ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ ಮಾಡಲು ಗುಂಡಿ ಒತ್ತಿದ್ದಇಂಜಿನಿಯರ್ ಕಣ್ಣಲ್ಲಿ ಆನಂದಭಾಷ್ಪ

| Updated By: ರಶ್ಮಿ ಕಲ್ಲಕಟ್ಟ

Updated on: Aug 28, 2022 | 6:49 PM

Supertech twin towers demolition ಸುಪ್ರೀಂಕೋರ್ಟ್ ಆದೇಶದಂತೆ ಅಕ್ರಮ ಕಟ್ಟಡಗಳ ನೆಲಸಮವನ್ನು ನಡೆಸಿದ ಕಂಪನಿ ಎಡಿಫೈಸ್ ಇಂಜಿನಿಯರಿಂಗ್‌ನ ಅಧಿಕಾರಿ ದತ್ತಾ, ಅವಳಿ ಕಟ್ಟಡ ಕೆಡವಿದಾಗ ತಾನು ಮತ್ತು ತನ್ನ ತಂಡವು ಅವಳಿ ಅದರಿಂದ ಕೇವಲ 70 ಮೀಟರ್ ದೂರದಲ್ಲಿದ್ದೆವು ಎಂದು ಹೇಳಿದ್ದಾರೆ

ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ  ಮಾಡಲು ಗುಂಡಿ ಒತ್ತಿದ್ದಇಂಜಿನಿಯರ್ ಕಣ್ಣಲ್ಲಿ ಆನಂದಭಾಷ್ಪ
Follow us on

ಸೂಪರ್‌ಟೆಕ್ ಅವಳಿ ಕಟ್ಟಡಗಳ ನೆಲಸಮ (Supertech twin towers demolition) ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟನೆಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ (Noida) ಅಕ್ರಮ ಕಟ್ಟಡಗಳನ್ನು ಕೆಡವಲು  ಮಾಡಿದ ಅತಿದೊಡ್ಡ ನಿಯಂತ್ರಿತ ಸ್ಫೋಟವಾಗಿದೆ ಇದು  ಎಡಿಫೈಸ್ ಇಂಜಿನಿಯರಿಂಗ್ ಅಧಿಕಾರಿ ಚೇತನ್ ದತ್ತಾ ಅವರು3,700 ಕೆಜಿ ಸ್ಫೋಟಕಗಳನ್ನು ಬಳಸಿ ದೈತ್ಯ ಗೋಪುರಗಳನ್ನು ಕೆಡವಲು ಗುಂಡಿ ಒತ್ತಿದ್ದು, ಧ್ವಂಸ ಕಾರ್ಯಾಚರಣೆ ಶೇ100 ಯಶಸ್ವಿಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ದತ್ತ ಅವರು ಕೆಡವುವಿಕೆಯ ನಂತರ, ಸ್ಫೋಟದ ಜವಾಬ್ದಾರಿ ವಹಿಸಿದ ಇತರ ನಾಲ್ವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋಗಿದ್ದಾರೆ. ಪ್ರಸ್ತುತ ಕಾರ್ಯಾಚರಣೆ ಸುಗಮವಾಗಿ ನಡೆದ ಸಮಾಧಾನ ಮತ್ತು ಸಂತೋಷದಿಂದ ಅವರು  ಆನಂದಭಾಷ್ಪ ಸುರಿಸಿದ್ದಾರೆ. ಕೆಡವುವ ಕಾರ್ಯಾಚರಣೆ ಶೇ 100 ಯಶಸ್ವಿಯಾಗಿದೆ. ಇಡೀ ಕಟ್ಟಡವನ್ನು ಕೆಡವಲು 9-10 ಸೆಕೆಂಡುಗಳನ್ನು ತೆಗೆದುಕೊಂಡಿತು. ನನ್ನ ತಂಡದಲ್ಲಿ 10 ಜನರು, 7 ವಿದೇಶಿ ತಜ್ಞರು ಮತ್ತು ಎಡಿಫೈಸ್ ಇಂಜಿನಿಯರಿಂಗ್‌ನ 20-25 ಜನರು ಇದ್ದರು ಎಂದು ದತ್ತಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಧ್ವಂಸಗೊಳಿಸುವ ಎಚ್ಚರಿಕೆಯ ಸೈರನ್ ಬಾರಿಸಿದಾಗ ಅವರು ಮತ್ತು ಅವರ ತಂಡದ ಸದಸ್ಯರು ಪರಸ್ಪರ ಏನೂ ಮಾತನಾಡಲಿಲ್ಲ. ಗುಂಡಿಯನ್ನು ಒತ್ತಿದ ತಕ್ಷಣ ಕೆಳಗೆ ಕುಸಿಯುತ್ತಿರುವ ಅವಳಿ ಕಟ್ಟಡ ನೋಡಲು ನಾನು  ತಲೆ ಎತ್ತಿದೆ. ಎಲ್ಲವೂ ನೆಲಸಮವಾದಾಗ, ನಾನು ಮತ್ತು ನನ್ನ ತಂಡವು ಧೂಳು ಮತ್ತು ಹೊಗೆಯ ಮೋಡವು ನೆಲೆಗೊಳ್ಳಲು ಕಾಯಲಿಲ್ಲ. ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್‌ನ ಹತ್ತಿರದ ಹೌಸಿಂಗ್ ಸೊಸೈಟಿಗಳನ್ನು ಪರಿಶೀಲಿಸಲು ನಾವು ಆ ಸ್ಥಳಕ್ಕೆ ಧಾವಿಸಿದೆವು ಎಂದಿದ್ದಾರೆ ದತ್ತಾ.
ನೆಲಸಮ ಕಾರ್ಯಾಚರಣೆ ಯೋಜನೆಯು ನಿರೀಕ್ಷೆ ಮತ್ತು ಯೋಜನೆಯ ಪ್ರಕಾರ ನಡೆದಿದೆ. ಇದು100 ಪ್ರತಿಶತ ಯಶಸ್ವಿಯಾಗಿದೆ. ಹತ್ತಿರದ ಎತ್ತರದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ. ಎಟಿಎಸ್ ಗ್ರಾಮದ ಕಾಂಪೌಂಡ್ ಗೋಡೆಗೆ ಸಣ್ಣ ಬಿರುಕು ಬಿದ್ದಿದೆ. ಎಲ್ಲವೂ ಸುರಕ್ಷಿತವಾಗಿದೆ ಮತ್ತು ನಮ್ಮ ಯೋಜನೆಯಂತೆ ನಡೆದಿದೆ” ಎಂದು ದತ್ತಾ ಎಎನ್‌ಐಗೆ ತಿಳಿಸಿದರು.

