ಮುಂಬೈ ಸಮುದ್ರ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಗೆ ಸಂಬಂಧಪಟ್ಟಂತೆ ಎನ್ಸಿಬಿ (ಮಾದಕ ದ್ರವ್ಯ ನಿಯಂತ್ರಣ ಮಂಡಳಿ-NCB) ಇಂದು ಇನ್ನಿಬ್ಬರನ್ನು ಬಂಧಿಸಿದೆ. ಶನಿವಾರ ಶಿಪ್ನಲ್ಲಿ ನಡೆದ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಎನ್ಸಿಬಿ ಮೊನ್ನೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಒಂಭತ್ತು ಜನರನ್ನು ಬಂಧಿಸಿತ್ತು. ಬಂಧಿತರನ್ನು ಹೊರತು ಪಡಿಸಿ ಇನ್ನೂ ಕೆಲವರನ್ನು ಕೇವಲ ವಿಚಾರಣೆಗಾಗಿ ಅಧಿಕಾರಿಗಳು ಎನ್ಸಿಬಿ ಕಚೇರಿಗೆ ಕರೆತಂದಿತ್ತು. ಅವರಲ್ಲಿ ಒಂದಿಬ್ಬರು ನೀಡಿದ ಮಾಹಿತಿ ಅನ್ವಯ ಇಂದು ಇಬ್ಬರನ್ನು ಬಂಧಿಸಲಾಗಿದ್ದೆ. ಇದರೊಂದಿಗೆ ಬಂಧಿತರೊಂದಿಗೆ ಸಂಪರ್ಕದಲ್ಲಿರುವ ಡ್ರಗ್ಸ್ ಪೆಡ್ಲರ್ಗಳ ಜಾಲ ಪತ್ತೆ ಹಚ್ಚಲು ಎನ್ಸಿಬಿ ಮುಂದಾಗಿದೆ.
ಮುಂಬೈ ಹಡಗಿನಲ್ಲಿ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು, ಹಲವು ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿಯನ್ನು ಎನ್ಸಿಬಿ ನ್ಯಾಯಾಲಯದ ಎದುರು ಬಿಚ್ಚಿಟ್ಟಿದೆ. ಹಾಗೇ, ಶಾರುಖ್ ಪುತ್ರ ಆರ್ಯನ್ ಖಾನ್ ಮತ್ತು ಇನ್ನಿಬ್ಬರ ವಾಟ್ಸ್ಆ್ಯಪ್ ಚಾಟ್ಗಳು ತುಂಬ ಶಾಕಿಂಗ್ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಮಾದಕ ದ್ರವ್ಯ ಸಾಗಣೆಯೊಂದಿಗೆ ಸಂಪರ್ಕ ಹೊಂದಿರುವುದಕ್ಕೆ ಸಾಕ್ಷಿ ಒದಗಿಸುತ್ತವೆ ಎಂದೂ ಎನ್ಸಿಬಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಸದ್ಯ ಆರ್ಯನ್ ಖಾನ್ ಅಕ್ಟೋಬರ್ 7ರವರೆಗೂ ಎನ್ಸಿಬಿ ಕಸ್ಟಡಿಯಲ್ಲೇ ಇರಬೇಕಿದೆ. ಅಂದ ಹಾಗೆ ಅವರು ವಿಚಾರಣೆ ವೇಳೆ, ತಾನು ನಾಲ್ಕು ವರ್ಷಗಳಿಂದಲೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೇನೆ. ಇದು ನನ್ನ ಅಪ್ಪ-ಅಮ್ಮನಿಗೂ ಗೊತ್ತು ಎಂದು ಒಪ್ಪಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದವರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಅವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲು ಎನ್ಸಿಬಿ ಸಿದ್ಧತೆ ಮಾಡಿಕೊಂಡಿದೆ. ಆದರೆ ಮುಂಬೈ ಐಷಾರಾಮಿ ಹಗಡಿನ ಪಾರ್ಟಿಗೆ ಸಂಬಂಧಪಟ್ಟಂತೆ ಎನ್ಸಿಬಿ ಇನ್ನಷ್ಟು ಆಳವಾಗಿ ತನಿಖೆ ನಡೆಸುವುದಾಗಿ ಹೇಳಿಕೊಂಡಿದೆ.
ಇದನ್ನೂ ಓದಿ: ಶಾರುಖ್ ಪುತ್ರನಿಗೆ ಎನ್ಸಿಬಿ ಫುಲ್ ಗ್ರಿಲ್; ಆರ್ಯನ್ ಖಾನ್ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು
‘ಡ್ರಗ್ಸ್ ಕೇಸ್ನಲ್ಲಿ ಆರ್ಯನ್ ಖಾನ್ಗೆ ಶಿಕ್ಷೆ ಆಗಲ್ಲ’; ಭವಿಷ್ಯ ನುಡಿದ ಕಮಾಲ್ ಆರ್. ಖಾನ್