AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾದಲ್ಲಿ ಗುತ್ತಿಗೆ ನೇಮಕಾತಿ ವ್ಯವಸ್ಥೆ ರದ್ದುಗೊಳಿಸಿದ ನವೀನ್ ಪಟ್ನಾಯಕ್ ಸರ್ಕಾರ

ಗುತ್ತಿಗೆ ಪದ್ಧತಿಯ ನೇಮಕಾತಿಯನ್ನು ಶಾಶ್ವತವಾಗಿ ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ. ಇಂದಿಗೂ, ಅನೇಕ ರಾಜ್ಯಗಳಲ್ಲಿ ನಿಯಮಿತ ನೇಮಕಾತಿಗಳಿಲ್ಲ

ಒಡಿಶಾದಲ್ಲಿ ಗುತ್ತಿಗೆ ನೇಮಕಾತಿ ವ್ಯವಸ್ಥೆ ರದ್ದುಗೊಳಿಸಿದ ನವೀನ್ ಪಟ್ನಾಯಕ್ ಸರ್ಕಾರ
ನವೀನ್ ಪಟ್ನಾಯಕ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 16, 2022 | 5:20 PM

Share

ನವೀನ್ ಪಟ್ನಾಯಕ್ (Naveen Patnaik) ಸರ್ಕಾರ ಶನಿವಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ 2013 ರಿಂದ ಚಾಲ್ತಿಯಲ್ಲಿದ್ದ ಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು (contractual recruitment system) ಶಾಶ್ವತವಾಗಿ ರದ್ದುಪಡಿಸಿದೆ. ಪಟ್ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ನಿರ್ಧಾರದಂತೆ 57,000 ಕ್ಕೂ ಹೆಚ್ಚು ಗುತ್ತಿಗೆ ನೌಕರರ ಉದ್ಯೋಗಗಳನ್ನು ಕಾಯಂಗೊಳಿಸಲಾಗುವುದು. ಉದ್ಯೋಗಗಳನ್ನು ಕ್ರಮಬದ್ಧಗೊಳಿಸಲು ರಾಜ್ಯವು ವಾರ್ಷಿಕ ₹ 1,300 ಕೋಟಿ ಖರ್ಚು ಮಾಡಬೇಕಾಗುತ್ತದೆ. ರಾಜ್ಯದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಹಿನ್ನೆಲೆಯಲ್ಲಿ ಗುತ್ತಿಗೆ ಉದ್ಯೋಗವನ್ನು ಕೊನೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಒಡಿಶಾ ಸಿಎಂ ಹೇಳಿದ್ದಾರೆ.ಗುತ್ತಿಗೆ ಪದ್ಧತಿಯ ನೇಮಕಾತಿಯನ್ನು ಶಾಶ್ವತವಾಗಿ ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ. ಇಂದಿಗೂ, ಅನೇಕ ರಾಜ್ಯಗಳಲ್ಲಿ ನಿಯಮಿತ ನೇಮಕಾತಿಗಳಿಲ್ಲ. ಅವರು ಇನ್ನೂ ಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು ಮುಂದುವರೆಸುತ್ತಿದ್ದಾರೆ. ಆದರೆ ಒಡಿಶಾದಲ್ಲಿ ಗುತ್ತಿಗೆ ನೇಮಕಾತಿ ಯುಗ ಅಂತ್ಯಗೊಂಡಿದೆ ಎಂದು ನವೀನ್ ಪಟ್ನಾಯಕ್ ಶನಿವಾರ ಸಂಜೆ ನೀಡಿದ ವಿಶೇಷ ಭಾಷಣದಲ್ಲಿ ಹೇಳಿದ್ದಾರೆ.

“ನಾನು ಈ ಕ್ಷಣಕ್ಕಾಗಿ ಕಾಯುತ್ತಿದ್ದೆ. ನಾಳೆ (ಭಾನುವಾರ) ಅಧಿಸೂಚನೆ ಹೊರಬೀಳಲಿದೆ. 57,000 ಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ. ಸರ್ಕಾರ ವರ್ಷಕ್ಕೆ ಅಂದಾಜು ₹ 1,300 ಕೋಟಿ ವೆಚ್ಚ ಮಾಡಲಿದೆ. ಈ ನಿರ್ಧಾರವು ಅವರ ಕುಟುಂಬ ಸದಸ್ಯರಿಗೆ ಮುಂಚಿತವಾಗಿಯೇ ದೀಪಾವಳಿಯ ಖುಷಿಯನ್ನು ತಂದಿದೆ ಎಂದು ಸಿಎಂ ಹೇಳಿದರು.

