ಅವರು ನನ್ನ ಗಂಡನಿಗೆ 30-35 ಬಾರಿ ಹೊಡೆದರು, ಜನರಲ್ಲಿ ಸಹಾಯ ಬೇಡಿದರೂ ಯಾರೂ ಬರಲಿಲ್ಲ: ಹೈದರಾಬಾದ್ನಲ್ಲಿ ಹತ್ಯೆಯಾದ ನಾಗರಾಜು ಪತ್ನಿ ಸುಲ್ತಾನಾ
10 ರಿಂದ 15 ನಿಮಿಷಗಳಲ್ಲಿ ಅವರು ನನ್ನ ಗಂಡನಿಗೆ ರಾಡ್‌ನಿಂದ 30 ರಿಂದ 35 ಬಾರಿ ಹೊಡೆದರು, ಅವರು ನನ್ನ ಗಂಡನ ತಲೆಗೆ ಹೊಡೆದರು, ನಾನು ಅವನ ತಲೆಯನ್ನು ಮುಟ್ಟಿದಾಗ ತಲೆ ಬುರಡೆ ಒಡೆದು ಮೆದುಳು ನನ್ನ ಕೈಗೆ ಬಂತು.
ಹೈದರಾಬಾದ್: ಹೈದರಾಬಾದ್‌ನ (Hyderabad) ಜನನಿಬಿಡ ರಸ್ತೆಯೊಂದರಲ್ಲಿ ದಲಿತ ಯುವಕ ಬಿ ನಾಗರಾಜುವನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದು, ಸಹಾಯಕ್ಕಾಗಿ ಬೇಡಿಕೊಂಡರೂ ಅಲ್ಲಿ ನೆರೆದಿದ್ದ ಜನರಿಗೆ ನನ್ನ ಪತಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ ಸೈಯದ್ ಅಶ್ರಿನ್ ಸುಲ್ತಾನಾ(Syed Ashrin Sulthana). ನನ್ನ ಪತಿಯನ್ನು ಕೊಂದಿದ್ದು ನನ್ನ ಸಹೋದರ ಮತ್ತು ಅವನ ಸ್ನೇಹಿತರು. ಅವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ ಸುಲ್ತಾನಾ. ಎರಡು ದಿನಗಳ ಹಿಂದೆ ಪತಿ ಬಿ ನಾಗರಾಜು (B Nagaraju) ನಿಧನರಾದ ನಂತರ ನವವಿವಾಹಿತೆ ಸುಲ್ತಾನಾ ಅವರ ಗಂಡನ ಮನೆಗೆ ಇದೇ ಮೊದಲ ಬಾರಿ ಬಂದಿದ್ದಾಳೆ. ಅವನ ಬಾಲ್ಯದ ಮನೆಯಲ್ಲಿ ಅವನ ನೆನಪುಗಳೊಂದಿಗೆ ಬದುಕುತ್ತೇನೆ ಎಂದು ಸುಲ್ತಾನಾ ಹೇಳಿದ್ದಾಳೆ. ಸುಲ್ತಾನಾಳ ಸಹೋದರ ಮಾರಣಾಂತಿಕ ಹಲ್ಲೆ ನಡೆಸಿದ್ದು, ನಾಗರಾಜು ಸ್ಥಳದಲ್ಲೇ ಮೃತಪಟ್ಟಿದ್ದರು. ದುಃಖದಿಂದ ಕಣ್ಣೀರು ಹಾಕುತ್ತಾ ಎನ್ಡಿಟಿವಿ ಜತೆ ಮಾತನಾಡಿದ 21ರ ಹರೆಯದ ಸುಲ್ತಾನಾ ಶ್ರೀಕೃಷ್ಣನ ವೇಷದಲ್ಲಿರುವ ನಾಗರಾಜುನ ಫೋಟೊವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. “ನಾನು ಮತ್ತು ನನ್ನ ಪತಿ ಬೈಕಿನಲ್ಲಿ ಹೋಗುತ್ತಿದ್ದೆವು, ರಸ್ತೆ ದಾಟಲು ಸ್ವಲ್ಪ ವೇಗವನ್ನು ಕಡಿಮೆ ಮಾಡಿದನು, ಇದ್ದಕ್ಕಿದ್ದಂತೆ ಎರಡು ಬೈಕುಗಳು ಬಂದವು. ಅದರಲ್ಲಿ ನನ್ನ ಸಹೋದರನೂ ಒಬ್ಬ ಎಂದು ನನಗೆ ತಿಳಿದಿರಲಿಲ್ಲ, ಅವರು ನನ್ನ ಗಂಡನನ್ನು ತಳ್ಳಿದರು, ನಾಗರಾಜು ಕೆಳಗೆ ಬಿದ್ದ. ಅವರು ಹೊಡೆಯಲು ಪ್ರಾರಂಭಿಸಿದರು. ನಾನು ಅವನನ್ನು ರಕ್ಷಿಸಲು ಪ್ರಯತ್ನಿಸಿದಾಗ, ನನ್ನ ಸಹೋದರನ ಸ್ನೇಹಿತರು ನನ್ನನ್ನು ತಳ್ಳಿದರು, ನಾನು ಸಹಾಯಕ್ಕಾಗಿ ಮನವಿ ಮಾಡಿದೆ. ಆದರೆ ಜನರು ವಿಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡು ನಿಂತರು.
