ನಿತೀಶ್ ಕುಮಾರ್ (Nitish Kumar) ಮತ್ತು ಲಾಲು ಯಾದವ್ (Lalu Yadav) ಅವರ 30 ವರ್ಷಗಳ ಆಡಳಿತದ ನಂತರವೂ ಬಿಹಾರದ ಬಗೆಗಿನ ವಾಸ್ತವ ಏನೆಂದರೆ ರಾಜ್ಯವು ದೇಶದಲ್ಲೇ ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯವಾಗಿ ಉಳಿದಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishor) ಶುಕ್ರವಾರ ಹೇಳಿದ್ದಾರೆ. ಶುಕ್ರವಾರ ಟ್ವೀಟ್ ಮಾಡಿದ ಪ್ರಶಾಂತ್ ಕಿಶೋರ್, “ನಿತೀಶ್ ಜಿ ಸರಿಯಾಗಿಯೇ ಹೇಳಿದ್ದಾರೆ. ಪ್ರಾಮುಖ್ಯತೆ ಸತ್ಯವನ್ನಾಧರಿಸಿರುತ್ತದೆ. ಸತ್ಯವೆಂದರೆ 30 ವರ್ಷಗಳ ಲಾಲು-ನಿತೀಶ್ ಆಳ್ವಿಕೆಯ ನಂತರವೂ, ಬಿಹಾರ ಇಂದು ದೇಶದ ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯವಾಗಿದೆ. ಬಿಹಾರವನ್ನು ಬದಲಾಯಿಸಲು ಹೊಸ ಚಿಂತನೆ ಮತ್ತು ಪ್ರಯತ್ನದ ಅಗತ್ಯವಿದೆ ಮತ್ತು ಅದು ಅಲ್ಲಿನ ಜನರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಕಿಶೋರ್ ಅವರ ಹೇಳಿಕೆಯು ಅವರ ಮತ್ತು ಬಿಹಾರ ಮುಖ್ಯಮಂತ್ರಿಯ ನಡುವಿನ ಇತ್ತೀಚಿನ ವಾಕ್ ಸಮರಕ್ಕೆ ಪ್ರತಿಕ್ರಿಯೆಯಾಗಿದೆ. ಪ್ರತಿಯೊಬ್ಬರ ಅಭಿಪ್ರಾಯ ಮುಖ್ಯವಲ್ಲ ಆದರೆ ಸತ್ಯ ಮುಖ್ಯ ಎಂದಿದ್ದರು ನಿತೀಶ್ ಕುಮಾರ್. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಇತ್ತೀಚೆಗೆ ಬಿಹಾರದ ರಾಜಕೀಯ ವಲಯಗಳಲ್ಲಿ ಸಂಚಲನ ಸೃಷ್ಟಿಸಿದ್ದು ಕಾಂಗ್ರೆಸ್ ಸೇರುವ ಪ್ರಸ್ತಾಪವನ್ನು ತಿರಸ್ಕರಿಸಿದರು. ಪೂರ್ವ ರಾಜ್ಯದಲ್ಲಿ ಬದಲಾವಣೆ ತರಲು ಹೊಸ ಚಿಂತನೆ ಮತ್ತು ಪ್ರಯತ್ನದ ಅಗತ್ಯವಿದೆ ಎಂದು ಅವರು ಹೇಳಿದ್ದರು.
नीतीश जी ने ठीक कहा – महत्व #सत्य का है और सत्य यह है कि 30 साल के लालू-नीतीश के राज के बाद भी बिहार आज देश का सबसे गरीब और पिछड़ा राज्य है।
ಇದನ್ನೂ ಓದಿबिहार को बदलने के लिए एक नयी सोंच और प्रयास की ज़रूरत हैं और यह सिर्फ़ वहाँ के लोगों के सामूहिक प्रयास से ही सम्भव है।
— Prashant Kishor (@PrashantKishor) May 6, 2022
ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಜವಾದ ಗುರುಗಳು ಜನರು” ಎಂದ ಪ್ರಶಾಂತ್ ಕಿಶೋರ್, ‘ಜನ್ ಸುರಾಜ್ -ಜನರಿಂದ ಉತ್ತಮ ಆಡಳಿತ’ ಕ್ಕೆ ಹೋಗಲು ಇದು ಸೂಕ್ತ ಸಮಯ ಎಂದಿದ್ದರು. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಹಾರ ಮುಖ್ಯಮಂತ್ರಿ, ರಾಜ್ಯದಲ್ಲಿ ಒಳ್ಳೆಯ ಕೆಲಸ ನಡೆದಿದೆಯೇ ಎಂಬುದನ್ನು ಎಲ್ಲರೂ ನೋಡಬೇಕು ಮತ್ತು ಸತ್ಯ ಮಾತ್ರ ಮುಖ್ಯ ಎಂದು ಹೇಳಿದ್ದಾರೆ.
ಒಂದು ದಿನದ ಹಿಂದೆ ಕಿಶೋರ್ ತನ್ನ ತವರು ರಾಜ್ಯ ಬಿಹಾರವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ‘ಜನ್ ಸುರಾಜ್’ ಎಂಬ ಹೆಸರಿನ ಸಮಾನ ಮನಸ್ಕ ಜನರ ವೇದಿಕೆಯನ್ನು ರಚಿಸಲು ಉದ್ದೇಶಿಸಿರುವುದಾಗಿ ಹೇಳಿದರು. ಅದೇ ವೇಳೆ ಅವರು ಹೊಸ ಪಕ್ಷವನ್ನು ರಚಿಸುವ ಊಹಾಪೋಹಗಳನ್ನು ತಳ್ಳಿಹಾಕಿದರು. ಆದರೆಲ್ಲಿ ಜನ್ ಸುರಾಜ್ ವೇದಿಕೆ ರಾಜಕೀಯವಾಗಿ ರೂಪಾಂತರಗೊಳ್ಳುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ.
ಅಕ್ಟೋಬರ್ 2 ಗಾಂಧಿ ಜಯಂತಿಯಂದು ಚಂಪಾರಣ್‌ನಲ್ಲಿರುವ ಗಾಂಧಿ ಆಶ್ರಮದಿಂದ 3,000 ಕಿಮೀ ‘ಪಾದಯಾತ್ರೆ’ (ಮೆರವಣಿಗೆ) ಪ್ರಾರಂಭಿಸುವ ಮೊದಲು ಬಿಹಾರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ಅವರು “ಸುಮಾರು 18,000 ಜನರೊಂದಿಗೆ” ಸಂಪರ್ಕದಲ್ಲಿದ್ದೇನೆ ಅವರನ್ನು “ವೈಯಕ್ತಿಕವಾಗಿ ಭೇಟಿಯಾಗಲು ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