾಷಿಯ ಧ್ವನಿ ಕೇಳುತ್ತಿದೆಯೇ ಎಂದು ವಿಚಾರಿಸುತ್ತಾರೆ. ಹೀಗಾಗಿ, ಕಾರ್ಯಕ್ರಮವನ್ನು ನಿರ್ವಹಿಸುವ ತಂಡದಿಂದ ಮಧ್ಯಪ್ರವೇಶಿಸಿದ್ದರಿಂದಲೇ ಪ್ರಧಾನಿ ಮೋದಿ ಮಾತನಾಡುವುದನ್ನು ನಿಲ್ಲಿಸಿದ್ದಾರೆ.
ಅಡಚಣೆ ಇರುವುದನ್ನು ಮನಗಂಡ ಕ್ಲಾಸ್ ಶ್ವಾಬ್ ಪ್ರಧಾನಿಯನ್ನು ಪರಿಚಯಿಸಿದರು ಮತ್ತು ಪ್ರಧಾನಿ ಮತ್ತೆ ಭಾಷಣ ಆರಂಭಿಸಿದರು. ಈವೆಂಟ್‌ಗಳ ಅನುಕ್ರಮವು ತಾಂತ್ರಿಕ ದೋಷದಿಂದಾಗಿ ಅಡಚಣೆಯಾಗಿದೆ ಮತ್ತು ಟೆಲಿಪ್ರೊಂಪ್ಟರ್ ಕೈಕೊಟ್ಟಿದ್ದಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.
ಇದನ್ನೂ ಓದಿ: ಗೌರವ ಹೆಚ್ಚಿಸಿಕೊಂಡ ಇಳಕಲ್ ಸೀರೆ, ಗುಳೇದಗುಡ್ಡ ಖಣ; ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಆಯ್ಕೆ