ಆದಿ ಕರ್ಮಯೋಗಿ ಅಭಿಯಾನದಡಿ ಆದಿ ಸೇವಾ ಪರ್ವಕ್ಕೆ ಪ್ರಧಾನಿ ಮೋದಿ ಚಾಲನೆ; 11 ಕೋಟಿ ಜನರಿಗೆ ಪ್ರಯೋಜನ
ಮಧ್ಯಪ್ರದೇಶದ ಧಾರ್‌ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಆದಿ ಕರ್ಮಯೋಗಿ ಅಭಿಯಾನದಡಿ ಆದಿ ಸೇವಾ ಪರ್ವಕ್ಕೆ ಚಾಲನೆ ನೀಡಿದ್ದಾರೆ. ಈ ಉಪಕ್ರಮವು ಬುಡಕಟ್ಟು ಜನಾಂಗದ ಹೆಮ್ಮೆ ಮತ್ತು ರಾಷ್ಟ್ರ ನಿರ್ಮಾಣದ ಚೈತನ್ಯದ ಸಂಕೇತವಾಗಿದೆ ಎಂದಿದ್ದಾರೆ. ಸೇವೆಯ ಹಬ್ಬವಾಗಿ ಪ್ರಾರಂಭಿಸಲಾದ ಆದಿ ಸೇವಾ ಪರ್ವವು ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಪೋಷಣೆ, ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ವರ್ಧನೆ, ನೈರ್ಮಲ್ಯ, ಜಲ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುವ ಹಲವಾರು ಚಟುವಟಿಕೆಗಳನ್ನು ಆಯೋಜಿಸುತ್ತದೆ.

ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಬುಡಕಟ್ಟು ಜನಾಂಗದವರಿಗಾಗಿ ಆದಿ ಕರ್ಮಯೋಗಿ ಅಭಿಯಾನವನ್ನು (Adi Karmayogi Campaign) ಪ್ರಾರಂಭಿಸಿದೆ. ಇದು ದೇಶದ 11 ಕೋಟಿ ಬುಡಕಟ್ಟು ಜನಾಂಗದವರಿಗೆ ಪ್ರಯೋಜನವನ್ನು ನೀಡುತ್ತದೆ. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವುದು ಆದಿ ಕರ್ಮಯೋಗಿ ಅಭಿಯಾನದ ಉದ್ದೇಶವಾಗಿದೆ. ಇಂದು ಮಧ್ಯಪ್ರದೇಶದ ಧಾರ್‌ನಲ್ಲಿ ಪ್ರಧಾನಿ ಮೋದಿ ಆದಿ ಕರ್ಮಯೋಗಿ ಅಭಿಯಾನದಡಿ ಆದಿ ಸೇವಾ ಪರ್ವಕ್ಕೆ ಚಾಲನೆ ನೀಡಿದರು.
ಕೇಂದ್ರ ಸರ್ಕಾರವು ಜನ ಜಾತಿಯ ಗೌರವ ವರ್ಷ ಭಾಗವಾಗಿ ಬುಡಕಟ್ಟು ಜನಾಂಗದವರಿಗಾಗಿ ಒಂದು ದೊಡ್ಡ ಯೋಜನೆಯನ್ನು ಪ್ರಾರಂಭಿಸಿದೆ. ಇದೇ ಆದಿ ಕರ್ಮಯೋಗಿ ಅಭಿಯಾನ. ಇದು ವಿಶ್ವದ ಅತಿದೊಡ್ಡ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಒಂದು ಲಕ್ಷ ಹಳ್ಳಿಗಳು ಮತ್ತು ದೇಶದ 11 ಕೋಟಿ ಬುಡಕಟ್ಟು ಜನಾಂಗದವರು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಆದಿ ಕರ್ಮಯೋಗಿ ಎಂದರೆ “ಬುಡಕಟ್ಟು ನಾಯಕ”. ಪ್ರಧಾನಿ ಮೋದಿ ಈ ಕಾರ್ಯಕ್ರಮಕ್ಕೆ ಮಧ್ಯಪ್ರದೇಶದ ಧಾರ್‌ನಲ್ಲಿ ಚಾಲನೆ ನೀಡಿದರು. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವುದು ಆದಿ ಕರ್ಮಯೋಗಿ ಅಭಿಯಾನದ ಉದ್ದೇಶವಾಗಿದೆ.
From people to policy, Adi Karmayogi Abhiyan connects the aspirations of India’s tribal communities with governance. This transformation is guided by PM Shri @narendramodi Ji’s vision. 🌱 pic.twitter.com/qrLCty9yWm@jualoram @pmoindia @tribalaffairsin @mygovindia #AdiSewaParv https://t.co/RPToyYb56M
— प्रियंवदा 🇮🇳🚩 (@Priyamvada227s) September 17, 2025
ಇದನ್ನೂ ಓದಿ: ಆದಿ ಕರ್ಮಯೋಗಿ ಅಭಿಯಾನ ಆರಂಭ; ವಿಷನ್ 2030ರ ದೊಡ್ಡ ಯೋಜನೆಗಳಿವು
ಈ ವೇಳೆ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆದಿ ಕರ್ಮಯೋಗಿ ಅಭಿಯಾನದ ಅಡಿಯಲ್ಲಿ ಈ ಅಭಿಯಾನವು ಧಾರ್‌ನಲ್ಲಿರುವವರು ಸೇರಿದಂತೆ ಮಧ್ಯಪ್ರದೇಶದ ಬುಡಕಟ್ಟು ಸಮುದಾಯಗಳನ್ನು ವಿವಿಧ ಸರ್ಕಾರಿ ಯೋಜನೆಗಳೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ. ಯಾವುದೇ ಬುಡಕಟ್ಟು ಕುಟುಂಬವು ಹಿಂದೆ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಸೇತುವೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಸರ್ಕಾರವು ಒದಗಿಸುವ ಸೇವೆಗಳು ಪ್ರತಿಯೊಬ್ಬ ಬುಡಕಟ್ಟು ನಾಗರಿಕರನ್ನು ಕೊನೆಯ ಹಂತದವರೆಗೆ ತಲುಪುತ್ತವೆ” ಎಂದು ಹೇಳಿದರು.
