AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET UG 2026 Results: ನೀಟ್ ಯುಜಿ ಫಲಿತಾಂಶ ಪ್ರಕಟ; 11.21 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ; ರಿಸಲ್ಟ್ ನೋಡುವುದು ಹೇಗೆ?

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇಂದು 'ನೀಟ್ ಯುಜಿ 2026' (NEET UG 2026) ಪರೀಕ್ಷೆಯ ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ದೇಶಾದ್ಯಂತ ವೈದ್ಯಕೀಯ (MBBS), ದಂತವೈದ್ಯಕೀಯ (BDS), ಆಯುಷ್ (AYUSH) ಮತ್ತು ಇತರ ಸಂಬಂಧಿತ ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಒಟ್ಟು 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ವೈದ್ಯಕೀಯ ಪ್ರವೇಶಾತಿ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯು ನಿಗದಿತ ಸಮಯಕ್ಕೆ ನಡೆಸುವಂತೆ ನೋಡಿಕೊಳ್ಳಲು ಫಲಿತಾಂಶವನ್ನು ತ್ವರಿತವಾಗಿ ಪ್ರಕಟಿಸಲಾಗಿದೆ.

NEET UG 2026 Results: ನೀಟ್ ಯುಜಿ ಫಲಿತಾಂಶ ಪ್ರಕಟ; 11.21 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣ; ರಿಸಲ್ಟ್ ನೋಡುವುದು ಹೇಗೆ?
NEET UG 2026 Results Image Credit source: TV9
ಸುಷ್ಮಾ ಚಕ್ರೆ
|

Updated on:Jul 16, 2026 | 11:43 PM

Share

ಮುಖ್ಯಾಂಶಗಳು

  • ನೀಟ್ ಯುಜಿ ಪರೀಕ್ಷೆಯಲ್ಲಿ 19 ಅಭ್ಯರ್ಥಿಗಳಿಗೆ 720ರಲ್ಲಿ 700ಕ್ಕಿಂತ ಹೆಚ್ಚು ಅಂಕ
  • 138 ಅಭ್ಯರ್ಥಿಗಳಿಗೆ 690ಕ್ಕಿಂತ ಹೆಚ್ಚು ಅಂಕ
  • ಈ ಬಾರಿಯೂ ಬಾಲಕಿಯರದೇ ಮೇಲುಗೈ

ನವದೆಹಲಿ, ಜುಲೈ 16: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇಂದು ‘ನೀಟ್ ಯುಜಿ 2026’ (NEET UG 2026) ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಉತ್ತೀರ್ಣರಾದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 58ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 715 ಅಂಕಗಳೊಂದಿಗೆ ಇಬ್ಬರಿಗೆ ಪ್ರಥಮ ಸ್ಥಾನ ಲಭಿಸಿದೆ. ಒಟ್ಟು 720 ಅಂಕಗಳಿಗೆ 715 ಅಂಕಗಳನ್ನು ಪಡೆಯುವ ಮೂಲಕ ಪಂಜಾಬ್‌ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪನ್ಶುಲ್ ಬನ್ಸಾಲ್ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಜೂನ್ 21ರಂದು ದೇಶಾದ್ಯಂತ 551 ನಗರಗಳು ಹಾಗೂ ವಿದೇಶದ 14 ನಗರಗಳು ಸೇರಿದಂತೆ ಒಟ್ಟು 5,440 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ ಒಟ್ಟು 11.21 ಲಕ್ಷ ಅಭ್ಯರ್ಥಿಗಳು ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಂಗಾಳಿ, ಮರಾಠಿ ಮತ್ತು ಉರ್ದು ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ನಡೆಸಲಾಗಿತ್ತು.

ನೀಟ್ ಯುಜಿ ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?:

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಪರೀಕ್ಷಾ ಪ್ರಾಧಿಕಾರ ಇದರೊಂದಿಗೆ ಅಖಿಲ ಭಾರತ ಟಾಪರ್‌ಗಳು, ರಾಜ್ಯವಾರು ಟಾಪರ್‌ಗಳು, ವರ್ಗವಾರು ಟಾಪರ್‌ಗಳು, ಕಟ್‌-ಆಫ್ ಅಂಕಗಳು ಮತ್ತು ಭಾಷಾವಾರು ಭಾಗವಹಿಸುವಿಕೆಯ ವಿವರಗಳನ್ನು ಕೂಡ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ನೀಟ್ ಮರುಪರೀಕ್ಷೆ ಯಶಸ್ವಿ; 22 ಲಕ್ಷಕ್ಕೂ ಅಧಿಕ ಮಕ್ಕಳು ಹಾಜರ್; ಕಳೆದ ಬಾರಿಗಿಂತ ಭೌತಶಾಸ್ತ್ರ ಪತ್ರಿಕೆ ಕಠಿಣವಿತ್ತೆಂದ ವಿದ್ಯಾರ್ಥಿಗಳು

ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಲು ಅನುಸರಿಸಬೇಕಾದ ಹಂತಗಳು:

  • ಅಧಿಕೃತ ವೆಬ್‌ಸೈಟ್‌ neet.nta.nic.inಗೆ ಭೇಟಿ ನೀಡಿ
  • ಹೋಮ್​ಪೇಜ್​ನಲ್ಲಿರುವ ‘NEET UG 2026 re-exam scorecard’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ (Registration Number) ಅಥವಾ ರೋಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ.
  • ನಿಮ್ಮ ನೀಟ್ ಯುಜಿ 2026ರ ಸ್ಕೋರ್‌ಕಾರ್ಡ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
  • ಸ್ಕೋರ್‌ಕಾರ್ಡ್ ಪಿಡಿಎಫ್ (PDF) ಅನ್ನು ಡೌನ್‌ಲೋಡ್ ಮಾಡಿಕೊಂಡು, ಮುಂದಿನ ದಾಖಲಾತಿ ಪ್ರಕ್ರಿಯೆಗಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ (ಎನ್‌ಟಿಎ) ಮಾಹಿತಿಯ ಪ್ರಕಾರ, ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 58ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ದೇಶದ ಎಲ್ಲಾ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಅಭ್ಯರ್ಥಿಗಳು ಒಟ್ಟು 13 ಭಾಷೆಗಳಲ್ಲಿ ಈ ಪರೀಕ್ಷೆಯನ್ನು ಬರೆದಿದ್ದರು.

ದೇಶದ ಎಲ್ಲಾ ಭಾಗಗಳಿಂದಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1.7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ 43 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ವರ್ಷದ ನೀಟ್ ಪರೀಕ್ಷೆಯ ಟಾಪರ್​ಗಳು:

19 ಅಭ್ಯರ್ಥಿಗಳು 700ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

138 ಅಭ್ಯರ್ಥಿಗಳು 690ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

1,492 ಅಭ್ಯರ್ಥಿಗಳು 650 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

10,160 ಅಭ್ಯರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

ಇದನ್ನೂ ಓದಿ: ಲೋಪದೋಷಗಳನ್ನು ಸರಿಪಡಿಸಿದ್ದೇವೆ, ನೀಟ್ ಮರುಪರೀಕ್ಷೆ ಯಶಸ್ವಿಯಾಗಿದೆ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

690ಕ್ಕಿಂತ ಹೆಚ್ಚು ಅಂಕ ಗಳಿಸಿದ 138 ಅಭ್ಯರ್ಥಿಗಳು ದೇಶದ ಬೇರೆ ಬೇರೆ 66 ನಗರಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ 705ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಗ್ರ 17 ರ‍್ಯಾಂಕರ್‌ಗಳು 8 ರಾಜ್ಯಗಳವರು. ಆ ರಾಜ್ಯಗಳೆಂದರೆ, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು ಮತ್ತು ತೆಲಂಗಾಣ.

ಫಲಿತಾಂಶಗಳು ಸಮಯಕ್ಕೆ ಸರಿಯಾಗಿ ಪ್ರಕಟವಾಗಿರುವುದರಿಂದ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿವೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ಫಲಿತಾಂಶ ಪ್ರಕಟಿಸುವ ಮುನ್ನ ಎನ್‌ಟಿಎ ಅಂತಿಮ ಕೀಲಿ ಉತ್ತರವನ್ನು ಬಿಡುಗಡೆ ಮಾಡಿತ್ತು. ಮೌಲ್ಯಮಾಪನ ನೀತಿಯ ಪ್ರಕಾರ, ಭೌತಶಾಸ್ತ್ರದ ಎರಡು ಪ್ರಶ್ನೆಗಳನ್ನು ಪರಿಷ್ಕರಿಸಲಾಗಿತ್ತು. ಇದರಲ್ಲಿ ಒಂದು ಪ್ರಶ್ನೆಯನ್ನು ಕೈಬಿಡಲಾಗಿದ್ದು, ಮತ್ತೊಂದು ಪ್ರಶ್ನೆಗೆ ಎರಡು ಸರಿಯಾದ ಉತ್ತರಗಳನ್ನು ಅಂಗೀಕರಿಸಲಾಗಿತ್ತು. ಇದರಿಂದಾಗಿ ಎಲ್ಲಾ ಅಭ್ಯರ್ಥಿಗಳಿಗೆ 8 ಬೋನಸ್ ಅಂಕಗಳನ್ನು ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Thu, 16 July 26

Follow Us
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್
ಕರಾವಳಿ ಕಂಬಳಕ್ಕೆ 25 ಲಕ್ಷ ರೂ ಕೊಡಿ: ಸುನೀಲ್​ ಕುಮಾರ್ ಆಗ್ರಹ​
ಕರಾವಳಿ ಕಂಬಳಕ್ಕೆ 25 ಲಕ್ಷ ರೂ ಕೊಡಿ: ಸುನೀಲ್​ ಕುಮಾರ್ ಆಗ್ರಹ​