NEET 2024: ನೀಟ್ ಪರೀಕ್ಷೆಯ ಫಲಿತಾಂಶಗಳನ್ನು ಜುಲೈ 20ರಂದು ಮಧ್ಯಾಹ್ನ 12ರೊಳಗೆ ಪ್ರಕಟಿಸಲು ಎನ್​​ಟಿಎಗೆ ಸುಪ್ರೀಂ ನಿರ್ದೇಶನ

ನೀಟ್ ಯುಜಿ ಪರೀಕ್ಷೆಯ ನಗರ ಮತ್ತು ಕೇಂದ್ರವಾರು ಫಲಿತಾಂಶಗಳನ್ನು ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂಕೋರ್ಟ್ ಹೇಳಿದೆ. ಅದೇ ವೇಳೆ ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸಬಾರದು ಎಂದು ನ್ಯಾಯಾಲಯ ಹೇಳಿದ್ದು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

NEET 2024: ನೀಟ್ ಪರೀಕ್ಷೆಯ ಫಲಿತಾಂಶಗಳನ್ನು ಜುಲೈ 20ರಂದು ಮಧ್ಯಾಹ್ನ 12ರೊಳಗೆ ಪ್ರಕಟಿಸಲು ಎನ್​​ಟಿಎಗೆ ಸುಪ್ರೀಂ ನಿರ್ದೇಶನ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Jul 18, 2024 | 5:12 PM

ದೆಹಲಿ ಜುಲೈ 18: ಅಭ್ಯರ್ಥಿಗಳ ಗುರುತನ್ನು ಬಹಿರಂಗ ಪಡಿಸಿದೆ ಎಲ್ಲಾ ನೀಟ್ ಯುಜಿ( NEET-UG) ವಿದ್ಯಾರ್ಥಿಗಳ ನಗರವಾರು ಮತ್ತು ಕೇಂದ್ರವಾರು ಫಲಿತಾಂಶಗಳನ್ನು ವೆಬ್‌ಸೈಟ್‌ನಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸುವಂತೆ ಸುಪ್ರೀಂಕೋರ್ಟ್ (Supreme Court) ಇಂದು (ಗುರುವಾರ) ಎನ್​​​ಟಿಎಗೆ (NTA) ನಿರ್ದೇಶನ ನೀಡಿದೆ. ಏತನ್ಮಧ್ಯೆ, NEET-UG 2024 ಅನ್ನು ಹೊಸದಾಗಿ ನಡೆಸುವ ಯಾವುದೇ ಆದೇಶವು ಸಂಪೂರ್ಣ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪಾವಿತ್ರ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಭದ್ರ ತಳಹದಿಯ ಮೇಲೆ ಇರಬೇಕು ಎಂದು  ನ್ಯಾಯಾಲಯ ಹೇಳಿದೆ.

ಲೈವ್ ಲಾ ವರದಿ ಪ್ರಕಾರ, ಪಠ್ಯಕ್ರಮ ಸರಳವಾಗಿರುವುದೇ ಅಂಕ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಎನ್‌ಟಿಎ ಹೇಳಿದೆ ಎಂದು ವಕೀಲರು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು, ಆದಾಗ್ಯೂ, ಪಠ್ಯಕ್ರಮದಲ್ಲಿ ಹೆಚ್ಚಳ ಮತ್ತು ಇಳಿಕೆ ಕಂಡುಬರುತ್ತದೆ. “ಅವರು ಪಠ್ಯಕ್ರಮದ ಹೆಚ್ಚಳದ ಬಗ್ಗೆ ಮಾತನಾಡುತ್ತಿಲ್ಲ. ಹೆಚ್ಚಿದ ಭಾಗಗಳನ್ನು ನಾನು ತೋರಿಸಬಲ್ಲೆ,” ಎಂದು ವಕೀಲರು ವಾದಿಸಿದರು. ಪೀಠವು ಸೋಮವಾರ ವಿಚಾರಣೆಯನ್ನು ಪುನರಾರಂಭಿಸಲಿದೆ.

