ವೈದ್ಯಕೀಯ ಕಾಲೇಜಿನ ನೀರಿನ ಟ್ಯಾಂಕ್​ನಲ್ಲಿತ್ತು ಶವ, ಅದೇ ನೀರು ಕುಡೀತಿದ್ರು ವಿದ್ಯಾರ್ಥಿಗಳು, ಗೊತ್ತಾಗಿದ್ಹೇಗೆ?

ಉತ್ತರ ಪ್ರದೇಶದ ಡಿಯೋರಿಯಾದ ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಐದನೇ ಮಹಡಿಯಲ್ಲಿರುವ ಕಾಂಕ್ರೀಟ್ ನೀರಿನ ಟ್ಯಾಂಕ್​ನಲ್ಲಿ ಯುವಕನ ಕೊಳೆತ ಶವ ಪತ್ತೆಯಾಗಿದೆ. ಯುವಕನನ್ನು ಕೊಲೆ ಮಾಡಿ ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದು, ಅದರ ಮೇಲೆ ಸ್ಲ್ಯಾಬ್ ಇರಿಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರ ಪ್ರಕಾರ, ಶವವು ಸುಮಾರು ಹತ್ತು ದಿನಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮತ್ತೊಂದು ದುರಾದೃಷ್ಟವೆಂದರೆ ಎಲ್ಲಾ ವಿದ್ಯಾರ್ಥಿಗಳು ಅದೇ ನೀರನ್ನು ಕುಡಿದಿದ್ದಾರೆ.

ವೈದ್ಯಕೀಯ ಕಾಲೇಜಿನ ನೀರಿನ ಟ್ಯಾಂಕ್​ನಲ್ಲಿತ್ತು ಶವ, ಅದೇ ನೀರು ಕುಡೀತಿದ್ರು ವಿದ್ಯಾರ್ಥಿಗಳು, ಗೊತ್ತಾಗಿದ್ಹೇಗೆ?
ಕಾಲೇಜು

Updated on: Oct 08, 2025 | 11:16 AM

ಡಿಯೋರಿಯಾ, ಅಕ್ಟೋಬರ್ 08: ಉತ್ತರ ಪ್ರದೇಶದ ಡಿಯೋರಿಯಾದ ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಐದನೇ ಮಹಡಿಯಲ್ಲಿರುವ ಕಾಂಕ್ರೀಟ್ ನೀರಿನ ಟ್ಯಾಂಕ್​ನಲ್ಲಿ ಯುವಕನ ಕೊಳೆತ ಶವ ಪತ್ತೆಯಾಗಿದೆ. ಯುವಕನನ್ನು ಕೊಲೆ(Murder) ಮಾಡಿ ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದು, ಅದರ ಮೇಲೆ ಸ್ಲ್ಯಾಬ್ ಇರಿಸಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರ ಪ್ರಕಾರ, ಶವವು ಸುಮಾರು ಹತ್ತು ದಿನಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮತ್ತೊಂದು ದುರಾದೃಷ್ಟವೆಂದರೆ ಎಲ್ಲಾ ವಿದ್ಯಾರ್ಥಿಗಳು ಅದೇ ನೀರನ್ನು ಕುಡಿದಿದ್ದಾರೆ.

ಈ ಘಟನೆಯ ನಂತರ, ವೈದ್ಯಕೀಯ ಕಾಲೇಜಿನಲ್ಲಿ ಭದ್ರತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ ಏಕೆಂದರೆ ಇಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ, ಆದರೂ ಇಲ್ಲಿ ಇಷ್ಟು ದೊಡ್ಡ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾದ ರೋಗಿಗಳ ಸಂಬಂಧಿಕರು ನೀರಿನಲ್ಲಿ ದುರ್ವಾಸನೆ ಬರುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತು.

ನಂತರ ಸ್ವಚ್ಛಗೊಳಿಸುವ ಸಿಬ್ಬಂದಿ ನೀರಿನ ಟ್ಯಾಂಕ್‌ಗೆ ಹತ್ತಿ ಅದನ್ನು ಸ್ವಚ್ಛಗೊಳಿಸಿ ಸ್ಲ್ಯಾಬ್ ಅನ್ನು ತೆಗೆದರು. ಒಳಗೆ ಮೃತ ದೇಹ ಕಂಡು ಆಘಾತಕ್ಕೊಳಗಾದರು. ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು, ನಂತರ ಕೊತ್ವಾಲಿ ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಆಗಮಿಸಿತು.

ಮತ್ತಷ್ಟು ಓದಿ: ಕಣ್ಣಿಗೆ ಖಾರದ ಪುಡಿ ಎರಚಿ ಮರ್ಡರ್​: ಬರ್ಬರ ಹತ್ಯೆ ಕಂಡು ಬೆಚ್ಚಿಬಿದ್ದ ಮೈಸೂರು

ನಗರ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರೆಡ್ಡಿ ಮತ್ತು ಮುಖ್ಯ ವೈದ್ಯಾಧಿಕಾರಿ ಡಾ. ಎಚ್.ಕೆ. ಮಿಶ್ರಾ ಸ್ಥಳದಲ್ಲೇ ಇದ್ದರು. ದೇಹವು ತುಂಬಾ ಊದಿಕೊಂಡಿದ್ದು, ದುರ್ವಾಸನೆ ಬರುತ್ತಿತ್ತು. ಅದನ್ನು ತೆಗೆಯುವುದು ಕಷ್ಟಕರವಾಗಿತ್ತು. ಹಲವಾರು ಗಂಟೆಗಳ ಹೋರಾಟದ ನಂತರ, ರಾತ್ರಿ 10 ಗಂಟೆಗೆ, ಅಗ್ನಿಶಾಮಕ ದಳದ ಸಿಬ್ಬಂದಿ ಬಹಳ ಕಷ್ಟಪಟ್ಟು ಕೊಳೆತ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು, ಆದರೆ ಶವವನ್ನು ಗುರುತಿಸಲಾಗಿಲ್ಲ.

ಮಹರ್ಷಿ ದಿಯೋರಹಾ ಬಾಬಾ ವೈದ್ಯಕೀಯ ಕಾಲೇಜಿನ ಐದನೇ ಮಹಡಿಯಲ್ಲಿ ಸಿಮೆಂಟ್ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಇದು ಮಹಿಳಾ ಮತ್ತು ಪುರುಷರ ವಾರ್ಡ್‌ಗಳಿಗೆ ಹಾಗೂ ಹೊರರೋಗಿ ವಿಭಾಗದ ಶೌಚಾಲಯಗಳಿಗೆ ನೀರು ಪೂರೈಸುತ್ತದೆ. ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಬರನ್ವಾಲ್ ಅವರನ್ನು ಮಂಗಳವಾರ ರಾತ್ರಿ ಕೆಲಸದಿಂದ ತೆಗೆದುಹಾಕಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us