ಐಎಎಸ್ ಆಗಿ ರಾಜಕಾರಣಕ್ಕೆ, ಸೈಕಲ್​​ನಲ್ಲೇ ಲೋಕಸಭೆಗೆ ಬರುತ್ತಿದ್ದ ಸಂಸದ; ನೂತನ ಕಾನೂನು ಸಚಿವ ಮೇಘವಾಲ್ ಕಿರು ಪರಿಚಯ

| Updated By: Ganapathi Sharma

Updated on: May 18, 2023 | 6:17 PM

Arjun Ram Meghwal:ಅರ್ಜುನ್ ರಾಮ್ ಮೇಘವಾಲ್ ಅವರು ಭಾರತೀಯ ಆಡಳಿತ ಸೇವೆಯಲ್ಲಿ (IAS) ತಮ್ಮ ವೃತ್ತಿಪರ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ರಾಜಸ್ಥಾನ ಸರ್ಕಾರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದ್ದರು.

ಐಎಎಸ್ ಆಗಿ ರಾಜಕಾರಣಕ್ಕೆ, ಸೈಕಲ್​​ನಲ್ಲೇ ಲೋಕಸಭೆಗೆ ಬರುತ್ತಿದ್ದ ಸಂಸದ; ನೂತನ ಕಾನೂನು ಸಚಿವ ಮೇಘವಾಲ್ ಕಿರು ಪರಿಚಯ
ಅರ್ಜುನ್ ರಾಮ್ ಮೇಘವಾಲ್
Follow us on

ಪ್ರಮುಖ ಕೇಂದ್ರ ಕ್ಯಾಬಿನೆಟ್ ಪುನರ್ರಚನೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಅವರಿಗೆ ಗೇಟ್ ಪಾಸ್ ನೀಡಿದ್ದು, ಅವರ ಸ್ಥಾನಕ್ಕೆ ಅರ್ಜುನ್ ರಾಮ್ ಮೇಘವಾಲ್ (Arjun Ram Meghwal )ಅವರನ್ನು ನೇಮಕ ಮಾಡಲಾಗಿದೆ. ಮೇಘವಾಲ್ ತಾವು ಈಗಾಗಲೇ ವಹಿಸಿಕೊಂಡಿರು ಖಾತೆಗಳ ಜೊತೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾಗಿ(ಸ್ವತಂತ್ರ) ಉಸ್ತುವಾರಿ ವಹಿಸಿಕೊಂಡರು. ಅವರು ಪ್ರಸ್ತುತ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವರಾಗಿದ್ದಾರೆ. ಕಿರಣ್ ರಿಜಿಜು ಈಗ ಭೂ ವಿಜ್ಞಾನ ಸಚಿವಾಲಯದ ಖಾತೆಯನ್ನು ನಿರ್ವಹಿಸಲಿದ್ದಾರೆ.

14 ನೇ ವಯಸ್ಸಿನಲ್ಲಿ ವಿವಾಹ

ರಾಜಸ್ಥಾನದ ಬಿಕಾನೇರ್‌ನ ಮಧ್ಯಮ ವರ್ಗದ ಕುಟುಂಬದಿಂದ ಬಂದ 65 ವರ್ಷದ ಮೇಘವಾಲ್ ಅವರು ತಮ್ಮ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಭೀನಾಸರ್‌ನ ಜವಾಹರ್ ಜೈನ್ ಸೆಕೆಂಡರಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಅವರು ಎಂಟನೇ ತರಗತಿಯಲ್ಲಿ ಓದುತ್ತಿರುವಾಗ 14 ನೇ ವಯಸ್ಸಿನಲ್ಲಿ ವಿವಾಹವಾದರು. ವಿವಾಹ ನಂತರ ಅನರು ತಮ್ಮ ಅಧ್ಯಯನವನ್ನು ಮುಂದುವರೆಸಿದರು.ಬಿಕಾನೇರ್‌ನ ಶ್ರೀ ಡುಂಗರ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಮತ್ತು ಕಾನೂನು (ಎಲ್‌ಎಲ್‌ಬಿ) ಪಡೆದರು. ನಂತರ ಅದೇ ಕಾಲೇಜಿನಲ್ಲಿ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ (ಎಂಎ) ಪಡೆದರು. ಇವರು ಫಿಲಿಪೈನ್ಸ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ (MBA) ಕೂಡಾ ಪಡೆದಿದ್ದಾರೆ.

