ಭಾರತದ ಜನಸಂಖ್ಯೆ ಬೆಳವಣಿಗೆ ದರಕ್ಕಿಂತ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆಯೇ ಹೆಚ್ಚು

ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆ ದರಕ್ಕಿಂತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶಗಳು ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನವು 10 ನೇ ಸ್ಥಾನದಲ್ಲಿದೆ.

ಭಾರತದ ಜನಸಂಖ್ಯೆ ಬೆಳವಣಿಗೆ ದರಕ್ಕಿಂತ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆಯೇ ಹೆಚ್ಚು
ವಿದ್ಯಾರ್ಥಿ
Image Credit source: Financial Express

Updated on: Aug 29, 2024 | 9:29 AM

ಹೊಸ ವರದಿಯೊಂದು ಭಾರತದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನೆಗಳ ಬಗ್ಗೆ ಆತಂಕಕಾರಿ ವಿಚಾರವನ್ನು ಮುಂದಿಟ್ಟಿದೆ.  ವರದಿಯ ಪ್ರಕಾರ, ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಘಟನೆಗಳು ಅಪಾಯಕಾರಿ ದರದಲ್ಲಿ ಹೆಚ್ಚುತ್ತಿವೆ, ಇದು ಜನಸಂಖ್ಯೆಯ ಬೆಳವಣಿಗೆಯ ದರವನ್ನು ಮೀರುವಂತಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ನೀಡಿರುವ ವರದಿ ಪ್ರಕಾರ, ಒಟ್ಟಾರೆ ಆತ್ಮಹತ್ಯೆ ಸಂಖ್ಯೆಗಳು ವಾರ್ಷಿಕವಾಗಿ ಶೇಕಡಾ 2 ರಷ್ಟು ಹೆಚ್ಚಾಗಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಶೇ.4ರಷ್ಟು ಹೆಚ್ಚಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ.

2022ಕ್ಕೆ ಹೋಲಿಸಿದರೆ ಒಟ್ಟು ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ 53 ಪ್ರತಿಶತ ಪುರುಷ ವಿದ್ಯಾರ್ಥಿಗಳಿದ್ದರು, 2021 ಮತ್ತು 2022 ರ ನಡುವೆ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಶೇಕಡಾ 6 ರಷ್ಟು ಇಳಿಕೆ ಕಂಡುಬಂದಿದೆ, ಆದರೆ ವಿದ್ಯಾರ್ಥಿನಿಯರ ಆತ್ಮಹತ್ಯೆಗಳು ಶೇಕಡಾ 7 ರಷ್ಟು ಹೆಚ್ಚಾಗಿದೆ.

ಮತ್ತಷ್ಟು ಓದಿ:ಉತ್ತರಪ್ರದೇಶ: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ

ಕಳೆದ ದಶಕದಲ್ಲಿ 0-24 ವರ್ಷ ವಯಸ್ಸಿನ ಮಕ್ಕಳ ಜನಸಂಖ್ಯೆಯು 582 ಮಿಲಿಯನ್‌ನಿಂದ 581 ಮಿಲಿಯನ್‌ಗೆ ಕುಸಿದಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆ 6,654 ರಿಂದ 13,044 ಕ್ಕೆ ಏರಿದೆ.
ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶಗಳು ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನವು 10 ನೇ ಸ್ಥಾನದಲ್ಲಿದೆ.

ಭಾರತದಲ್ಲಿ 15 ಮತ್ತು 24 ವರ್ಷದೊಳಗಿನ ಏಳು ಯುವಕರಲ್ಲಿ ಒಬ್ಬರು ಖಿನ್ನತೆಯ ಲಕ್ಷಣಗಳು ಮತ್ತು ನಿರಾಸಕ್ತಿ ಸೇರಿದಂತೆ ಮಾನಸಿಕ ಅಸಮತೋಲನ ಅನುಭವಿಸುತ್ತಿದ್ದಾರೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶವು ಈಗ ಅತ್ಯಧಿಕ ವಿದ್ಯಾರ್ಥಿಗಳ ಆತ್ಮಹತ್ಯೆ ದರಗಳನ್ನು ಹೊಂದಿರುವ ಐದು ರಾಜ್ಯಗಳಲ್ಲಿ ಒಂದಾಗಿದೆ. ತಮಿಳುನಾಡು ಮತ್ತು ಜಾರ್ಖಂಡ್​ನಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