ಚಂಡೀಗಢ: ಕ್ಯಾಪ್ಟನ್ ಅಮರಿಂದರ್ ಸಿಂಗ್ (Capt Amarinder Singh) ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಪಂಜಾಬ್ ಕ್ಯಾಬಿನೆಟ್ ಸಚಿವರಾದ ಪರಗಟ್ ಸಿಂಗ್ (Pargat Singh) ಮತ್ತು ಅಮರಿಂದರ್ ಸಿಂಗ್ ರಾಜಾ ವಾರಿಂಗ್ (Amrinder Singh Raja) ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಹೊಸ ಪಕ್ಷ ಸ್ಥಾಪಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿಯನ್ನು ಬುಧವಾರ ಟೀಕಿಸಿದ್ದಾರೆ. ಪರಗಟ್ ಮತ್ತು ವಾರಿಂಗ್, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮ ತಮ್ಮ ಏಳು ಪುಟಗಳ ರಾಜೀನಾಮೆ ಪತ್ರದಲ್ಲಿ ಗಾಂಧಿ ಕುಟುಂಬ, ಮಾಜಿ ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ರಾವತ್, ಸಚಿವರು ಮತ್ತು ಶಾಸಕರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅವರು ತಮ್ಮ ಹೊಸ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ ಹೆಸರನ್ನು ಘೋಷಿಸಿದರು.
“ಏನು ವಿಪರ್ಯಾಸ ಅಮರಿಂದರ್ ಸಿಂಗ್ ಅವರ ಹೊಸ ಪಕ್ಷವು “ಪಂಜಾಬೀಸ್” ಅಥವಾ “ಲೋಕ” ಗಾಗಿ ಅಲ್ಲ ಮತ್ತು ಖಂಡಿತವಾಗಿಯೂ “ಕಾಂಗ್ರೆಸ್ ಅಲ್ಲ” ಎಂದು ಪರಗಟ್ ಟ್ವೀಟ್ ಮಾಡಿದ್ದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿಧು ಮತ್ತು ಕಾಂಗ್ರೆಸ್ ಪಕ್ಷವನ್ನು ಟ್ಯಾಗ್ ಮಾಡಿದ್ದಾರೆ.
What an irony – @capt_amarinder ‘s new party is neither for “Punjabis” nor for “Lok” and certainly not “Congress”. @INCIndia @RahulGandhi @sherryontopp @INCPunjab @IYCPunjab
— Pargat Singh (@PargatSOfficial) November 3, 2021
ರೈತ ವಿರೋಧಿ ಬಿಜೆಪಿಯೊಂದಿಗೆ ಸೀಟು ಹಂಚಿಕೆಗೆ ಕ್ಯಾಪ್ಟನ್ ಅಮರಿಂದರ್ ಅವರ ಯೋಜನೆಗಳ ಬಗ್ಗೆ ವಾರಿಂಗ್ ಟೀಕಾ ಪ್ರಹಾರ ಮಾಡಿದ್ದಾರೆ. “ಆತ್ಮೀಯ ಅಮರಿಂದರ್ ಸಾಹಬ್, ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರಿಗೆ ನೀವು ಬರೆದ ಪತ್ರದಲ್ಲಿ ಕಾಂಗ್ರೆಸ್ ಪಂಜಾಬ್ ಮುಖ್ಯಸ್ಥ ಸರ್ದಾರ್ ಸಿಧು, ಪಾಕ್ ಸೇನಾ ಮುಖ್ಯಸ್ಥ ಮತ್ತು ಪಾಕ್ ಪಿಎಂ ಅವರನ್ನು ಆಲಂಗಿಸಿದ್ದು ನೀವು ಕಾಂಗ್ರೆಸ್ ಪಕ್ಷವನ್ನು ತೊರೆಯಲು ಕಾರಣ ಎಂದು ಉಲ್ಲೇಖಿಸಿದ್ದೀರಿ. ನೀವು ಈಗ ರೈತ ವಿರೋಧಿ ಬಿಜೆಪಿಯೊಂದಿಗೆ ‘ಸೀಟು ಹಂಚಿಕೆ’ ಮಾಡುತ್ತಿರುವಂತೆ ನೀವು ಹೊಸದಾಗಿ ಕಂಡುಕೊಂಡಿರುವ ಬಮ್‌ಚುಮ್‌ಗಳ ಕೆಲವು ಚಿತ್ರಗಳು ಇಲ್ಲಿವೆ” ಎಂದು ಅವರು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಜತೆಗಿನ ಹಳೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
Dear @capt_amarinder Sahab,
In ur letter to Hon’ble Congress President u cited @INCPunjab Chief Sardar @sherryontopp ‘Hugging’ Pak Army Chief & Pak PM as ur reason to leave the party
As U now r ‘Seat Sharing’ with Anti Farmer BJP
Here r few pictures of ur new found BumChums?? pic.twitter.com/f7HwphxcQW— Amarinder Singh Raja (@RajaBrar_INC) November 2, 2021
ಸೆಪ್ಟೆಂಬರ್ 18 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಸಿಂಗ್ ನಾಲ್ವರು ಕ್ಯಾಬಿನೆಟ್ ಮಂತ್ರಿಗಳು ಮತ್ತು ಹಲವಾರು ಪಕ್ಷದ ಶಾಸಕರು ಹೊರತಾಗಿಯೂ ಮತ್ತು ಪಂಜಾಬ್‌ನ ಬಹುತೇಕ ಎಲ್ಲಾ ಸಂಸತ್ ಸದಸ್ಯರ ಸರ್ವಾನುಮತದ ಸಲಹೆ ಕಡೆಗಣಿಸಿ ಪಾಕಿಸ್ತಾನದ ಸಹವರ್ತಿ ಸಿಧು ಅವರನ್ನು ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು ಎಂದು ಸಿಂಗ್ ಬರೆದಿದ್ದಾರೆ.
“ನನ್ನನ್ನು ಮತ್ತು ನನ್ನ ಸರ್ಕಾರವನ್ನು ನಿಯಮಿತವಾಗಿ ನಿಂದಿಸುತ್ತಾರೆ ಎಂಬುದು ಸಿಧು ಅವರ ಖ್ಯಾತಿ. ನಾನು ಅವರ ತಂದೆಯ ವಯಸ್ಸಿನವನು. ಆದರೆ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ನನ್ನ ವಿರುದ್ಧ ಕೆಟ್ಟ ಮತ್ತು ಅತ್ಯಂತ ಕೆಟ್ಟ ಭಾಷೆಯನ್ನು ಬಳಸುವುದನ್ನು ಅದು ತಡೆಯಲಿಲ್ಲ, ”ಎಂದು ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: Captain Amarinder Singh ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್
Published On - 12:05 pm, Wed, 3 November 21