ಸಂಸತ್ತಿಗೆ ಸೈಕಲ್ ಸವಾರಿ

ಅರ್ಜುನ್ ರಾಮ್ ಮೇಘವಾಲ್ ಅವರು ಕೆಲಸ ಮಾಡಲು ಸೈಕ್ಲಿಂಗ್ ಅನ್ನು ಇಷ್ಟಪಡುವ ರಾಜಕಾರಣಿ. ಸಂಸತ್ತಿಗೆ ಸೈಕಲ್ ತುಳಿದೇ ಬರುವ ಸಂಸದ ಎಂದು ಅವರು ಹೆಸರುವಾಸಿಯಾಗಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಅವರು ಲೋಕಸಭೆಗೆ ಸೈಕಲ್ ಸವಾರಿ ಮಾಡಿದ್ದಾರೆ. 2016ರಲ್ಲಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾದ ಬಳಿಕ ಅವರು ಈ ಸವಾರಿ ನಿಲ್ಲಿಸಿದರು.

ರಾಜಕೀಯ ಸೇರುವ ಮುನ್ನ ಹೀಗಿತ್ತು ಜೀವನ

ಅರ್ಜುನ್ ರಾಮ್ ಮೇಘವಾಲ್ ಅವರು ಭಾರತೀಯ ಆಡಳಿತ ಸೇವೆಯಲ್ಲಿ (IAS) ತಮ್ಮ ವೃತ್ತಿಪರ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ರಾಜಸ್ಥಾನ ಸರ್ಕಾರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಸಮಾಜ ಸೇವೆಯತ್ತ ಗಮನ ಹರಿಸಲು ನಿರ್ಧರಿಸಿ ರಾಜಕೀಯ ಪ್ರವೇಶಿಸಿದರು. 2009 ರಲ್ಲಿ ಅವರು ಬಿಜೆಪಿ ಪ್ರತಿನಿಧಿಸುವ ಸಂಸತ್ತಿನ ಕೆಳಮನೆಯಾದ 15 ನೇ ಲೋಕಸಭೆಗೆ ಆಯ್ಕೆಯಾದರು.

ತಮ್ಮ ರಾಜಕೀಯ ಜೀವನದುದ್ದಕ್ಕೂ, ಅರ್ಜುನ್ ರಾಮ್ ಮೇಘವಾಲ್ ಅವರು ವಿವಿಧ ಹುದ್ದೆಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರು ವಿದೇಶಾಂಗ ವ್ಯವಹಾರಗಳ ಸಲಹಾ ಸಮಿತಿ, ರಕ್ಷಣೆಯ ಸ್ಥಾಯಿ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸ್ಥಾಯಿ ಸಮಿತಿ, ಪರಿಸರ ಮತ್ತು ಅರಣ್ಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿ ಸೇರಿದಂತೆ ಹಲವಾರು ಸಂಸದೀಯ ಸಲಹಾ ಮತ್ತು ಸಲಹಾ ಸಮಿತಿಗಳ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಸಂವಿಧಾನದ ಪ್ರಕಾರ ಕೆಲಸ ನಿರ್ವಹಿಸುತ್ತೇನೆ: ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮೊದಲ ಪ್ರತಿಕ್ರಿಯೆ

ರಾಜಸ್ಥಾನದಲ್ಲಿ ಬಿಜೆಪಿಯ ಉಪಾಧ್ಯಕ್ಷರಾಗಿ, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಮತ್ತು ಲೋಕಸಭೆಯ ಮುಖ್ಯ ಸಚೇತಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅರ್ಜುನ್ ರಾಮ್ ಮೇಘವಾಲ್ ಅವರು ವಿವಿಧ ಸಮಿತಿಗಳು ಮತ್ತು ವೇದಿಕೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Thu, 18 May 23