ಕೆಲವೇ ಕ್ಷಣಗಳಲ್ಲಿ ಎಲ್ಲವೂ ಮುಗಿದುಹೋಯಿತು. ಆದರೆ ಜನರು ಮಧ್ಯಪ್ರವೇಶಿಸಲು ಮತ್ತು ದಾಳಿಯನ್ನು ನಿಲ್ಲಿಸಲು ಸಾಕಷ್ಟು ಸಮಯವಿದೆ ಎಂದು ಭಾವಿಸಿದೆ. ಆದರೆ ಸಹಾಯ ಕೇಳುವ ಮೂಲಕ ಅಮೂಲ್ಯವಾದ ಸೆಕೆಂಡುಗಳನ್ನು ವ್ಯರ್ಥ ಮಾಡಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ ಸುಲ್ತಾನಾ.
“10 ರಿಂದ 15 ನಿಮಿಷಗಳಲ್ಲಿ ಅವರು ನನ್ನ ಗಂಡನಿಗೆ ರಾಡ್‌ನಿಂದ 30 ರಿಂದ 35 ಬಾರಿ ಹೊಡೆದರು, ಅವರು ನನ್ನ ಗಂಡನ ತಲೆಗೆ ಹೊಡೆದರು, ನಾನು ಅವನ ತಲೆಯನ್ನು ಮುಟ್ಟಿದಾಗ ತಲೆ ಬುರಡೆ ಒಡೆದು ಮೆದುಳು ನನ್ನ ಕೈಗೆ ಬಂತು. ನಾನು ಸಮಾಜವನ್ನು ನಂಬಿ ಜನರ ಸಹಾಯ ಕೇಳುತ್ತಾ ಸಮಯ ಹಾಳು ಮಾಡುತ್ತಿದ್ದೆ. ಆ ಸಮಯವನ್ನು ನನ್ನ ಪತಿಗೆ ಏನಾದರೂ ಸಹಾಯ ಮಾಡಬಹುದಿತ್ತು. ನನ್ನ ಅಣ್ಣನೇ ಕೊಂದಿದ್ದು ಎಂದು ನನ್ನ ಪತಿಗೂ ತಿಳಿದಿರಲಿಲ್ಲ. ಇಪ್ಪತ್ತು ಜನರಿಗೆ ನಾಲ್ಕು ಜನರನ್ನು ತಡೆಯಬಹುದಿತ್ತು ಎಂದು ಸುಲ್ತಾನಾ ಹೇಳಿದ್ದಾರೆ.
25 ವರ್ಷ ವಯಸ್ಸಿನ ಕಾರು ಮಾರಾಟಗಾರ ನಾಗರಾಜು ಮತ್ತು ಸುಲ್ತಾನಾ ಜನವರಿ 31 ರಂದು ವಿವಾಹವಾದರು. ಅನ್ಯ ಧರ್ಮದವನನ್ನು ಮದುವೆಯಾಗುತ್ತಿರುವುದಕ್ಕೆ ಅವರ ಕುಟುಂಬದ ವಿರೋಧವಿತ್ತು. ನಾವಿಬ್ಬರೂ ಶಾಲೆಯಿಂದಲೇ ಪರಿಚಿತರಾಗಿದ್ದು,ಪರಸ್ಪರ ಪ್ರೀತಿಸುತ್ತಿದ್ದೆವು. ನನ್ನ ಮನೆಯವರಿಂದ ಯಾವಾಗಲೂ ಬೆದರಿಕೆ ಇತ್ತು, ಸಮಸ್ಯೆ ಇದೆ ಎಂದು ನಾನು ರಾಜುಗೆ ಬೇರೆ ಮದುವೆಯಾಗಲು ಹೇಳಿದ್ದೆ, ನಾನು ಅವನ ಮನವೊಲಿಸಲು ಎರಡು ತಿಂಗಳು ಪ್ರಯತ್ನಿಸಿದೆ, ಆದರೆ ಅವನು ನಾವು ಒಟ್ಟಿಗೆ ಬದುಕುತ್ತೇವೆ ಮತ್ತು ಒಟ್ಟಿಗೆ ಸಾಯುತ್ತೇವೆ ಎಂದು ಹೇಳಿದ. ಮದುವೆಯ ನಂತರ ನಾವು ದೂರ ಹೋಗೋಣ ಎಂದು ಹೇಳಿದ್ದೆ. ನಾನು ನಿನಗಾಗಿ ಸಾಯಲು ಸಿದ್ಧನಿದ್ದೇನೆ ಎಂದಿದ್ದ ಅವ. ಇಂದು ನನ್ನ ಪತಿ ಸತ್ತಿದ್ದಾರೆ, ನನ್ನಿಂದಾಗಿ. ನಾನು ಅವನನ್ನು ಬೇರೆ ಮದುವೆಯಾಗಲು ಬಿಟ್ಟಿದ್ದರೆ, ಅವನು ಬದುಕುತ್ತಿದ್ದ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ ಸುಲ್ತಾನಾ. “ರಾಜುವಿನ ಬಾಲ್ಯದ ಮನೆಯಲ್ಲಿ ಇಲ್ಲಿರುವಾಗ, ನಾನು ಅವನೊಂದಿಗೆ ಇದ್ದೇನೆ ಎಂದು ಕಣ್ಣೀರಾಗುತ್ತಾರೆ ಸುಲ್ತಾನಾ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 10:45 pm, Fri, 6 May 22