
ನವದೆಹಲಿ, ಅಕ್ಟೋಬರ್ 16: ಕೇಂದ್ರ ಸರ್ಕಾರವು 2047ರ ವೇಳೆಗೆ ವಿಕಸಿತ ಭಾರತದ (Viksit Bharat) ಗುರಿಯತ್ತ ಸಾಗುತ್ತಿದೆ. ಎಲ್ಲಾ ವಲಯಗಳಲ್ಲಿ ಅಭಿವೃದ್ಧಿ ಸಾಧಿಸಲು ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಇದರ ಭಾಗವಾಗಿ ಬುಡಕಟ್ಟು ಅಭಿವೃದ್ಧಿಯ ಗುರಿಯೊಂದಿಗೆ ಅಕ್ಟೋಬರ್ 17ರಂದು ನವದೆಹಲಿಯಲ್ಲಿ ಆದಿ ಕರ್ಮಯೋಗಿ (Adi Karmayogi) ಅಭಿಯಾನದ ರಾಷ್ಟ್ರೀಯ ಸಮಾವೇಶ ನಡೆಯಲಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಬುಡಕಟ್ಟು ನಾಯಕತ್ವವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.
ಬುಡಕಟ್ಟು ಸಬಲೀಕರಣ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವೆ ದುರ್ಗಾ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: ಆದಿ ಕರ್ಮಯೋಗಿ ಅಭಿಯಾನ ಆರಂಭ; ವಿಷನ್ 2030ರ ದೊಡ್ಡ ಯೋಜನೆಗಳಿವು
ಪ್ರಧಾನಿ ನರೇಂದ್ರ ಮೋದಿಯವರ ಆಶ್ರಯದಲ್ಲಿ PMJANMAN, DAJAGUAನಂತಹ ಹಲವು ಮಹತ್ವದ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ಪ್ರಾರಂಭಿಸಿದ್ದಾರೆ. ವಿಕಸಿತ ಭಾರತ್ @2047ಗಾಗಿ ತಳಮಟ್ಟದ ಆಡಳಿತವನ್ನು ಸಬಲೀಕರಣಗೊಳಿಸಲು ಆದಿ ಕರ್ಮಯೋಗಿ ಅಭಿಯಾನ 2025ರ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆದಿ ಕರ್ಮಯೋಗಿ ಅಭಿಯಾನ ಮತ್ತು ಧರ್ತಿ ಆಬಾ ಜನ್ ಭಾಗೀದಾರಿ ಅಭಿಯಾನದ ಅಡಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುವುದು.
ಇದನ್ನೂ ಓದಿ: ಬುಡಕಟ್ಟು ಸಮುದಾಯಗಳ ಏಳ್ಗೆಗೆ ಕೇಂದ್ರದಿಂದ ‘ಆದಿ ಕರ್ಮಯೋಗಿ’ ಆಂದೋಲನ; 20 ಲಕ್ಷ ಜನರ ತಂಡ ಅಖಾಡಕ್ಕೆ
ಪ್ರಧಾನ ಮಂತ್ರಿಗಳು ಘೋಷಿಸಿದ ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, PMJANMAN, ಧರ್ತಿ ಆಬಾ ಅಭಿಯಾನದ ಜೊತೆಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2025ರ ಅಕ್ಟೋಬರ್ 17ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆದಿ ಕರ್ಮಯೋಗಿ ಅಭಿಯಾನದ ಕುರಿತು ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