ಪ್ರಧಾನಿ ಮೋದಿಯವರ ನಿವಾಸದ ಅಂಗಳದಲ್ಲಿ ಬೆಳೆಯಲಿದೆ ಕೇರಳದ ಬಾಲಕಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ

ಈ ವಾರದ ಆರಂಭದಲ್ಲಿ ಪತ್ತನಾಪುರಂ ಗಾಂಧಿ ಭವನದಲ್ಲಿ ಸಂಸದರ ಭೇಟಿಯ ವೇಳೆ ವಿದ್ಯಾರ್ಥಿಯು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಲು ಸಸಿಯನ್ನು ಕೊಟ್ಟಿದ್ದರು. "ಪ್ರಧಾನಿ ಅದನ್ನು ಪೂರ್ಣ ಹೃದಯದಿಂದ ಸ್ವೀಕರಿಸಿದರು ಮತ್ತು ಅದನ್ನು ಅವರ ಅಧಿಕೃತ ನಿವಾಸದಲ್ಲಿ ನೆಡುವ ಭರವಸೆ ನೀಡಿದರು" ಎಂದು ಸುರೇಶ್ ಗೋಪಿ ಫೇಸ್​​ಬುಕ್​​ನಲ್ಲಿ ಬರೆದಿದ್ದಾರೆ.

ಪ್ರಧಾನಿ ಮೋದಿಯವರ ನಿವಾಸದ ಅಂಗಳದಲ್ಲಿ ಬೆಳೆಯಲಿದೆ ಕೇರಳದ ಬಾಲಕಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ
ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡುತ್ತಿರುವ ಸಂಸದ ಸುರೇಶ್ ಗೋಪಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 03, 2021 | 6:09 PM

ತಿರುವನಂತಪುರಂ: ದೇಶಾದ್ಯಂತ ಸಾವಯವ ಕೃಷಿಯ ಸಂದೇಶವನ್ನು ಪ್ರಚಾರ ಮಾಡುವ ಕನಸಿನೊಂದಿಗೆ ತನ್ನ ಹಳ್ಳಿಯಲ್ಲಿರುವ ಕೇರಳದ ಹುಡುಗಿಯೊಬ್ಬಳಿಂದ ಪೋಷಿಸಲ್ಪಟ್ಟ  ಪೇರಳೆ ಸಸಿ ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸದ ಅಂಗಳದಲ್ಲಿ ಬೆಳೆಯಲಿದೆ.  ನಟ,ಬಿಜೆಪಿ ಸಂಸದರಾಗಿರುವ ಸುರೇಶ್ ಗೋಪಿ, 10 ನೇ ತರಗತಿ ವಿದ್ಯಾರ್ಥಿನಿ ಜಯಲಕ್ಷ್ಮಿ ಉಡುಗೊರೆಯಾಗಿ ನೀಡಿದ ಸಸಿಯನ್ನು ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿಯಾದಾಗ ನೀಡಿದರು. ಸುರೇಶ್ ಗೋಪಿ ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಯಲ್ಲಿ ಮೋದಿಯವರು ಉಡುಗೊರೆಯನ್ನು ಸ್ವೀಕರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.

“ಬಾಲಕಿಯೊಬ್ಬಳು ಪತ್ತನಂತಿಟ್ಟದ ಕುಳನಾಡ ಹಳ್ಳಿಯಲ್ಲಿ ಅಂಗಳದಲ್ಲಿ ಪೋಷಿಸಿಗ ಸಸಿ ಇದು. ಇದು ಭಾರತದ ಪ್ರಧಾನಿಯ ನಿವಾಸದಲ್ಲಿ ಅರಳಲು ಸಿದ್ಧವಾಗಿದೆ” ಎಂದು ಸುರೇಶ್ ಗೋಪಿ ಟ್ವೀಟ್ ಮಾಡಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯವರಾದ ಜಯಲಕ್ಷ್ಮಿ ಅವರು ತಮ್ಮ ಮನೆಯ ಅಂಗಳದಲ್ಲಿ ಸಾವಯವ ಕೃಷಿಯನ್ನು ಅಭಿವೃದ್ಧಿ ಪಡಿಸಲು ಮತ್ತು ನಿರ್ವಹಿಸಿದ ಅತ್ಯುತ್ತಮ ವಿದ್ಯಾರ್ಥಿಗೆ (ಮಹಿಳೆ) ರಾಜ್ಯ ಸರ್ಕಾರ ನೀಡುವ ‘ಕರ್ಷಕ ತಿಲಕಂ’ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ವಾರದ ಆರಂಭದಲ್ಲಿ ಪತ್ತನಾಪುರಂ ಗಾಂಧಿ ಭವನದಲ್ಲಿ ಸಂಸದರ ಭೇಟಿಯ ವೇಳೆ ವಿದ್ಯಾರ್ಥಿಯು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಲು ಸಸಿಯನ್ನು ಕೊಟ್ಟಿದ್ದರು. “ಪ್ರಧಾನಿ ಅದನ್ನು ಪೂರ್ಣ ಹೃದಯದಿಂದ ಸ್ವೀಕರಿಸಿದರು ಮತ್ತು ಅದನ್ನು ಅವರ ಅಧಿಕೃತ ನಿವಾಸದಲ್ಲಿ ನೆಡುವ ಭರವಸೆ ನೀಡಿದರು” ಎಂದು ಸುರೇಶ್ ಗೋಪಿ ಫೇಸ್​​ಬುಕ್​​ನಲ್ಲಿ ಬರೆದಿದ್ದಾರೆ.

ಈಗ ಪ್ರಧಾನಿಯವರ ಕೈಗೆ ತಲುಪಿದರೆ, ನಾಳೆ ಅವರು (ಪ್ರಧಾನ ಮಂತ್ರಿ) ಕುಳನಾಡಿನ ಪುಟ್ಟ ಹುಡುಗಿ ಕಳುಹಿಸಿದ ಸಸಿ ತನ್ನ ಅಧಿಕೃತ ಬಂಗಲೆಯ ಅಂಗಳದಲ್ಲಿ ಬೆಳೆಯುತ್ತಿದೆ ಎಂದು ಹೇಳಬಹುದು ಎಂದು ನಾವು ನಿರೀಕ್ಷಿಸಬಹುದು ಎಂದು ಗೋಪಿ ಹೇಳಿದರು.

“ಇದು ಒಂದು ಉತ್ತಮ ಸಂದೇಶ ಶುದ್ಧ ಪ್ರಜಾಪ್ರಭುತ್ವದ ಸಂದೇಶ” ಎಂದು ಅವರು ಹೇಳಿದರು. ಹರ್ಷಗೊಂಡ ಜಯಲಕ್ಷ್ಮಿ ನಂತರ ತನ್ನ ಉಡುಗೊರೆ ಪ್ರಧಾನಿಯನ್ನು ತಲುಪುತ್ತದೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ಸಂಸದರ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳಿಂದ ಅದನ್ನು ತಿಳಿದು ತುಂಬಾ ಸಂತೋಷವಾಯಿತು ಎಂದು ಹೇಳಿದ್ದಾಳೆ.

ಇದನ್ನೂ ಓದಿ: ನನ್ನ ಉತ್ತರಾಧಿಕಾರಿಯನ್ನು ಈಗ ನೇಮಕ ಮಾಡುತ್ತಿಲ್ಲ, ಆದರೆ ಅವರು ದಲಿತ ಸಮುದಾಯದವರೇ ಆಗಿರುತ್ತಾರೆ: ಮಾಯಾವತಿ

(guava sapling nurtured by a Keralite girl to grow in courtyard of official residence of PM Narendra Modi)