Republic Day 2022: ಗಣರಾಜ್ಯೋತ್ಸವಕ್ಕೆ ಈ ವರ್ಷವೂ ಇಲ್ಲ ವಿದೇಶಿ ಮುಖ್ಯ ಅತಿಥಿಗಳು; ಲಸಿಕೆ ಎರಡೂ ಡೋಸ್ ಪಡೆದವರಿಗಷ್ಟೇ ಅವಕಾಶ

Republic Day 2022: ಗಣರಾಜ್ಯೋತ್ಸವಕ್ಕೆ ಈ ವರ್ಷವೂ ಇಲ್ಲ ವಿದೇಶಿ ಮುಖ್ಯ ಅತಿಥಿಗಳು; ಲಸಿಕೆ ಎರಡೂ ಡೋಸ್ ಪಡೆದವರಿಗಷ್ಟೇ ಅವಕಾಶ
ಸಾಂಕೇತಿಕ ಚಿತ್ರ

ಕೊವಿಡ್​ 19 ನಿರ್ಬಂಧದಿಂದಾಗಿ ರಿಪಬ್ಲಿಕ್​ ಡೇಗೆ ಕಡಿಮೆ ಜನರಿಗೆ ಆಹ್ವಾನ ನೀಡಲಾಗುವುದು. ಕಳೆದ ವರ್ಷ ಸುಮಾರು 25 ಸಾವಿರ ಜನರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ನಾವು ಈ ಬಾರಿ 5000-8000 ಜನರ ಮಿತಿಯನ್ನು ಎದುರು ನೋಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

TV9kannada Web Team

| Edited By: Lakshmi Hegde

Jan 18, 2022 | 4:59 PM

ಭಾರತದಲ್ಲಿ ಸದ್ಯ ಕೊರೊನಾ ಕೇಸ್​ಗಳು ಸಿಕ್ಕಾಪಟೆ ಹೆಚ್ಚುತ್ತಿವೆ. ಇದು ಕೊರೊನಾ ಮೂರನೆ ಅಲೆ ಎಂದೇ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಈ ಬಾರಿಯೂ ಸಹ ಗಣರಾಜ್ಯೋತ್ಸವ ಆಚರಣೆಗೆ ವಿದೇಶಗ ಅತಿಥಿಯನ್ನು ಆಹ್ವಾನಿಸದೆ ಇರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಸಾಮಾನ್ಯವಾಗಿ ಗಣರಾಜ್ಯೋತ್ಸವ ಪರೇಡ್ (Republic Day Parade 2022)​ಗೆ ಮಧ್ಯ ಏಷ್ಯಾದ ಯಾವುದಾದರೂ ದೇಶದ ಅತಿಥಿಗಳನ್ನು ಆಹ್ವಾನಿಸುವ ಸಂಪ್ರದಾಯವಿತ್ತು. ಆದರೆ ಕಳೆದ ವರ್ಷ ಕೂಡ ಕೊರೊನಾ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಪರೇಡ್​ಗೆ ವಿದೇಶದ ಅತಿಥಿಗಳು ಇರಲಿಲ್ಲ. ಈ ಬಾರಿಯೂ ಕೂಡ ಯಾರೂ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಅಂದಹಾಗೆ ಗಣರಾಜ್ಯೋತ್ಸವದಂದು ಕೆಂಪುಕೋಟೆಯ ಮೇಲೆ ಪ್ರಧಾನಮಂತ್ರಿ ತ್ರಿವರ್ಣ ಧ್ವಜಾರೋಹಣ ಮಾಡುತ್ತಾರೆ. ಅದಾದ ಬಳಿಕ ಭಾಷಣ, ಪರೇಡ್​ಗಳು, ಸೇನಾ ಕೌಶಲ ಪ್ರದರ್ಶನಗಳಿರುತ್ತವೆ. ಈ ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರದಿಂದ ಹಲವರಿಗೆ ಆಹ್ವಾನ ಹೋಗುತ್ತದೆ. ಹಾಗೇ, ಪ್ರಸಕ್ತ ಬಾರಿ, ಆಯ್ದ ಕಟ್ಟಡ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು, ಕೊವಿಡ್​ 19 ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು, ಆಟೋ ರಿಕ್ಷಾ ಚಾಲಕರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗುವುದು. ಸಮಾಜದ ಎಲ್ಲ ವರ್ಗದವರಿಗೂ ರಿಪಬ್ಲಿಕ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಆಹ್ವಾನಿತರು ಎರಡೂ ಡೋಸ್ ಕೊವಿಡ್​ 19 ಲಸಿಕೆ ಪಡೆದಿದ್ದರೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ವರ್ಷ ರಾಜಪಥದಲ್ಲಿ ಸುಮಾರು 600 ಯುವಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಕೇಂದ್ರ ರಕ್ಷಣಾ ಇಲಾಖೆ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ದೇಶಾದ್ಯಂತ ವಂದೇ ಭಾರತಂ ಹೆಸರಿನಡಿ ನಡೆಸಿದ ಸ್ಪರ್ಧೆಯ ಮೂಲಕ ಇವರನ್ನೆಲ್ಲ ಆಯ್ಕೆ ಮಾಡಲಾಗಿದೆ. ದೇಶಾದ್ಯಂತ ಪ್ರತಿಭಾವಂತ ನೃತ್ಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿ ಐಐಟಿಯ ನವೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ 1000 ಡ್ರೋನ್​ಗಳ ಪ್ರದರ್ಶನ ನಡೆಯಲಿದೆ. ಚೀನಾ, ರಷ್ಯಾ, ಯುಕೆ ದೇಶಗಳ ಬಳಿಕ ಡ್ರೋನ್ ಪ್ರದರ್ಶನ ನೀಡುವ ನಾಲ್ಕನೇ ದೇಶ ಭಾರತ ಆಗಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದ್ದಾಗಿ ಟೈಮ್ಸ್ ನೌ ವರದಿ ಮಾಡಿದೆ. ಅಷ್ಟೇ ಅಲ್ಲ, ಈ ಬಾರಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಯಾರಿಗೆಲ್ಲ ಆಹ್ವಾನ ಪತ್ರಿಕೆ ಬರುತ್ತದೆಯೋ, ಆ ಪತ್ರಿಕೆಯೊಂದಿಗೆ ಔಷಧಿ ಸಸ್ಯಗಳ ಬೀಜವೂ ಇರಲಿದೆ. ಅವುಗಳನ್ನು ಸಮಾರಂಭದ ಬಳಿಕ ಉದ್ಯಾನ ಅಥವಾ ಪಾಟ್​ನಲ್ಲಿ ಬಿತ್ತಬಹುದಾಗಿದೆ.

