ಉತ್ತರ ಪ್ರದೇಶ: ಮಕ್ಕಳ ಕುತ್ತಿಗೆಗೆ ಬಾಯಿ ಹಾಕಿ ಎಳೆದೊಯ್ಯುತ್ತಿವೆ ತೋಳಗಳು, ಇಲ್ಲಿಯವರೆಗೆ 9 ಮಂದಿ ಸಾವು
ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ತೋಳಗಳ ಭಯ ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಇಲ್ಲಿಯವರೆಗೆ 8 ಮಕ್ಕಳು, ಓರ್ವ ಮಹಿಳೆ ಸೇರಿ 9 ಜನರನ್ನು ತೋಳಗಳು ಕೊಂದಿವೆ. ಕಳೆದ 45 ಜನರು ಅಕ್ಷರಶಃ ಆತಂಕದಲ್ಲಿ ಬದುಕುತ್ತಿದ್ದಾರೆ, ತೋಳಗಳ ಗುಂಪೊಂದು ಎಂಟು ಮಕ್ಕಳನ್ನು ಹತ್ಯೆಗೈದಿವೆ.
ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ತೋಳಗಳ ಭಯ ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಇಲ್ಲಿಯವರೆಗೆ 8 ಮಕ್ಕಳು, ಓರ್ವ ಮಹಿಳೆ ಸೇರಿ 9 ಜನರನ್ನು ತೋಳಗಳು ಕೊಂದಿವೆ. ಕಳೆದ 45 ಜನರು ಅಕ್ಷರಶಃ ಆತಂಕದಲ್ಲಿ ಬದುಕುತ್ತಿದ್ದಾರೆ, ತೋಳಗಳ ಗುಂಪೊಂದು ಎಂಟು ಮಕ್ಕಳನ್ನು ಹತ್ಯೆಗೈದಿವೆ.
ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಆನೆಗಳ ಸಗಣಿ ಮತ್ತು ಮೂತ್ರವನ್ನು ಬಳಸಿ ತೋಳಗಳನ್ನು ಓಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇಂಡಿಯಾ ಟುಡೇಯೊಂದಿಗೆ ಮಾತನಾಡಿರುವ ಜನರು, ಮಕ್ಕಳನ್ನು ತೋಳಗಳು ಕುತ್ತಿಗೆಗೆ ಬಾಯಿ ಹಾಕಿ ಎಳೆದೊಯ್ಯುತ್ತಿವೆ ಎಂದು ಹೇಳಿದ್ದಾರೆ.
ಅದೇ ರೀತಿ, ಏಳು ವರ್ಷದ ಮತ್ತೊಬ್ಬ ಬಾಲಕ ರಾಹುಲ್ ಕೂಡ ತೋಳದ ದಾಳಿಗೆ ಒಳಗಾಗಿದ್ದು, ಆತನ ತಾಯಿ ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡುತ್ತಾ ಭಯಾನಕತೆಯನ್ನು ವಿವರಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ತನ್ನ ತಾಯಿಯೊಂದಿಗೆ ಮಲಗಿದ್ದಾಗ ರಾಹುಲ್ ಮೇಲೆ ತೋಳ ದಾಳಿ ಮಾಡಿತ್ತು.
ತಮ್ಮ ಜಮೀನಿನಿಂದ ಹಿಂತಿರುಗುತ್ತಿದ್ದ ರಾಹುಲ್ ಅವರ ಚಿಕ್ಕಪ್ಪ, ಮಗುವಿನ ಅಳುವುದು ಕೇಳಿ ಓಡಿ ಬಂದು ಆತನನ್ನು ರಕ್ಷಿಸಿದರು. ಫಿರೋಜ್ ಎಂಬಾತನನ್ನು ತೋಳವು ಸುಮಾರು 200 ಮೀಟರ್ ಎಳೆದೊಯ್ದಿತ್ತು, ಅವರ ತಾಯಿ ಕೂಗಿಕೊಂಡಾಗ ಜನರೆಲ್ಲಾ ಅಲ್ಲಿ ಬಂದು ಜಮಾಯಿಸಿದರು. ಹೊಲದಲ್ಲೇ ಬಿಟ್ಟು ಓಡಿಹೋಯಿತು.
ಮತ್ತಷ್ಟು ಓದಿ: Wolf Snake: ಕಾರವಾರದಲ್ಲಿ ಅಪರೂಪದ ತೋಳ ಹಾವು ರಕ್ಷಣೆ! ಅದಕ್ಕೆ ಆ ಹೆಸರು ಯಾಕೆ? ವಿವರ ಇಲ್ಲಿದೆ
ಗಾಯಗೊಂಡಿದ್ದ ಅವರನ್ನು ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು 13 ದಿನಗಳ ಕಾಲ ಚಿಕಿತ್ಸೆ ಪಡೆದರು ಅಂತಿಮವಾಗಿ ಬದುಕುಳಿದಿದ್ದಾನೆ. ತೋಳದ ದಾಳಿಯ ನಂತರ ಫಿರೋಜ್‌ನ ತಾಯಿ ಅವನ ಮುಖ, ಕುತ್ತಿಗೆ, ತಲೆ ಮತ್ತು ಕಿವಿಗಳ ಮೇಲಿನ ಗಾಯಗಳನ್ನು ತೋರಿಸಿದರು.
ಯುಪಿಯ ಮುಖ್ಯ ವನ್ಯಜೀವಿ ಇಲಾಖೆ ಅಧಿಕಾರಿಗಳ ಹೇಳಿಕೆಯ ಪ್ರಕಾರ, ತೋಳಗಳನ್ನು ಹಿಡಿಯಲು ಅರಣ್ಯ ಇಲಾಖೆಯು ಡ್ರೋನ್ ಕ್ಯಾಮೆರಾಗಳು ಮತ್ತು ಥರ್ಮಲ್ ಡ್ರೋನ್ ಮ್ಯಾಪಿಂಗ್ ತಂತ್ರಗಳನ್ನು ಬಳಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