ಪಿಟ್ಬುಲ್ನಿಂದ ಡೆಲಿವರಿ ಮ್ಯಾನ್ ದಾಳಿ; ಕಾಪಾಡಿ ಎಂದು ಅಳುತ್ತಾ ಕಾರಿನ ಮೇಲೆ ಹತ್ತಿದ ಯುವಕ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಭಯಾನಕ ಘಟನೆಯೊಂದರಲ್ಲಿ ಎರಡು ಪಿಟ್‌ಬುಲ್ ನಾಯಿಗಳು ಛತ್ತೀಸ್‌ಗಢದ ರಾಯ್‌ಪುರದಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿವೆ. ಖಮರ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಅನುಪಮ್ ನಗರದಲ್ಲಿ ಇಂದು ಈ ಘಟನೆ ನಡೆದಿದೆ.
ಎರಡು ಪಿಟ್‌ಬುಲ್ ನಾಯಿಗಳು ಡೆಲಿವರಿ ಬಾಯ್ ಮೇಲೆ ದಾಳಿ ಮಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ನಾಯಿಗಳು ಡೆಲಿವರಿ ಮ್ಯಾನ್ ಸಲ್ಮಾನ್ ಖಾನ್ನನ್ನು ಹಿಂಬಾಲಿಸಿದಾಗ ಕಂಗಾಲಾದ ಅವರು ಕಾರಿನ ಮೇಲೆ ಹತತ್ಇ ಕುಳಿತು ಹೆಲ್ಪ್ ಹೆಲ್ಪ್ ಎಂದು ಕೂಗಿದ್ದಾರೆ. ನಾಯಿಗಳು ಕಚ್ಚಿದ್ದರಿಂದ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದೆ.
ವೈರಲ್ ವಿಡಿಯೋದಲ್ಲಿ ಸಲ್ಮಾನ್‌ಗೆ ನಾಯಿಗಳು ಕಚ್ಚಿದ್ದು, ನೋವಿನಿಂದ ಒದ್ದಾಡುತ್ತಿರುವುದು, ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿದೆ. ದುಃಖಕರವೆಂದರೆ ಅವರ ಸಹಾಯಕ್ಕೆ ಯಾರೂ ಬರಲಿಲ್ಲ. ಕೊನೆಗೂ ಆ ಮನೆಯಿಂದ ಅವರು ಹೊರಗೆ ಬರಲು ಯಶಸ್ವಿಯಾದರು. ತನ್ನನ್ನು ಉಳಿಸಿಕೊಳ್ಳಲು ಮನೆಯ ಹೊರಗೆ ನಿಲ್ಲಿಸಿದ ಕಾರಿನ ಮೇಲೆ ಹತ್ತಿ ಕುಳಿತಿದ್ದಾರೆ. ನಾಯಿಗಳು ಹೋದ ನಂತರ ವ್ಯಕ್ತಿಯೊಬ್ಬರು ನೀರಿನ ಬಾಟಲಿಯನ್ನು ಅವರಿಗೆ ನೀಡಿದ್ದಾರೆ. ಆಗ ಸಲ್ಮಾನ್ ಅವರ ಕೈ ಮತ್ತು ಕಾಲುಗಳಿಂದ ರಕ್ತ ಸುರಿಯುತ್ತಿದ್ದು, ಸಹಾಯ ಮಾಡುವಂತೆ ಮನವಿ ಮಾಡುವುದನ್ನು ಕಾಣಬಹುದು.
ಇದನ್ನೂ ಓದಿ: Viral Video: ಕೇರಳದ ದೇವಾಲಯಕ್ಕೆ ಸೀರೆಯುಟ್ಟ ವಿದೇಶಿ ಮಹಿಳೆಗೆ ನಿರ್ಬಂಧ; ವಿಡಿಯೋ ವೈರಲ್
ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಬ್ಬ ಬಳಕೆದಾರರು, “ನಾಯಿ ಮಾಲೀಕರನ್ನು ಜೈಲಿನಲ್ಲಿಡಬೇಕು. ಡೆಲಿವರಿ ಮ್ಯಾನ್ಗೆ ವೈದ್ಯಕೀಯ ಶುಲ್ಕವನ್ನು ಮಾಲೀಕರೇ ಪಾವತಿಸಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹ ಕ್ರೂರ ನಾಯಿಯನ್ನು ಮನೆಯೊಳಗೆ ಕಟ್ಟಲು ಆಗುವುದಿಲ್ಲವೇ? ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
A delivery boy named Salman Khan was attacked by a Pitbull in Raipur.
I hope action will be taken against the owners in this case.
Govt of India has recently banned sale and breeding of Pitbull & 23 other dangerous dog breeds in India. pic.twitter.com/n2pK55jeYw
— Incognito (@Incognito_qfs) July 16, 2024
ಈಟಿವಿ ಭಾರತ್ ವರದಿ ಪ್ರಕಾರ, “ಸಂಧ್ಯಾ ರಾವ್ ಎಂಬ ಮಹಿಳೆ ಇಲ್ಲಿ ವಾಸಿಸುತ್ತಿದ್ದಾರೆ. ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಡಾ. ಸಂಧ್ಯಾ ರಾವ್ ತಮ್ಮ ಮನೆಯಲ್ಲಿ 3 ನಾಯಿಗಳನ್ನು ಸಾಕಿದ್ದಾರೆ. ಮೂರು ನಾಯಿಗಳಲ್ಲಿ ಎರಡು ನಾಯಿಗಳು ಪಿಟ್‌ಬುಲ್ ತಳಿಯಾಗಿದ್ದು, ಇಂದು ಸಂಧ್ಯಾ ರಾವ್ ಅವರ ಮನೆಗೆ ಬಂದಿದ್ದ ಡೆಲಿವರಿ ಬಾಯ್ ಮೇಲೆ 2 ಪಿಟ್‌ಬುಲ್ ನಾಯಿಗಳು ದಾಳಿ ನಡೆಸಿವೆ. ಅವು ಡೆಲಿವರಿ ಬಾಯ್‌ನ ಕೈ ಮತ್ತು ಕಾಲುಗಳಿಗೆ ಕಚ್ಚಿವೆ.”
ಇದನ್ನೂ ಓದಿ: Viral Video: ಹಸು ಎಂದುಕೊಂಡು ಎಮ್ಮೆಗೆ 10 ಕೆಜಿ ಚಿನ್ನದ ಸರ ಹಾಕಿದ ಮಾಲೀಕ; ಇಂಟರ್ನೆಟ್ನಲ್ಲಿ ವಿಡಿಯೋ ವೈರಲ್
ಡಾ. ಸಂಧ್ಯಾ ರಾವ್ ಅವರ ಪಿಟ್ ಬುಲ್ಸ್ ಇದುವರೆಗೆ ಐದು ಜನರ ಮೇಲೆ ದಾಳಿ ನಡೆಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮನೆ ಬಾಗಿಲು ತೆರೆದಿರುವಾಗ ನಾಯಿಗಳು ಸ್ವಚ್ಛಂದವಾಗಿ ಓಡಾಡುವುದರಿಂದ ಅಕ್ಕಪಕ್ಕದ ಮನೆಯವರು ಭಯದಲ್ಲಿ ಬದುಕುವಂತಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Thu, 18 July 24