ಕೊವಿಡ್​ 19 ನಿರ್ಬಂಧದಿಂದಾಗಿ ರಿಪಬ್ಲಿಕ್​ ಡೇಗೆ ಕಡಿಮೆ ಜನರಿಗೆ ಆಹ್ವಾನ ನೀಡಲಾಗುವುದು. ಕಳೆದ ವರ್ಷ ಸುಮಾರು 25 ಸಾವಿರ ಜನರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ನಾವು ಈ ಬಾರಿ 5000-8000 ಜನರ ಮಿತಿಯನ್ನು ಎದುರು ನೋಡುತ್ತಿದ್ದೇವೆ. ಹಾಗಂತ ಇನ್ನೂ ಭಾಗಿಯಾಗಬಹುದಾದ ಜನರ ಸಂಖ್ಯೆಗೆ ಮಿತಿ ಹೇರಿಲ್ಲ ಎಂದು ಕೇಂದ್ರ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾಗಿ ವರದಿಯಾಗಿದೆ. ಕೊವಿಡ್ 19 ಕಾಲಿಡುವುದಕ್ಕೂ ಮೊದಲು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಏನಿಲ್ಲವೆಂದರೂ 1.5 ಲಕ್ಷ ಜನರು ಸೇರುತ್ತಿದ್ದರು. ಅದನ್ನು ಕಳೆದ ವರ್ಷ 25 ವರ್ಷಕ್ಕೆ ಇಳಿಸಲಾಗಿತ್ತು. ಪ್ರಸಕ್ತ ವರ್ಷ ಇನ್ನಷ್ಟು ಕಡಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ: ‘ಮಾಸ್ಕ್ ಹಾಕೋದು, ಬಿಡೋದು ನನ್ನ ವೈಯಕ್ತಿಕ ವಿಚಾರ’; ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಉಮೇಶ್ ಕತ್ತಿ

Follow us on

Related Stories

Most Read Stories

Click on your DTH Provider to Add TV9 Kannada