PM @narendramodi launched the ‘Swasth Nari Sashakt Parivar’ initiative and the 8th Rashtriya Poshan Maah campaign.
As part of the Adi Karmyogi Abhiyan, he also inaugurated the ‘Adi Seva Parv’, a series of service-oriented activities in tribal regions.
In addition, PM Modi… pic.twitter.com/s6yXh7QUiQ
— DD News (@DDNewslive) September 17, 2025
ಈ ಯೋಜನೆಯಡಿ 20 ಲಕ್ಷ ಸರ್ಕಾರಿ ನೌಕರರು, ಸ್ವಸಹಾಯ ಗುಂಪುಗಳ ಮಹಿಳೆಯರು ಮತ್ತು ಬುಡಕಟ್ಟು ಯುವಕರಿಗೆ ವಿಶೇಷ ತರಬೇತಿ ನೀಡಲಾಗುವುದು. ಬುಡಕಟ್ಟು ಗ್ರಾಮಗಳ ಜನರಿಗೆ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳು ಲಭ್ಯವಾಗುವಂತೆ ಅವರೆಲ್ಲರೂ ಖಚಿತಪಡಿಸಿಕೊಳ್ಳುತ್ತಾರೆ. ಪ್ರತಿ ಗ್ರಾಮಕ್ಕೂ ‘ಆದಿ ಸೇವಾ ಕೇಂದ್ರ’ ಸ್ಥಾಪಿಸಲಾಗುವುದು. ಇಲ್ಲಿ ಜನರು ಎಲ್ಲಾ ಸರ್ಕಾರಿ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು. ಆದಿ ವಾಣಿ ಆ್ಯಪ್ ಎಂಬ ಹೊಸ ಆ್ಯಪ್ ಅನ್ನು ಸಹ ತರಲಾಗಿದೆ. ಇದು ಬುಡಕಟ್ಟು ಭಾಷೆಗಳಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಬುಡಕಟ್ಟು ಸಮುದಾಯಗಳ ಏಳ್ಗೆಗೆ ಕೇಂದ್ರದಿಂದ ‘ಆದಿ ಕರ್ಮಯೋಗಿ’ ಆಂದೋಲನ; 20 ಲಕ್ಷ ಜನರ ತಂಡ ಅಖಾಡಕ್ಕೆ
ಈ ಯೋಜನೆಯ ಭಾಗವಾಗಿ, ಇಂದಿನಿಂದ (ಸೆಪ್ಟೆಂಬರ್ 17) ಅಕ್ಟೋಬರ್ 2ರವರೆಗೆ ‘ಆದಿ ಸೇವಾ ಪರ್ವ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ 15 ದಿನಗಳಲ್ಲಿ ಪ್ರತಿ ಗ್ರಾಮವು ತಮ್ಮ ಭವಿಷ್ಯಕ್ಕಾಗಿ ವಿಶಿಷ್ಟವಾದ ‘ ವಿಷನ್ ದಾಖಲೆ’ಯನ್ನು ಸಿದ್ಧಪಡಿಸುತ್ತದೆ. ಇದನ್ನು ಬುಡಕಟ್ಟು ವಿಷನ್ 2030 ಎಂದು ಕರೆಯಲಾಗುತ್ತದೆ. ಇದರರ್ಥ ಹಳ್ಳಿಗಳ ಜನರು ತಮ್ಮ ಭವಿಷ್ಯ ಹೇಗಿರಬೇಕು ಎಂದು ಪ್ಲಾನ್ ಮಾಡುತ್ತಾರೆ. ಐಐಟಿ ಮತ್ತು ಐಐಎಂನಂತಹ ದೊಡ್ಡ ಕಾಲೇಜುಗಳ ವಿದ್ಯಾರ್ಥಿಗಳು ಸಹ ಈ ಯೋಜನೆಯ ಭಾಗವಾಗಲಿದ್ದಾರೆ. ಅವರು ತಮ್ಮ ಕೌಶಲ್ಯದಿಂದ ಬುಡಕಟ್ಟು ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ. ಇದು ಬುಡಕಟ್ಟು ಜನಾಂಗದವರಿಗೆ ಉತ್ತಮ ಉದ್ಯೋಗಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಒಟ್ಟಾರೆಯಾಗಿ, ಈ ‘ಆದಿ ಕರ್ಮಯೋಗಿ ಅಭಿಯಾನ’ ನಮ್ಮ ದೇಶವನ್ನು ವಿಕಸಿತ ಭಾರತವನ್ನಾಗಿ ಪರಿವರ್ತಿಸುವತ್ತ ಒಂದು ದೊಡ್ಡ ಹೆಜ್ಜೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




