ಹೊಸ ಪಾರ್ಲಿಮೆಂಟ್ ನಿರ್ಮಾಣ 2022 ಆಕ್ಟೋಬರ್ಗೆ ಪೂರ್ಣ; ಇನ್ನು ಸೆಂಟ್ರಲ್ ವಿಸ್ಟಾ 2021 ನವಂಬರ್ ವೇಳೆಗೆ ಸಂಪೂರ್ಣ
ಮುಖ್ಯವಾಗಿ ದೆಹಲಿಯ ರಾಜಪಥ್ ನಲ್ಲಿ ಸಾಕಷ್ಟು ಮರಗಳಿವೆ. ಹಸಿರು ಇದೆ. ಇದನ್ನೆಲ್ಲಾ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ನಿರ್ಮಾಣದ ನೆಪದಲ್ಲಿ ಹಾಳು ಮಾಡಲಾಗುತ್ತೆ. ಮರಗಳನ್ನು ಕಡಿಯಲಾಗುತ್ತೆ. ಇದರಿಂದ ದೆಹಲಿಯ ರಾಜಪಥ್ ನ ಹಸಿರು ಮಾಯವಾಗುತ್ತೆ ಎಂಬ ಭೀತಿ ಪರಿಸರವಾದಿಗಳಲ್ಲಿತ್ತು. ಇದನ್ನು ಹೋಗಲಾಡಿಸಲು ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ನಡೆಸಲಾಗಿದೆ,
ದೆಹಲಿಯಲ್ಲಿ ಹೊಸ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೊಸ ಪಾರ್ಲಿಮೆಂಟ್ ಕಟ್ಟಡ ಕಾಮಗಾರಿಯು ಮುಂದಿನ ವರ್ಷದ ಆಕ್ಟೋಬರ್ ಗೆ ಪೂರ್ಣವಾಗಲಿದೆ ಎಂದು ಕೇಂದ್ರ ಸರ್ಕಾರ ಇಂದು ಪಾರ್ಲಿಮೆಂಟ್ ಗೆ ತಿಳಿಸಿದೆ. ದೆಹಲಿಯ ರಾಜಪಥ್ ನಲ್ಲಿ ನಡೆಯುತ್ತಿರುವ ಸೆಂಟ್ರಲ್ ವಿಸ್ಟಾ ಕಾಮಗಾರಿಯು ಈ ವರ್ಷದ ನವಂಬರ್ ನಲ್ಲೇ ಪೂರ್ಣವಾಗಲಿದೆ ಎಂದು ಕೇಂದ್ರ ಸರ್ಕಾರ ಪಾರ್ಲಿಮೆಂಟ್ ಗೆ ತಿಳಿಸಿದೆ.
2022ರ ಆಕ್ಟೋಬರ್ ಗೆ ಹೊಸ ಪಾರ್ಲಿಮೆಂಟ್ ನಿರ್ಮಾಣ ಪೂರ್ಣ ದೆಹಲಿಯಲ್ಲಿ ಈಗ ಬ್ರಿಟಿಷರು ನಿರ್ಮಿಸಿದ್ದ ಪಾರ್ಲಿಮೆಂಟ್ ಕಟ್ಟಡ ಇದೆ. ಆದರೆ, ದೇಶದ ಅಗತ್ಯತೆಗೆ ಅನುಗುಣವಾಗಿ ಹೊಸ ಪಾರ್ಲಿಮೆಂಟ್ ನಿರ್ಮಿಸಲು (Parliament Building) ಪ್ರಧಾನಿ ಮೋದಿ ಕಳೆದ ವರ್ಷವೇ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಹೊಸ ಪಾರ್ಲಿಮೆಂಟ್ ಕಟ್ಟಡದ ನಿರ್ಮಾಣ ಕಾಮಗಾರಿ ಯಾವಾಗ ಪೂರ್ಣವಾಗುತ್ತೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ಕೇಂದ್ರ ಸರ್ಕಾರ ಇಂದು ಪಾರ್ಲಿಮೆಂಟ್ ಗೆ ತಿಳಿಸಿದೆ. 2022ರ ಆಕ್ಟೋಬರ್ ವೇಳೆಗೆ ಹೊಸ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗಲಿದೆ ಎಂದು ಕೇಂದ್ರ ಸರ್ಕಾರ ಇಂದು ಪಾರ್ಲಿಮೆಂಟ್ ಗೆ ತಿಳಿಸಿದೆ.
ಹೊಸ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣಕ್ಕೆ ಕಳೆದ ವರ್ಷದ ಜೂನ್ ತಿಂಗಳ 17ರಂದೇ ಪರಿಸರ ಇಲಾಖೆಯಿಂದ ಕ್ಲಿಯರೆನ್ಸ್ ನೀಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ 75 ನೇ ವರ್ಷಾಚರಣೆಗೆ ಹೊಸ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣವಾಗಬೇಕು ಎನ್ನುವುದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಆಶಯ. ಪಾರ್ಲಿಮೆಂಟ್ ಕಟ್ಟಡ ಕೂಡ ದೇಶದ ಆತ್ಮನಿರ್ಭರ ಭಾರತದ ಸಂಕೇತ ಎಂದು ಪ್ರಧಾನಿ ಶಂಕುಸ್ಥಾಪನೆ ವೇಳೆ ಹೇಳಿದ್ದರು.
ದೆಹಲಿಯ ರಾಜಪಥ್ ನಲ್ಲಿ ನಡೆಯುತ್ತಿದೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಕಾಮಗಾರಿ: ದೆಹಲಿಯ ರಾಜಪಥ್ ನಲ್ಲಿ ನಡೆಯುತ್ತಿರುವ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ನ (Central Vista Avenue) ಕಾಮಗಾರಿಗಳು ಈ ವರ್ಷದ ನವಂಬರ್ ನಲ್ಲಿ ಪೂರ್ಣವಾಗಲಿದೆ ಎಂದು ಪಾರ್ಲಿಮೆಂಟ್ ಗೆ ಕೇಂದ್ರ ಸರ್ಕಾರ ತಿಳಿಸಿದೆ. ಸೆಂಟ್ರಲ್ ವಿಸ್ಟಾ ಹಾಗೂ ಅದಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಈ ವರ್ಷದ ಮೇ 3ರಂದು ಪರಿಸರ ಇಲಾಖೆಯಿಂದ ಒಪ್ಪಿಗೆ ನೀಡಲಾಗಿದೆ. ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ನಲ್ಲಿ ಸೆಂಟ್ರಲ್ ಸೆಕ್ರೆಟೇರಿಯೆಟ್ ಕಟ್ಟಡ, ಸೆಂಟ್ರಲ್ ಕಾನ್ಪರೆನ್ಸ್ ಸೆಂಟರ್, ಪ್ರಧಾನಮಂತ್ರಿ ನಿವಾಸ, ಎಸ್‌ಪಿಜಿ ಕಟ್ಟಡ, ಉಪರಾಷ್ಟ್ರಪತಿ ನಿವಾಸ ನಿರ್ಮಾಣವೂ ಸೇರಿವೆ.
ಸೆಂಟ್ರಲ್ ವಿಸ್ಟಾ ಮಾಸ್ಟರ್ ಪ್ಲ್ಯಾನ್ ಪ್ರಕಾರ, ಯಾವುದೇ ಹೆರಿಟೇಜ್ ಕಟ್ಟಡಗಳನ್ನು ನೆಲಸಮ ಮಾಡಲ್ಲ. ನ್ಯಾಷನಲ್ ಆರ್ಚೀವ್, ನ್ಯಾಷನಲ್ ಮ್ಯೂಸಿಯಂನ ಎಲ್ಲ ದಾಖಲೆಗಳನ್ನ ಸಂಶೋಧಕರು ಈಗಲೂ ಕೂಡ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಪಾರ್ಲಿಮೆಂಟ್ ಗೆ ತಿಳಿಸಿದೆ. ಸೆಂಟ್ರಲ್ ವಿಸ್ಟಾದ ಎಲ್ಲ ಯೋಜನೆಗಳಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಪಾರ್ಲಿಮೆಂಟ್ ಗೆ ಇಂದು ತಿಳಿಸಿದೆ.
ಮುಖ್ಯವಾಗಿ ದೆಹಲಿಯ ರಾಜಪಥ್ ನಲ್ಲಿ ಸಾಕಷ್ಟು ಮರಗಳಿವೆ. ಹಸಿರು ಇದೆ. ಇದನ್ನೆಲ್ಲಾ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ನಿರ್ಮಾಣದ ನೆಪದಲ್ಲಿ ಹಾಳು ಮಾಡಲಾಗುತ್ತೆ. ಮರಗಳನ್ನು ಕಡಿಯಲಾಗುತ್ತೆ. ಇದರಿಂದ ದೆಹಲಿಯ ರಾಜಪಥ್ ನ ಹಸಿರು ಮಾಯವಾಗುತ್ತೆ ಎಂಬ ಭೀತಿ ಪರಿಸರವಾದಿಗಳಲ್ಲಿತ್ತು. ಇದನ್ನು ಹೋಗಲಾಡಿಸಲು ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನ ನಡೆಸಲಾಗಿದೆ, ಬಳಿಕವಷ್ಟೇ ಕೇಂದ್ರದ ಅರಣ್ಯ, ಪರಿಸರ ಇಲಾಖೆಯಿಂದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
(new Parliament Building ready by october 2022 Central Vista Avenue to be ready by november 2021)
Published On - 5:20 pm, Thu, 22 July 21