ದೆಹಲಿ: ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಕೊಟ್ಟಿರುವ ರೈತರ ಪ್ರತಿಭಟನೆಯಿಂದಾಗಿ ಸುಮಾರು 5 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ. ದೆಹಲಿಗೆ ಬರುತ್ತಿದ್ದ ಶೇ. 30ರಿಂದ 40ರಷ್ಟು ಸರಕು ಸಾಗಣೆ ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಮಾಹಿತಿ ನೀಡಿದೆ.
ಕೃಷಿ ವಹಿವಾಟುದಾರರೊಂದಿಗೆ ಸಭೆ ನಡೆಸಿರುವ CAIT, ರೈತರು ತಮ್ಮ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಪರಿಹರಿಸುವಂತೆ ಒತ್ತಾಯಿಸಿದೆ. ನೂತನ ಕೃಷಿ ಕಾಯ್ದೆಗಳು ರೈತರಿಗೆ ಮಾತ್ರ ಪರಿಣಾಮ ಬೀರಿಲ್ಲ ಬದಲಾಗಿ ಸಾರಿಗೆ, ಕೃಷಿಗೆ ಸಂಬಂಧಪಟ್ಟ ವ್ಯಾಪಾರ ವಹಿವಾಟು, ಆಹಾರ ಧಾನ್ಯಗಳು, ಆಹಾರ ಸಂಸ್ಕರಣೆ, ಬೀಜ ಮತ್ತು ಕೃಷಿ ಔಷಧಗಳ ವಿಭಾಗ, ಗೊಬ್ಬರ ವ್ಯವಹಾರ ಎಲ್ಲವಕ್ಕೂ ಸಮಸ್ಯೆ ಉಂಟಾಗಿದೆ ಎಂದಿದ್ದಾರೆ.
ರೈತರ ಪ್ರತಿಭಟನೆಯಿಂದಾಗಿ ರೈಲ್ವೇ ಇಲಾಖೆಗೆ ಸುಮಾರು 2 ಸಾವಿರದಿಂದ 2.4 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ರೈಲ್ವೇ ಉತ್ತರ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಶುತೋಶ್ ಗಂಗಾಲ್ ಮಾಹಿತಿ ನೀಡಿದ್ದಾರೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ರೈಲುಗಳೂ ಸೇರಿ ಈ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
We have incurred losses of roughly around Rs 2,000-2,400 crores due to the farmer's protest. This includes freight and passenger trains: Ashutosh Gangal, General Manager, Northern Railway pic.twitter.com/PKoM0yx8qc
— ANI (@ANI) December 15, 2020
ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯು 20 ದಿನಗಳನ್ನು ಪೂರೈಸಿದ್ದು, ದೆಹಲಿ ಮತ್ತು ಹರ್ಯಾಣ ಗಡಿಭಾಗದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ.
Delhi Chalo ಪರಿಣಾಮ ದೆಹಲಿ ವಾಸ ದುಬಾರಿ: ಸರಕು ಸಾಗಾಣಿಕೆ ಸ್ಥಗಿತ, ಅಗತ್ಯ ವಸ್ತು ಪೂರೈಕೆ ಕಷ್ಟ ಕಷ್ಟ
Published On - 12:50 pm, Wed, 16 December 20