NIA: ಹೈದರಾಬಾದ್​ನಲ್ಲಿ ಎನ್​ಐಎಯಿಂದ ಮೂವರು ಶಂಕಿತ ಉಗ್ರರ ಬಂಧನ: ಹ್ಯಾಂಡ್ ಗ್ರೆನೇಡ್ ವಶಕ್ಕೆ

ಎನ್​ಐಎ ತಂಡವು ಮೂವರು ಉಗ್ರರನ್ನು ಬಂಧಿಸಿದ್ದು, ಅವರಿಂದ ಹ್ಯಾಂಡ್ ಗ್ರೆನೇಡ್​ ಅನ್ನು ವಶಪಡಿಸಿಕೊಂಡಿದೆ. ಅಬ್ದುಲ್​ ಜಾಹೀದ್​ ಸೇರಿದಂತೆ ಮೂವರು ಉಗ್ರರರನ್ನು ಹೈದರಾಬಾದ್​ನಲ್ಲಿ ಬಂಧಿಸಲಾಗಿದೆ.

NIA: ಹೈದರಾಬಾದ್​ನಲ್ಲಿ ಎನ್​ಐಎಯಿಂದ ಮೂವರು ಶಂಕಿತ ಉಗ್ರರ ಬಂಧನ: ಹ್ಯಾಂಡ್ ಗ್ರೆನೇಡ್ ವಶಕ್ಕೆ
ಎನ್​ಐಎ
Follow us
|

Updated on: Feb 05, 2023 | 10:28 AM

ಹೈದರಾಬಾದ್: ಎನ್​ಐಎ ತಂಡವು ಮೂವರು ಉಗ್ರರನ್ನು ಬಂಧಿಸಿದ್ದು, ಅವರಿಂದ ಹ್ಯಾಂಡ್ ಗ್ರೆನೇಡ್​ ಅನ್ನು ವಶಪಡಿಸಿಕೊಂಡಿದೆ. ಅಬ್ದುಲ್​ ಜಾಹೀದ್​ ಸೇರಿದಂತೆ ಮೂವರು ಉಗ್ರರರನ್ನು ಹೈದರಾಬಾದ್​ನಲ್ಲಿ ಬಂಧಿಸಲಾಗಿದೆ. ಇವರು ಹೈದರಾಬಾದ್​​​ನಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. UAPA ಕಾಯ್ದೆಯಡಿ ಎಫ್ಐಆರ್ ಎನ್​ಐಎ ಎಫ್​ಐಆರ್ ದಾಖಲಿಸಿದೆ. 2005 ರಲ್ಲಿ ಆತ್ಮಹತ್ಯಾ ಬಾಂಬ್  ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಜಾಹೆದ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2017 ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಮತ್ತಷ್ಟು ಓದಿ: Shivamogga News: ಶಿವಮೊಗ್ಗದಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ: ಎನ್​​ಐಎಯಿಂದ ವಿಚಾರಣೆ

ಅಬ್ದುಲ್ ಜಾಹೀದ್ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಸೂಚನೆಗಳ ಆಧಾರದ ಮೇಲೆ ಹೈದರಾಬಾದ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ. ಆರೋಪಿಗಳ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಹೀದ್ ಇದ್ದ ಸ್ಥಳದಲ್ಲಿ ಪತ್ತೆಯಾದ ಎರಡು ಗ್ರೆನೇಡ್, ಎರಡು ಮೊಬೈಲ್ ಫೋನ್‌ ಮತ್ತು 3,91,800 ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