‘ನಿರುದ್ಯೋಗ ಭತ್ಯೆ’ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಘೋಷಣೆ

|

Updated on: Jun 14, 2024 | 9:58 PM

ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ರಾಜ್ಯದಾದ್ಯಂತ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡಲು ನಿರ್ಧರಿಸಿದೆ. ಈ ನಿರ್ಧಾರವು ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ನಿರುದ್ಯೋಗ ಭತ್ಯೆ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಘೋಷಣೆ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್
Follow us on

ಪಾಟ್ನಾ: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ನೇತೃತ್ವದ ಜೆಡಿಯು-ಬಿಜೆಪಿ ಸಮ್ಮಿಶ್ರ ಸರ್ಕಾರ ರಾಜ್ಯದ ಯುವಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಹಾರ ಸರ್ಕಾರವು ರಾಜ್ಯದಾದ್ಯಂತ ನಿರುದ್ಯೋಗಿ ಯುವಕರಿಗೆ “ನಿರುದ್ಯೋಗ ಭತ್ಯೆ”ಯನ್ನು ಪರಿಚಯಿಸಲು ನಿರ್ಧರಿಸಲಾಯಿತು. ನಿತೀಶ್ ಕುಮಾರ್ ಅವರ ನೇತೃತ್ವದ ಕ್ಯಾಬಿನೆಟ್ MNREGA ಅಡಿಯಲ್ಲಿ ನಿಬಂಧನೆಗಳನ್ನು ಒಳಗೊಂಡಿರುವ ಬಿಹಾರ ನಿರುದ್ಯೋಗ ಭತ್ಯೆ ನಿಯಮಗಳನ್ನು ಅನುಮೋದಿಸಿತು.

ನಿರುದ್ಯೋಗ ಭತ್ಯೆಯ ಪ್ರಕ್ರಿಯೆ ಹೇಗಿರುತ್ತದೆ?:

ಹೊಸದಾಗಿ ಅನುಮೋದಿಸಲಾದ ನಿಯಮಗಳ ಪ್ರಕಾರ, ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ ನಂತರ ನಿರುದ್ಯೋಗಿಗಳಾಗಿ ಉಳಿಯುವ ಅರ್ಹ ವ್ಯಕ್ತಿಗಳು ತಮ್ಮ ಅರ್ಜಿಯ 15 ದಿನಗಳಲ್ಲಿ ಉದ್ಯೋಗವನ್ನು ಪಡೆದುಕೊಳ್ಳದಿದ್ದರೆ ಬಿಹಾರ ಸರ್ಕಾರದಿಂದ ದೈನಂದಿನ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಾರೆ. ಈ ನಿರುದ್ಯೋಗ ಭತ್ಯೆಯು ತಮ್ಮ ಅರ್ಜಿಯ ದಿನಾಂಕದಿಂದ ಪ್ರಾರಂಭಿಸಿ, ನಿರ್ದಿಷ್ಟ ಮಿತಿಯೊಳಗೆ ಹಣಕಾಸಿನ ನೆರವು ನೀಡುವ ಮೂಲಕ ಸಕ್ರಿಯವಾಗಿ ಉದ್ಯೋಗವನ್ನು ಹುಡುಕುವ ವ್ಯಕ್ತಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಬಿಜೆಪಿ ಜತೆ ನಿತೀಶ್ ಕುಮಾರ್ ಮೈತ್ರಿ ಸರಿ ಇಲ್ಲ, ಚುನಾವಣೆ ನಂತರ ಮಹತ್ವವಾದುದು ಸಂಭವಿಸುತ್ತದೆ: ತೇಜಸ್ವಿ ಯಾದವ್

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಹಾರ ಕ್ಯಾಬಿನೆಟ್ 25 ಕಾರ್ಯಸೂಚಿಗಳನ್ನು ಅನುಮೋದಿಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟದ ಪ್ರಮುಖ ಸಭೆಯನ್ನು ಕರೆಯಲಾಗಿದೆ. ಈ ಅಧಿವೇಶನದಲ್ಲಿ ಒಟ್ಟು 25 ಕಾರ್ಯಸೂಚಿಗಳನ್ನು ಚರ್ಚಿಸಲಾಯಿತು. ನಂತರ ಸಚಿವ ಸಂಪುಟವು ಅದನ್ನು ಅನುಮೋದಿಸಿತು.

ಇದನ್ನೂ ಓದಿ: ರಾಜ್ಯಗಳಿಗೆ 1.39 ಲಕ್ಷ ಕೋಟಿ ರೂ ತೆರಿಗೆ ಹಂಚಿದ ಕೇಂದ್ರ; ಬಿಹಾರಕ್ಕೆ ಬಂಪರ್; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು? ಇಲ್ಲಿದೆ ರಾಜ್ಯವಾರು ಪಟ್ಟಿ

ಬಿಹಾರದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ ಎಂಬುದು ಗಮನಾರ್ಹ ಸಂಗತಿ. ಈ ಹಿನ್ನೆಲೆಯಲ್ಲಿ ಬಿಹಾರದ ಯುವಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಈ ನಿರ್ಧಾರ ಕಾರ್ಯತಂತ್ರದ ನಡೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