ನೀಟ್ ಪ್ರಶ್ನೆ ಪತ್ರಿಕೆಗಳ ಹರಡುವಿಕೆಯ ಬಗ್ಗೆ ನ್ಯಾಯಾಧೀಶರು  ಕೇಳಿದ್ದಾರೆ. “ಯಾರೋ ಇದನ್ನು ರಾಷ್ಟ್ರಮಟ್ಟದಲ್ಲಿ  ತಮಾಷೆ ಮಾಡುವ ಉದ್ದೇಶದಿಂದ ಮಾಡಿರಲಿಕ್ಕಿಲ್ಲ. ಜನ ಹಣಕ್ಕಾಗಿ ಮಾಡುತ್ತಿದ್ದರು. ಆದ್ದರಿಂದ ಹಣ ಗಳಿಸುವ ಯಾರಾದರೂ ಅದನ್ನು ಬೃಹತ್ ಪ್ರಮಾಣದಲ್ಲಿ ಪ್ರಸಾರ ಮಾಡುವುದಿಲ್ಲ. ಯಾರಾದರೂ 45 ನಿಮಿಷಗಳಿಗೆ  75,000 ಪಾವತಿಸುತ್ತಾರೆಯೇ? ಎಂದು ಎಂದು ಸಿಜೆಐ ಚಂದ್ರಚೂಡ್ ಕೇಳಿದ್ದಾರೆ.

NEET  ಪ್ರ್ರಶ್ನೆ ಪತ್ರಿಕೆ ಸೋರಿಕೆಯ ಎರಡು ಸಾಧ್ಯತೆಗಳನ್ನು ಉನ್ನತ ನ್ಯಾಯಾಲಯವು ಮತ್ತಷ್ಟು ಚರ್ಚಿಸಿದೆ. “ಬ್ಯಾಂಕ್‌ಗಳ ಕಸ್ಟಡಿಗೆ ಮುಂಚೆಯೇ ಒಂದು ಪೇಪರ್ ಸೋರಿಕೆಯಾಗುತ್ತದೆ. ಅಂದರೆ, ಇದು ಮೇ 3 ರ ಮೊದಲು ಸಂಭವಿಸಿದೆ. ಎರಡನೆಯದಾಗಿ, ಪ್ರಶ್ನೆ ಪತ್ರಿಕೆ ಬ್ಯಾಂಕ್‌ಗಳಿಂದ ಹೊರತೆಗೆದು  ಕೇಂದ್ರಕ್ಕೆ ರವಾನಿಸುವ ಹೊತ್ತಲ್ಲಿ  ಸೋರಿಕೆ ಸಂಭವಿಸಿದೆ ಎಂದು ಸಿಜೆಐ ಹೇಳಿದರು.

ಪರೀಕ್ಷೆಯಲ್ಲಿ  ಅತೀ ಹೆಚ್ಚು  ಅಂಕಗಳ ಗಳಿಕೆ  ಮತ್ತು ಆಪಾದಿತ ಪ್ರಶ್ನೆ ಸೋರಿಕೆ ಕುರಿತು ವಿಚಾರಣೆ ನಡೆಸುತ್ತಿರುವಾಗ, ಪರೀಕ್ಷೆಯ ನಗರಗಳನ್ನು ಬದಲಾಯಿಸಿದ ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ಟಾಪ್ 1.08 ಲಕ್ಷಕ್ಕೆ ತಲುಪಿದ್ದಾರೆ ಮತ್ತು ಏಪ್ರಿಲ್ 9 ಮತ್ತು 10ರಂದು  ನೋಂದಾಯಿಸಿದವರ ಫಲಿತಾಂಶ ಏನಾಗಿದೆ ಎಂದು ತಿಳಿಸುವಂತೆ ಎನ್‌ಟಿಎಗೆ ಸುಪ್ರೀಂ ಕೋರ್ಟ್ ಹೇಳಿದೆ,

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ಪದವಿಪೂರ್ವ) ಅಕ್ರಮಗಳಿಗೆ ಸಂಬಂಧಿಸಿದಂತೆ ಸುಮಾರು 40 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಐಐಟಿ ಮದ್ರಾಸ್ ವರದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ವಕೀಲರು ಆರೋಪಿಸಿದ್ದಾರೆ. “ಬಹದ್ದೂರ್‌ಗಢ್‌ನ ಒಂದು ಹರದಯಾಳ್ ಶಾಲೆಯಲ್ಲಿ 6 ಜನರಿದ್ದರು. ಬಹದ್ದೂರ್‌ಗಢದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಕೆನರಾ ಬ್ಯಾಂಕ್‌ನಿಂದ ತೆಗೆದ ಪ್ರಶ್ನೆಪತ್ರಿಕೆ ವಿತರಿಸಲಾಗಿದೆ ಎಂದು ಎನ್‌ಟಿಎ ಬಹಿರಂಗಪಡಿಸಿಲ್ಲ. ತಡವಾಗಲಿಲ್ಲ. ಅವರು ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ನಿಂದ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು  ಹೇಳಿದ್ದಾರೆ ಎಂದು ಹೂಡಾ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.

ಇದನ್ನೂ ಓದಿ: Shocking Video: ನಾಯಿಯನ್ನು ಹಗ್ಗದಲ್ಲಿ ಕಟ್ಟಿ ಟೆರೇಸ್‌ನಿಂದ ನೇತಾಡಿಸಿದ ಯುವಕ; ಶಾಕಿಂಗ್ ವಿಡಿಯೋ ವೈರಲ್

ಸೋರಿಕೆಯು ತುಂಬಾ ವ್ಯವಸ್ಥಿತವಾಗಿದೆ. ಸಂಪೂರ್ಣ ಪರೀಕ್ಷೆಯ ರದ್ದತಿಯನ್ನು ಖಾತರಿಪಡಿಸುವಂತೆ ಇಡೀ ಪರೀಕ್ಷೆಯ ಮೇಲೆ ಪರಿಣಾಮ ಬೀರಿದೆ ಎಂದು ನೀವು ನಮಗೆ ತೋರಿಸಬೇಕು. ಮರು ಪರೀಕ್ಷೆಯು ಸಂಪೂರ್ಣ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂಬ ಭದ್ರ ತಳಹದಿಯ ಮೇಲೆ ಇರಬೇಕು ಎಂದು ಸಿಜೆಐ ಅರ್ಜಿದಾರರಿಗೆ ಹೇಳಿದ್ದಾರೆ.

ಸಿಬಿಐ ತನಿಖೆ ನಡೆಯುತ್ತಿದೆ.ಏಜೆನ್ಸಿ ನಮಗೆ ಏನು ಹೇಳಿದೆ ಎಂಬುದನ್ನು ಬಹಿರಂಗಪಡಿಸಿದರೆ, ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ, ಜನರು ಬುದ್ಧಿವಂತರಾಗುತ್ತಾರೆ ಎಂದು ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಹೇಳಿರುವುದಾಗಿ ಪಿಟಿಐ ಹೇಳಿದೆ.

ಏತನ್ಮಧ್ಯೆ, ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಾಟ್ನಾದ ಏಮ್ಸ್‌ನ ಮೂವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದೆ. ಆದಾಗ್ಯೂ, ಪಿಟಿಐ ಪ್ರಕಾರ, ವಿಚಾರಣೆಗೊಳಪಡಿಸಲಾದ  ವಿದ್ಯಾರ್ಥಿಗಳ ಕುರಿತು ಹೆಚ್ಚಿನ ವಿವರಗಳು ತಕ್ಷಣವೇ ತಿಳಿದುಬಂದಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Thu, 18 July 24