ಇದನ್ನೂ ಓದಿ
Noida Supertech Twin Towers ನೆಲಸಮವಾಯ್ತು ನೋಯ್ಡಾದ ಅವಳಿ ಕಟ್ಟಡ, ವಿಡಿಯೊ ನೋಡಿ
Supertech Noida Twin Towers ನೋಯ್ಡಾದ ಸೂಪರ್​​ಟೆಕ್ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ಕ್ಷಣಗಣನೆ; ಕೆಡವಲು 9 ಸೆಕೆಂಡ್ ಸಾಕು
Noida Supertech: 9 ಸೆಕೆಂಡ್​ನಲ್ಲಿ ಧರೆಗುರುಳಲಿದೆ 337 ಅಡಿ ಎತ್ತರದ ಕಟ್ಟಡ, ಭಾರತದ ಬೃಹತ್ ಕಾರ್ಯಾಚರಣೆಯ ಅತಿಮುಖ್ಯ ಅಂಕಿಅಂಶಗಳಿವು


ಸುಪ್ರೀಂಕೋರ್ಟ್ ಆದೇಶದಂತೆ ಅಕ್ರಮ ಕಟ್ಟಡಗಳ ನೆಲಸಮವನ್ನು ನಡೆಸಿದ ಕಂಪನಿ ಎಡಿಫೈಸ್ ಇಂಜಿನಿಯರಿಂಗ್‌ನ ಅಧಿಕಾರಿ ದತ್ತಾ, ಅವಳಿ ಕಟ್ಟಡ ಕೆಡವಿದಾಗ ತಾನು ಮತ್ತು ತನ್ನ ತಂಡವು ಅವಳಿ ಅದರಿಂದ ಕೇವಲ 70 ಮೀಟರ್ ದೂರದಲ್ಲಿದ್ದೆವು ಎಂದು ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ ವೃತ್ತಿಪರರಾಗಿರುವುದರಿಂದ, ಅಂತಹ ಕೆಡವುವ ಕಾರ್ಯಗಳ ಸಮಯದಲ್ಲಿ ನಾವು ತುಂಬಾ ಹತ್ತಿರದಲ್ಲಿರುತ್ತೇವೆದು ಅಧಿಕಾರಿ ಹೇಳಿದರು. ಕೆಡವುವಿಕೆಯ ಪರಿಣಾಮವಾಗಿ ಪ್ರದೇಶವು ಹೊಗೆ ಮತ್ತು ಧೂಳಿನಿಂದ ಆವೃತವಾಗಿದೆ. ಅವಶೇಷಗಳು ರಾಶಿ ಬಿದ್ದಿವೆ . ಆನ್‌ಲೈನ್‌ನಲ್ಲಿ ಹಂಚಿಕೊಂಡ ದೃಶ್ಯಗಳ ಪ್ರಕಾರ ನೋಯ್ಡಾ ಪ್ರಾಧಿಕಾರದಿಂದ ನಿಯೋಜಿಸಲಾದ ಸ್ಮೋಕ್ ಗನ್‌ಗಳು ಗಾಳಿಯನ್ನು ತಿಳಿಗೊಳಿಸಲು ನೀರಿನ ಹನಿಗಳನ್ನು ಸಿಂಪಡಿಸುತ್ತಿವೆ. ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ಗ್ರಾಮಗಳ ನಿವಾಸಿಗಳಿಗೆ ಸಂಜೆ 6.30 ರ ನಂತರ ತಮ್ಮ ಮನೆಗಳನ್ನು ಪ್ರವೇಶಿಸಲು ಅನುಮತಿಸಲಾಗುವುದು ಎಂದು ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಹೇಳಿದ್ದಾರೆ. ಈಗ ಅವಶೇಷಗಳ ಸ್ವಚ್ಛಗೊಳಿಸುವಿಕೆಯನ್ನು ಪ್ರಾರಂಭಿಸಲಾಗಿದೆ. ಸುಮಾರು 5,000 ನಿವಾಸಿಗಳನ್ನು ಕೆಡವುವ ಮುನ್ನಾ ದಿನ ಇಲ್ಲಿಂದ ಸ್ಥಳಾಂತರ ಮಾಡಲಾಗಿತ್ತು

Published On - 6:49 pm, Sun, 28 August 22