Nipah virus ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ನಿಂದ ಬಾಲಕ ಸಾವು
Kerala ನಿಫಾ ಜೂನಾಟಿಕ್ ವೈರಸ್ (zoonotic virus), ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ನಿಫಾ ವೈರಸ್ ಬಾವಲಿಗಳ ಜೊಲ್ಲಿನಿಂದ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಹರಡುತ್ತದೆ.
ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ನಿಂದ (Nipah virus) 12 ವರ್ಷದ ಬಾಲಕ ಭಾನುವಾರ ಮುಂಜಾನೆ ಮೃತಪಟ್ಟಿದ್ದಾನೆ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಶನಿವಾರ ಆತನ ಸ್ಥಿತಿ ಹದಗೆಟ್ಟಿತ್ತು. ಭಾನುವಾರ ಬೆಳಿಗ್ಗೆ 5 ಗಂಟೆಗೆ ಬಾಲಕ ಮೃತಪಟ್ಟಿದ್ದಾನೆ. ಸೆಪ್ಟೆಂಬರ್ 3 ರಂದು ಬಾಲಕನಿಗೆ ನಿಫಾ ವೈರಸ್ ಇರುವುದಾಗಿ ಶಂಕೆ ವ್ಯಕ್ತವಾಗಿತ್ತು. ಆತನಲ್ಲಿ ಎನ್ಸೆಫಾಲಿಟಿಸ್ ಮತ್ತು ಮಯೋಕಾರ್ಡಿಟಿಸ್ ಲಕ್ಷಣಗಳು ಕಾಣಿಸಿತ್ತು. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಕೇರಳದ ಸ್ಯಾಂಪಲ್ ಪರೀಕ್ಷಿಸಿ ಪಾಸಿಟಿವ್ ಎಂದು ದೃಢಡಿಸಿದೆ.
12 ವರ್ಷದ ಬಾಲಕನನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ವೈದ್ಯಕೀಯ ಕಾಲೇಜಿಗೆ ಕರೆತಂದು ಕೊನೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೋಯಿಕ್ಕೋಡ್‌ಗೆ ಭೇಟಿ ನೀಡಲಿದ್ದಾರೆ ವೀಣಾ ಚಾರ್ಜ್ ನಿನ್ನೆ ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಿಲ್ಲೆಯ ಸಚಿವರೊಂದಿಗೆ ಸಭೆ ನಡೆಸಿದ್ದೇವೆ. ಪರಿಸ್ಥಿತಿಯನ್ನು ನಿಭಾಯಿಸಲು ತಂಡಗಳನ್ನು ರಚಿಸಲು ನಾವು ನಿರ್ಧರಿಸಿದ್ದೇವೆ. ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಇತರ ಕ್ರಮಗಳನ್ನು ಈಗಾಗಲೇ ಆರಂಭಿಸಲಾಗಿದೆ. ನಾವು ವಿಶೇಷ ಅಧಿಕಾರಿಗಳನ್ನು ನೇಮಿಸಿದ್ದೇವೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಆರೋಗ್ಯ ಸಚಿವರು ಕೋಯಿಕ್ಕೋಡ್‌ಗೆ ಭೇಟಿ ನೀಡಲಿದ್ದಾರೆ. ಆಕೆಯೊಂದಿಗೆ ಕೇರಳ ಸಚಿವ ಪಿಎ ಮೊಹಮ್ಮದ್ ರಿಯಾಸ್ ಇರಲಿದ್ದಾರೆ.
ಈಗಿನಂತೆ, ಭಯಪಡುವ ಅಗತ್ಯವಿಲ್ಲ, ಆದರೆ ನಾವು ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಕುಟುಂಬದಿಂದ ಅಥವಾ ಇತರ ಸಂಪರ್ಕಗಳಿಂದ ಯಾರಿಗೂ ಯಾವುದೇ ರೋಗಲಕ್ಷಣಗಳಿಲ್ಲ ಎಂದು ವೀಣಾ ಜಾರ್ಜ್ ಹೇಳಿದರು.
ಕೇರಳಕ್ಕೆ ಕೇಂದ್ರ ತಂಡ ಕೇಂದ್ರ ಸರ್ಕಾರವು ತಾಂತ್ರಿಕ ಬೆಂಬಲವನ್ನು ಒದಗಿಸಲು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC) ತಂಡವನ್ನು ಕೇರಳಕ್ಕೆ ರವಾನಿಸಿದೆ. ತಂಡವು ಭಾನುವಾರ ತಲುಪಲಿದೆ.
ಕೆಳಗಿನ ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೇಂದ್ರವು ಸಲಹೆ ಮಾಡಿದೆ.
1. ಕುಟುಂಬಗಳು, ಹಳ್ಳಿ ಮತ್ತು ಇದೇ ರೀತಿಯ ಪ್ರದೇಶಗಳಲ್ಲಿ (ವಿಶೇಷವಾಗಿ ಮಲಪ್ಪುರಂ) ಸಕ್ರಿಯ ಪ್ರಕರಣ ಹುಡುಕಾಟ
2. ಕಳೆದ 12 ದಿನಗಳ ಸಕ್ರಿಯ ಸಂಪರ್ಕ ಪತ್ತೆಹಚ್ಚುವಿಕೆ
3. ಸಂಪರ್ಕಗಳ ಕಟ್ಟುನಿಟ್ಟಿನ ಸಂಪರ್ಕತಡೆಯನ್ನು ಮತ್ತು ಯಾವುದೇ ಶಂಕಿತರನ್ನು ಪ್ರತ್ಯೇಕಿಸುವುದು
4. ಪ್ರಯೋಗಾಲಯ ಪರೀಕ್ಷೆಗಾಗಿ ಮಾದರಿಗಳ ಸಂಗ್ರಹ ಮತ್ತು ಸಾಗಣೆ
ಏನಿದು ನಿಫಾ ವೈರಸ್ ನಿಫಾ ಜೂನಾಟಿಕ್ ವೈರಸ್ (zoonotic virus), ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ನಿಫಾ ವೈರಸ್ ಬಾವಲಿಗಳ ಜೊಲ್ಲಿನಿಂದ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಹರಡುತ್ತದೆ. ಸಾಮಾನ್ಯವಾಗಿ ಇದು ಹಂದಿಗಳು, ನಾಯಿಗಳು, ಕುದುರೆಗಳಂತಹ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. ಮಾನವರಲ್ಲಿ ಹರಡಿದರೆ, ನಿಫಾ ವೈರಸ್ ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು ಅದು ಸಾವಿಗೆ ಕಾರಣವಾಗಬಹುದು.
ಇದನ್ನೂ ಓದಿ: ಪ್ರಧಾನಿ ಮೋದಿಯವರ ನಿವಾಸದ ಅಂಗಳದಲ್ಲಿ ಬೆಳೆಯಲಿದೆ ಕೇರಳದ ಬಾಲಕಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ
ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪನ; 3.9ರಷ್ಟು ತೀವ್ರತೆ ದಾಖಲು, ಭಯದಲ್ಲಿ ಜನ
(Nipah virus 12-year-old boy died of in Kozhikode district of Kerala)
Published On - 10:54 am, Sun, 5 September 21