ಅಧಿಕಾರ ಸ್ವೀಕರಿಸಿದಾಗ ಒಡಿಶಾ ಅನುಭವಿಸುತ್ತಿದ್ದ ಕಠಿಣ ಪರಿಸ್ಥಿತಿಯನ್ನು ವಿವರಿಸಿದ ಪಟ್ನಾಯಕ್,ಸೂಪರ್ ಸೈಕ್ಲೋನ್ ನಂತರದ ಪರಿಸ್ಥಿತಿ ಮತ್ತು ನಂತರದ ದುರ್ಬಲ ಆರ್ಥಿಕ ಪರಿಸ್ಥಿತಿಗಳು ನನಗೆ ದೊಡ್ಡ ಸವಾಲಾಗಿತ್ತು. ರಾಜ್ಯವು ಸಾಲದ ಹೊರೆಯಲ್ಲಿತ್ತು. ಸರ್ಕಾರವು ವೇತನ ಮತ್ತು ಹಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಅವಲಂಬಿಸಿದೆ.

ಒಡಿಶಾ ಆರ್ಥಿಕತೆಗೆ ಇದು ನಿಜಕ್ಕೂ ಕರಾಳ ಅವಧಿ. ರಾಜ್ಯದ ಖಜಾನೆ ಖಾಲಿಯಾಗಿತ್ತು. ನಮ್ಮ ಆರ್ಥಿಕತೆಯ ಮೇಲೆ ಭಾರಿ ಒತ್ತಡವಿತ್ತು. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಕೃಷಿ, ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾವು ಹಿಂದುಳಿದಿದ್ದೇವೆ. ನಮ್ಮ ಸೀಮಿತ ಸಂಪನ್ಮೂಲಗಳಲ್ಲಿ ಈ ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಣೆ ತರುವುದು ನಮ್ಮ ಆದ್ಯತೆಯಾಗಿತ್ತು ಎಂದು ಹೇಳಿದ ಅವರು ಸರ್ಕಾರಿ ನೇಮಕಾತಿಯನ್ನು ನಿಲ್ಲಿಸುವುದು ಮತ್ತು ಸರ್ಕಾರಿ ಹುದ್ದೆಗಳನ್ನು ರದ್ದುಗೊಳಿಸುವುದು ನನಗೆ ನೋವಿನ ಸಂಗತಿ ಎಂದು ಹೇಳಿದರು.

2013 ರಲ್ಲಿ ಗುತ್ತಿಗೆ ನೇಮಕಾತಿ ವ್ಯವಸ್ಥೆಯು ಪ್ರಾರಂಭವಾಯಿತು. ಇದು ನನಗೆ ಕಠಿಣ ನಿರ್ಧಾರವಾಗಿತ್ತು. ಈಗ ನಮ್ಮ ಆರ್ಥಿಕತೆ ಗಮನಾರ್ಹವಾಗಿ ಸುಧಾರಿಸಿದೆ. ಒಡಿಶಾ ದೇಶದ ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸ ಗುರುತನ್ನು ಸೃಷ್ಟಿಸಿಕೊಂಡಿದೆ. ಕಳೆದ ವರ್ಷ, ನಾವು ಆರಂಭಿಕ ನೇಮಕಾತಿಗಳೊಂದಿಗೆ ಗುತ್ತಿಗೆ ನೇಮಕಾತಿ ಪೋಸ್ಟ್‌ಗಳನ್ನು ಬದಲಿಸಿದ್ದೇವೆ, ”ಎಂದು ಅವರು ಹೇಳಿದರು.

ಗುತ್ತಿಗೆ ಪದ್ಧತಿಯಡಿಯಲ್ಲಿ, ನಿಯಮಿತ ಉದ್ಯೋಗಗಳಿಗೆ ಅರ್ಹರಾಗುವ ಮೊದಲು ಹೊಸ ನೇಮಕಾತಿಗಳನ್ನು ಗುತ್ತಿಗೆ ನೌಕರರಾಗಿ ಕೆಲಸ ಮಾಡಲು ಒತ್ತಾಯಿಸಲಾಯಿತು. ಇದು 2013 ರಲ್ಲಿ ಪ್ರಾರಂಭವಾಯಿತು. ಶಿಕ್ಷಕರನ್ನು ಶಿಕ್ಷ್ಯಾ ಸಹಾಯಕರಾಗಿ (ಶಿಕ್ಷಕ ಸಹಾಯಕರು) ನೇಮಕ ಮಾಡಿಕೊಳ್ಳಲಾಯಿತು. ಆರು ವರ್ಷಗಳು ಪೂರ್ಣಗೊಂಡ ನಂತರ ಅವರ ಉದ್ಯೋಗಗಳನ್ನು ಕ್ರಮಬದ್ಧಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?