AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways: 2030ಕ್ಕೆ ವಿಶ್ವದ ಅತಿದೊಡ್ಡ ‘ಹಸಿರು ರೈಲ್ವೆ’ ಆಗಲಿದೆ ಭಾರತೀಯ ರೈಲ್ವೆ

2030ರ ಒಳಗೆ ‘ಹಸಿರು ರೈಲ್ವೆ’ಯಾಗಿ ಪರಿವರ್ತನೆ ಹೊಂದುವ ಮೂಲಕ ಶೂನ್ಯ ಕಾರ್ಬನ್ ಉಗುಳುವಿಕೆ ಗುರಿಯನ್ನು ಸಾಧಿಸುವುದು ರೈಲ್ವೆ ಇಲಾಖೆಯ ಗುರಿಯಾಗಿದೆ.

Indian Railways: 2030ಕ್ಕೆ ವಿಶ್ವದ ಅತಿದೊಡ್ಡ ‘ಹಸಿರು ರೈಲ್ವೆ’ ಆಗಲಿದೆ ಭಾರತೀಯ ರೈಲ್ವೆ
ರೈಲು (ಸಾಂದರ್ಭಿಕ ಚಿತ್ರ)Image Credit source: google image
TV9 Web
| Edited By: |

Updated on:Dec 31, 2022 | 3:41 PM

Share

ನವದೆಹಲಿ: ಭಾರತೀಯ ರೈಲ್ವೆಯು (Indian Railways) ಇಡೀ ಬ್ರಾಡ್​ಗೇಜ್ ಜಾಲವನ್ನು ವಿದ್ಯುದೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, 2030ರ ವೇಳೆಗೆ ವಿಶ್ವದ ಅತಿದೊಡ್ಡ ‘ಹಸಿರು ರೈಲ್ವೆ (Green Railways)’ ಜಾಲವಾಗಿ ಗುರುತಿಸಿಕೊಳ್ಳಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ಮಾಲಿನ್ಯರಹಿತ ಇಂಧ ದಕ್ಷತೆ ಹೆಚ್ಚಿಸುವತ್ತ ಇಲಾಖೆ ಗಮನಹರಿಸಿದೆ. ಈಗಾಗಲೇ ತನ್ನ ವಿದ್ಯುದೀಕರಣಗೊಂಡ (Electrification) ಜಾಲವನ್ನು ಶೇಕಡಾ 83ಕ್ಕೆ ವಿಸ್ತರಣೆ ಮಾಡಿದೆ. 2014ರ ನಂತರ ಈವರೆಗೆ 32,0000 ರೂಟ್ ಕಿಲೋಮೀಟರ್​ಗಳ ಹಳಿಗಳನ್ನು ವಿದ್ಯುದೀಕರಣ ಮಾಡಲಾಗಿದೆ ಎಂದು ವರದಿಯಾಗಿದೆ.

2030ರ ಒಳಗೆ ‘ಹಸಿರು ರೈಲ್ವೆ’ಯಾಗಿ ಪರಿವರ್ತನೆ ಹೊಂದುವ ಮೂಲಕ ಶೂನ್ಯ ಕಾರ್ಬನ್ ಉಗುಳುವಿಕೆ ಗುರಿಯನ್ನು ಸಾಧಿಸುವುದು ರೈಲ್ವೆ ಇಲಾಖೆಯ ಗುರಿಯಾಗಿದೆ ಎಂದು ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. 2022-23ರಲ್ಲಿ 1,973 ರೂಟ್ ಕಿಲೋಮೀಟರ್​ ಹಳಿ ವಿದ್ಯುದೀಕರಣಗೊಳಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 41ರ ಪ್ರಗತಿ ಸಾಧಿಸಲಾಗಿದೆ. ಪೂರ್ವ ಕರಾವಳಿ ರೈಲ್ವೆ, ದಕ್ಷಿಣ ಪೂರ್ವ ರೈಲ್ವೆ, ಪಶ್ಚಿಮ ರೈಲ್ವೆ, ಪೂರ್ವ ರೈಲ್ವೆ ಮತ್ತು ಉತ್ತರ ಕೇಂದ್ರ ರೈಲ್ವೆ ವಿಭಾಗಗಳು ಸಂಪೂರ್ಣ ವಿದ್ಯುದೀಕರಣಗೊಂಡಿವೆ. ಇದಕ್ಕೆ ಪೂರಕವಾಗಿ 1,161 ಕಿಲೋಮೀಟರ್ ದ್ವಿಗುಣ ಹಳಿ ವಿದ್ಯುದೀಕರಣ ಮಾಡಲಾಗಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿ ವರದಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Indian Railways: ರೈಲ್ವೆಯ ಆದಾಯ ಗಳಿಕೆಯು ಪ್ರಯಾಣಿಕರ ವಿಭಾಗದಲ್ಲಿ ಶೇ. 92 ಹೆಚ್ಚಳ

2021-22ರಲ್ಲಿ 6,366 ರೂಟ್ ಕಿಲೋಮೀಟರ್ ಹಳಿಯನ್ನು ವಿದ್ಯುದೀಕರಣಗೊಳಿಸಲಾಗಿತ್ತು. 2020-21ರಲ್ಲಿ 6,015 ರೂಟ್ ಕಿಲೋಮೀಟರ್ ಹಳಿಯನ್ನು ವಿದ್ಯುದೀಕರಣಗೊಳಿಸಲಾಗಿತ್ತು. ಇದರ ಹೊರತಾಗಿ, ನವದೆಹಲಿ – ಕಠ್​ಗೋಡಂ, ನವದೆಹಲಿ – ಸಮ್​​ಖಿಯಲಿ, ಚೆನ್ನೈ – ಕನ್ಯಾಕುಮಾರಿ ನಡುವಣ ಹಳಿಗಳಲ್ಲಿ ತಡೆರಹಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ದೇಶದ ಏಳನೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ (ಹೌರಾ ಮತ್ತು ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವುದು) ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು. 564 ಕಿ.ಮೀ ದೂರವನ್ನು 7.45 ಗಂಟೆಗಳಲ್ಲಿ ಕ್ರಮಿಸುವ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಈ ಮಾರ್ಗದ ಇತರ ರೈಲುಗಳಿಗೆ ಹೋಲಿಸಿದರೆ 3 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಬಾರ್ಸೋಯಿ, ಮಾಲ್ಡಾ ಮತ್ತು ಬೋಲ್ಪುರ್‌ನಲ್ಲಿ 3 ನಿಲುಗಡೆಗಳನ್ನು ಹೊಂದಿರುತ್ತದೆ. ಈ ಅತ್ಯಾಧುನಿಕ ರೈಲಿನಲ್ಲಿ ಚಾಲಕರಿಗೆ 2 ಸೇರಿದಂತೆ 16 ಬೋಗಿಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Sat, 31 December 22

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?