ದೆಹಲಿ: 2022ನೇ ಸಾಲಿನ ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಲಿದ್ದು, ಲೋಕಸಭೆ ಸಚಿವಾಲಯ (Lok Sabha Secretariat) ಅಸಂಸದೀಯ ಪದಗಳ (Unparliamentary Words) ಪಟ್ಟಿ ಬಿಡುಗಡೆ ಮಾಡಿದೆ. ಆದಾಗ್ಯೂ ಈ ಪದಗಳ ಪಟ್ಟಿಗೆ ವಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದ್ದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಗುರುವಾರ ಸ್ಪಷ್ಟನೆ ನೀಡಿದೆ. ಸದನದಲ್ಲಿ ಯಾವುದೇ ಪದವನ್ನು ನಿಷೇಧಿಸಿಲ್ಲ. ಅವುಗಳು ಈ ಹಿಂದೆ ದಾಖಲೆಗಳಿಂದ ತೆಗೆದುಹಾಕಲಾದ ಪದಗಳ ಸಂಕಲನ ಎಂದು ಹೇಳಿದ್ದಾರೆ. ಈ ಹಿಂದೆಯೇ ಅಸಂಸದೀಯ ಪದಗಳ ಸಂಕಲನ ಮಾಡಿ ಪುಸ್ತಕ ಬಿಡುಗಡೆ ಮಾಡಲಾಗಿತ್ತು. ಪೇಪರ್ ವ್ಯರ್ಥ ಮಾಡುವುದರ ಬದಲು ಈ ಬಾರಿ ನಾವು ಅದನ್ನು ಅಂತರ್ಜಾಲದಲ್ಲಿ ಹಾಕಿದ್ದೇವೆ. ನಾವು ಸದನದಲ್ಲಿ ದಾಖಲೆಗಳಿಂದ ತೆಗೆದು ಹಾಕಿದ ಪದಗಳ ಪಟ್ಟಿಯನ್ನಷ್ಟೇ ನೀಡಿದ್ದೇವೆ ಎಂದು ಬಿರ್ಲಾ ಹೇಳಿದ್ದಾರೆ. ವಿರೋಧ ಪಕ್ಷಗಳು 1,100 ಪುಟದ ಡಿಕ್ಷನರಿ(ಅಸಂಸದೀಯ ಪದಗಳ ಸಂಕಲನ)ವನ್ನು ಓದಿವೆಯೇ? ಅವರು ಓದಿದ್ದರೆ ಈ ರೀತಿ ತಪ್ಪಾಗಿ ಅರ್ಥೈಸುತ್ತಿರಲಿಲ್ಲ. ಇಂಥವುಗಳನ್ನು 1954, 1986, 1992, 1999, 2004, 2009, 2010ರಲ್ಲಿ ಬಿಡುಗಡೆ ಮಾಡಲಾಗಿತ್ತು. 2010ರಿಂದ ಪ್ರತಿವರ್ಷ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ವಿಪಕ್ಷಗಳು ಇದನ್ನು ತೀವ್ರವಾಗಿ ಖಂಡಿಸಿದ್ದುಸ ಇದು ಸರ್ಕಾರವನ್ನು ಟೀಕಿಸುವ ಸಾಮರ್ಥ್ಯವನ್ನು ಇಲ್ಲದಾಗಿಸುತ್ತದೆ ಎಂದು ಹೇಳಿದೆ.
New Dictionary for New India. pic.twitter.com/SDiGWD4DfY
— Rahul Gandhi (@RahulGandhi) July 14, 2022
Session begins in a few days
GAG ORDER ISSUED ON MPs.
Now, we will not be allowed to use these basic words while delivering a speech in #Parliament : Ashamed. Abused. Betrayed. Corrupt. Hypocrisy. Incompetent
I will use all these words. Suspend me. Fighting for democracy https://t.co/ucBD0MIG16
— Derek O’Brien | ডেরেক ও’ব্রায়েন (@derekobrienmp) July 14, 2022
ಸಂಸತ್ನಲ್ಲಿ ಮುಂಗಾರು ಅಧಿವೇಶಕ್ಕಿಂತ ಮುನ್ನ ಬಿಡುಗಡೆ ಮಾಡಿದ ಅಸಂದೀಯ ಪದಗಳ ಪಟ್ಟಿಯಲ್ಲಿ ಜುಮ್ಲಜೀವಿ, ಬಾಲ್ ಬುದ್ಧಿ, ಕೊವಿಡ್ ಸ್ಪ್ರೆಡ್ಡರ್, ಸ್ನೂಪ್ಗೇಟ್, ಅರಾಜಕತಾವಾದಿ, ಶಕುನಿ, ಸರ್ವಾಧಿಕಾರಿ, ತಾನಶಾಹ್, ತಾನಶಾಹಿ, ಜೈಚಂದ್, ವಿನಾಶ್ ಪುರುಷ, ಖಾಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ದಿಂಡೋರಾ ಪೀಟ್ನಾ, ಬೆಹ್ರಿ ಸರ್ಕಾರ್ ಸೇರಿ ಹಲವು ಪದಗಳನ್ನ ಬಳಸುವಂತಿಲ್ಲ ಎಂದು ಹೇಳಿದೆ. ಇನ್ನು ಅಸಂಸದೀಯ ಎಂದು ಪಟ್ಟಿ ಮಾಡಿರುವ ಕೆಲವು ಇಂಗ್ಲಿಷ್ ಪದಗಳಲ್ಲಿ ಬ್ಲಡ್ಶೆಡ್, ಬ್ಲೆಡಿ, ಬಿಟ್ರೇಡ್, ಶೇಮ್ಡ್, ಅಬ್ಯುಸ್ಡ್, ಚೀಟೆಡ್, ಚಾಮ್ಚಾ, ಚಮಚ್ಗಿರಿ, ಚೇಲಾಸ್, ಭ್ರಷ್ಟ, ಕೋವಾರ್ಡ್, ಕ್ರಿಮಿನಲ್ ಮತ್ತು ಕ್ರೊಕೊಡೈಲ್ ಟಿಯರ್ಸ್ ಪದಗಳ ಮಾಡುವಂತಿಲ್ಲ.
Published On - 6:01 pm, Thu, 14 July 22