Year Ender 2022: NIA ಇತಿಹಾಸದಲ್ಲೇ 2022ರಲ್ಲಿ ಅತೀ ಹೆಚ್ಚು ದಾಳಿ, 19.67% ಕೇಸ್​ ಹೆಚ್ಚಳ!

ರಾಷ್ಟ್ರೀಯ ತನಿಖಾ ಸಂಸ್ಥೆ ಇತಿಹಾಸದಲ್ಲೇ ಈ ವರ್ಷ ಅತೀ ಹೆಚ್ಚು ದಾಳಿ ಮಾಡಿದ್ದು, ಕಳೆದ ವರ್ಷಕ್ಕೆ ಹೊಲಿಸಿದರೆ ಶೇಕಡ 19.67ರಷ್ಟು ಪ್ರಕರಣಗಳು​ ಹೆಚ್ಚಳವಾಗಿವೆ. ಇನ್ನು 2022ರಲ್ಲಿ ಎಷ್ಟು ಕೇಸ್? ಎಷ್ಟು ಬಂಧನ? ಎನ್ನುವ ಸಂಪೂರ್ಣಮಾಹಿತಿಯನ್ನು ಎನ್​ಐಎ ನೀಡಿದ್ದು, ಅದು ಈ ಕೆಳಗಿನಂತಿದೆ ನೋಡಿ.

Year Ender 2022: NIA ಇತಿಹಾಸದಲ್ಲೇ 2022ರಲ್ಲಿ ಅತೀ ಹೆಚ್ಚು ದಾಳಿ, 19.67% ಕೇಸ್​ ಹೆಚ್ಚಳ!
ಎನ್ಐಎ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 31, 2022 | 4:39 PM

ನವದೆಹಲಿ: 2022ರಲ್ಲಿ ದೇಶದಾದ್ಯಂತ ರಾಷ್ಟ್ರೀಯ ತನಿಖಾ ಸಂಸ್ಥೆ(National Investigation Agency) ದಾಳಿ ಮಾಡಿ ಒಟ್ಟು 73 ಪ್ರಕರಣಗಳನ್ನು ದಾಖಲಿಸಿದೆ. 2021ರಲ್ಲಿ ದಾಖಲಾದ 61 ಪ್ರಕರಣಗಳಿಗಿಂತ 19.67% ಹೆಚ್ಚಳವಾಗಿದ್ದು, ಇದು ಎನ್ಐಎ ಇತಿಹಾಸದಲ್ಲೇ ಅತೀ ಹೆಚ್ಚು. ಈ ಬಗ್ಗೆ ಇಂದು(ಡಿಸೆಂಬರ್ 31) ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದ್ದು, 2022ರಲ್ಲಿ ನಡೆಸಿದ ದಾಳಿಗಳು ಸಾರ್ವಕಾಲಿಕ ಗರಿಷ್ಠವಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: Year End 2022: 2022 ಯಶಸ್ವಿ ವರ್ಷ, ಬದಲಾಗುತ್ತಿದೆ ಜಮ್ಮು ಮತ್ತು ಕಾಶ್ಮೀರ: 172 ಭಯೋತ್ಪಾದಕರ ಹತ್ಯೆ

73 ಪ್ರಕರಣಗಳ ಪೈಕಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಬಿಹಾರ, ದೆಹಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಜಿಹಾದಿ ಉಗ್ರಗಾಮಿತ್ವದ 35 ಪ್ರಕರಣಗಳು ಒಳಗೊಂಡಿವೆ ಎಂದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿತ 11 ಪ್ರಕರಣಗಳ ,ಎಡಪಂಥೀಯ ಉಗ್ರವಾದ (LWE) 10 ಪ್ರಕರಣಗಳು, NE ನಲ್ಲಿ 5 ಪ್ರಕರಣಗಳು ಪ್ರಕರಣಗಳು ಸೇರಿವೆ. ಇನ್ನು 7 PFI ಸಂಬಂಧಿತ ಪ್ರಕರಣಗಳು, ಪಂಜಾಬ್‌ನ 5 ಪ್ರಕರಣಗಳು ಒಳಗೊಂಡಿದ್ದು, ಈ ಪೈಕಿ ದರೋಡೆಕೋರ-ಭಯೋತ್ಪಾದನೆ-ಮಾದಕ ಕಳ್ಳಸಾಗಣೆದಾರರ ಸಂಬಂಧದ 3 ಪ್ರಕರಣಗಳು. ಭಯೋತ್ಪಾದಕ-ಧನಸಹಾಯದ 1 ಪ್ರಕರಣ ಮತ್ತು 2 ಎಫ್‌ಐಸಿಎನ್ ಸಂಬಂಧಿತ ಪ್ರಕರಣಗಳು ಸೇರಿವೆ.

2022ರಲ್ಲಿ 456 ಆರೋಪಿಗಳ ಬಂಧನ

ಎನ್ಐಎ 2022 ರಲ್ಲಿ 368 ಜನರ ವಿರುದ್ಧ 59 ಆರೋಪಪಟ್ಟಿಗಳನ್ನು ಸಲ್ಲಿಸಿದೆ. 19 ಮಂದಿ ತಲೆಮರೆಸಿಕೊಂಡವರು ಸೇರಿದಂತೆ 456 ಆರೋಪಿಗಳನ್ನು ಬಂಧಿಸಿದೆ. 2022 ರಲ್ಲಿ 368 ಜನರ ವಿರುದ್ಧ ಎನ್ಐಎ 59 ಆರೋಪಪಟ್ಟಿಗಳನ್ನು ಸಲ್ಲಿಸಿದೆ. 19 ಮಂದಿ ತಲೆಮರೆಸಿಕೊಂಡವರು ಸೇರಿದಂತೆ 456 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು 2022ರಲ್ಲಿ 38 ಪ್ರಕರಣಗಳಲ್ಲಿ ತೀರ್ಪುಗಳನ್ನು ನೀಡಲಾಗಿದ್ದು, 109 ವ್ಯಕ್ತಿಗಳಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಆರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನೂ ನೀಡಲಾಗಿದೆ.

2022 ರಲ್ಲಿ ಯುಎಪಿಎ ಅಡಿಯಲ್ಲಿ 8 ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗೊತ್ತುಪಡಿಸಲಾಗಿದ್ದು, ಅವರ ವಿರುದ್ಧ ಅಗತ್ಯ ಕ್ರಮವನ್ನು ಎನ್ಐಎ ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ನವದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್ ನಲ್ಲಿ ಮೂರನೇ ‘ ನೋ ಮನಿ ಫಾರ್ ಟೆರರ್ ‘ (ಎನ್ ಎಂಎಫ್ ಟಿ) ಭಯೋತ್ಪಾದನಾ ನಿಗ್ರಹ ಹಣಕಾಸು ಸಮ್ಮೇಳನವನ್ನು ನವೆಂಬರ್ 2022ರ ನವೆಂಬರ್ 18 ಹಾಗೂ19ರಂದು ಯಶಸ್ವಿಯಾಗಿ ನಡೆಸಿತ್ತು. ಇದರಲ್ಲಿ 78 ದೇಶಗಳು ಮತ್ತು 16 ಬಹುಪಕ್ಷೀಯ ಸಂಸ್ಥೆಗಳು ಭಾಗವಹಿಸಿದ್ದವು ಎಂದು ಎನ್​ಐಎ 2022ರ ಮಾಹಿತಿ ನೀಡಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:32 pm, Sat, 31 December 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್