ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಗೆ ನಾಳೆ ಹಾಜರಾಗುವಂತೆ ರಾಹುಲ್ ಗಾಂಧಿಗೆ 3ನೇ ಸಮನ್ಸ್ ನೀಡಿದ ಇಡಿ

| Updated By: ರಶ್ಮಿ ಕಲ್ಲಕಟ್ಟ

Updated on: Jun 14, 2022 | 11:08 PM

ಮಂಗಳವಾರ ಸೆಂಟ್ರಲ್ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಪ್ರಧಾನ ಕಚೇರಿಯಲ್ಲಿ  ರಾಹುಲ್  ಗಾಂಧಿ ಅವರ ವಿಚಾರಣೆ ನಡೆದಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಗೆ ನಾಳೆ ಹಾಜರಾಗುವಂತೆ ರಾಹುಲ್ ಗಾಂಧಿಗೆ 3ನೇ ಸಮನ್ಸ್ ನೀಡಿದ ಇಡಿ
ರಾಹುಲ್ ಗಾಂಧಿ
Follow us on

ನ್ಯಾಷನಲ್ ಹೆರಾಲ್ಡ್  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (National Herald money-laundering case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Enforcement Directorate) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ (Rahul Gandhi)ಬುಧವಾರ ಹಾಜರಾಗುವಂತೆ ಹೇಳಿದ್ದು ಸತತ ಮೂರನೇ ದಿನ ವಿಚಾರಣೆಗೆ ಸಮನ್ಸ್ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಂಗಳವಾರ ಸೆಂಟ್ರಲ್ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಪ್ರಧಾನ ಕಚೇರಿಯಲ್ಲಿ  ರಾಹುಲ್  ಗಾಂಧಿ ಅವರ ವಿಚಾರಣೆ ನಡೆದಿದೆ. ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬೆಳಿಗ್ಗೆ 11:05 ರ ಸುಮಾರಿಗೆ ಇಡಿ ಪ್ರಧಾನ ಕಚೇರಿಗೆ ಬಂದಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ವಿಚಾರಣೆ ನಂತರ ಮಧ್ಯಾಹ್ನ 3:30 ರ ಸುಮಾರಿಗೆ ಸುಮಾರು ಒಂದು ಗಂಟೆ ವಿರಾಮ ತೆಗೆದುಕೊಂಡು ರಾಹುಲ್ ಮನೆಗೆ ತೆರಳಿದರು. ನಂತರ ಸಂಜೆ 4:30 ರ ಸುಮಾರಿಗೆ ಮತ್ತೆ ವಿಚಾರಣೆಗೆ ಬಂದಿದ್ದಾರೆ.

ಕಾಂಗ್ರೆಸ್ ನಾಯಕ ಸೋಮವಾರ ಇಡಿ ಕಚೇರಿಯಲ್ಲಿ 10 ಗಂಟೆಗಳಿಗೂ ಹೆಚ್ಚು ಕಾಲ ಕಳೆದಿದ್ದು, ಅಲ್ಲಿ ಅವರನ್ನು ವಿಚಾರಣೆಗೊಳಪಡಿಸಿ ಅವರಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಏತನ್ಮಧ್ಯೆ, ಚತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಮತ್ತು ಸಂಸದರಾದ ಅಧೀರ್ ರಂಜನ್ ಚೌಧರಿ ಮತ್ತು ಕೆಸಿ ವೇಣುಗೋಪಾಲ್ ಸೇರಿದಂತೆ ನೂರಾರು ಕಾಂಗ್ರೆಸ್ ನಾಯಕರು ಮತ್ತು ಸದಸ್ಯರನ್ನು ಅಕ್ರಮ ಸಭೆ ಮತ್ತು ಪೊಲೀಸ್ ಆದೇಶಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹಿರಿಯ ನಾಯಕ ರಾಹುಲ್ ಗಾಂಧಿ ಅವರು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳುತ್ತಿದ್ದಾಗ ಅವರನ್ನು ಬೆಂಬಲಿಸಲು ಕಾಂಗ್ರೆಸ್ ಕಾರ್ಯಕರ್ತರು ‘ಸತ್ಯಾಗ್ರಹ’ ಮೆರವಣಿಗೆ ನಡೆಸಿದರು.

ಇದನ್ನೂ ಓದಿ
Fact Check ನೂಪುರ್ ಶರ್ಮಾಗೆ 34 ದೇಶಗಳು ಬೆಂಬಲ ನೀಡಿವೆ ಎಂಬ ವೈರಲ್ ಟ್ವೀಟ್ ಸುಳ್ಳು
Sonia Gandhi: ಕೋವಿಡ್ ಇರುವ ಸೋನಿಯಾ ಗಾಂಧಿ ಇ.ಡಿ ವಿಚಾರಣೆಗೆ ಆಸ್ಪತ್ರೆಯಿಂದ ಎದ್ದು ಬರುತ್ತಾರಾ?
ಇಡಿ ವಿಚಾರಣೆಯಿಂದ ಹೊರಬರುತ್ತಿದ್ದಂತೆ ಮೋದಿ ವಿರುದ್ಧ ರಾಹುಲ್‌ ಟ್ವೀಟ್‌; ಇದು ಮಹಾ ಜುಮ್ಲಾಗಳ ಸರ್ಕಾರ ಎಂದು ತೀವ್ರ ವಾಗ್ದಾಳಿ
ತಪ್ಪು ಮಾಡಿದವರಿಗೆ ನೋಟಿಸ್​​​ ನೀಡುವುದು ಸಹಜ; ಇದು ಇಟಲಿ ಅಲ್ಲ ಭಾರತ: ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ ವಾಗ್ದಾಳಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