ಹಸುವಿನ ಹಾಲು ಕುಡಿದು, ವಾಂತಿ ಮಾಡಿಕೊಂಡು ಮಹಿಳೆ ಸಾವು!
ನಾಯಿಯೊಂದು ಹಸುವಿಗೆ ಕಚ್ಚಿತ್ತು. ಆ ಹಸುವಿನ ಹಾಲು ಕುಡಿದ ಮಹಿಳೆ ವಾಂತಿ ಮಾಡಲು ಪ್ರಾರಂಭಿಸಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಗ್ರೇಟರ್ ನೊಯ್ಡಾದ ಜೆವಾರ್‌ನಲ್ಲಿ ಒಂದು ದುರಂತ ಘಟನೆ ಬೆಳಕಿಗೆ ಬಂದಿದೆ. ಹುಚ್ಚು ನಾಯಿ ಕಚ್ಚಿದ ಹಸುವಿನ ಹಾಲು ಕುಡಿದು ಥೋರಾ ಗ್ರಾಮದಲ್ಲಿ ರೇಬೀಸ್‌ನಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆ ಮಹಿಳೆಯ ಸಾವಿನಿಂದ ಆಕೆಯ ಕುಟುಂಬ ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

ನೊಯ್ಡಾ, ಮಾರ್ಚ್ 21: ಸಾವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಮತ್ತು ಹೇಗೆ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ಮಹಿಳೆಯ ಸಾವು ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಆಕೆ ಹೇಗೆ ಸಾವನ್ನಪ್ಪಿದರು ಎಂದು ತಿಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ. ನಾವು ಬಹಳ ಹಗುರವಾಗಿ ಪರಿಗಣಿಸಲಾಗುವ ಕೆಲವೊಂದು ಸಣ್ಣ ವಿಷಯವೇ ನಮ್ಮ ಜೀವಕ್ಕೆ ಆಪತ್ತು ಉಂಟುಮಾಬಹುದು. ನೊಯ್ಡಾದ ಜೆವಾರ್‌ನಲ್ಲಿ ಒಬ್ಬ ಮಹಿಳೆ ಹಸುವಿನ ಹಾಲು ಕುಡಿದ ಬಳಿಕ ವಾಂತಿ ಮಾಡಲು ಪ್ರಾರಂಭಿಸಿದಳು. ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಇದಾದ ನಂತರ ಆ ಮಹಿಳೆ ಸಾವನ್ನಪ್ಪಿದ್ದಾಳೆ.
ಆ ಮಹಿಳೆ ರೇಬೀಸ್ ಇರುವ ಹಸುವಿನ ಹಾಲು ಕುಡಿದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆ ಹಸುವನ್ನು ಹುಚ್ಚು ನಾಯಿ ಕಚ್ಚಿತ್ತು. ಅದರಿಂದಾಗಿ ಹಸುವಿಗೆ ರೇಬೀಸ್ ಬಂದಿತ್ತು. ಹಸುವಿನ ಹಾಲಿನ ಮೂಲಕ ರೇಬೀಸ್ ಸೋಂಕು ಮಹಿಳೆಯ ದೇಹಕ್ಕೆ ಹರಡಿತ್ತು. ಅದು ಮಹಿಳೆಯ ಸಾವಿಗೆ ಕಾರಣವಾಯಿತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೊಲೆಗೂ ಮುನ್ನ ಮಗಳ ಬರ್ತಡೇ ಪಾರ್ಟಿಯಲ್ಲಿ ಗಂಡನ ಜೊತೆ ಹಂತಕಿಯ ಡ್ಯಾನ್ಸ್
ಈ ಪ್ರಕರಣ ಥೋರಾ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಒಬ್ಬ ಮಹಿಳೆ ರೇಬೀಸ್ ಸೋಂಕಿತ ಹಸುವಿನ ಹಾಲು ಕುಡಿದಿದ್ದಾಳೆ. ಅದು ಆಕೆಯ ಸಾವಿಗೆ ಕಾರಣವಾಯಿತು. ಮೃತಳ ಹೆಸರು 40 ವರ್ಷದ ಸೀಮಾ ಎಂದು ಗುರುತಿಸಲಾಗಿದೆ. ಆಕೆ ತನ್ನ ನೆರೆಯ ಮನೆಯವರ ಹಸುವಿನ ಹಾಲು ಕುಡಿದಿದ್ದಾಳೆ. ಈ ಹಸು 2 ತಿಂಗಳ ಹಿಂದೆ ಕರುವಿಗೆ ಜನ್ಮ ನೀಡಿತ್ತು. ಒಂದೂವರೆ ತಿಂಗಳ ಹಿಂದೆ ಹಸುವಿನಲ್ಲಿ ರೇಬೀಸ್ ಲಕ್ಷಣಗಳು ಕಂಡುಬಂದಿತ್ತು. ಪಶುವೈದ್ಯರು ಪರೀಕ್ಷೆ ನಡೆಸಿದ ನಂತರ ಆ ಹಸುವಿಗೆ ರೇಬೀಸ್ ಇರುವುದು ದೃಢಪಟ್ಟಿದೆ.
ಹಸುವಿಗೆ ರೇಬೀಸ್ ಲಸಿಕೆ:
ಹಸುವಿನ ಮಾಲೀಕರ ಕುಟುಂಬವು ಹಸುವಿಗೆ ರೇಬೀಸ್ ಲಸಿಕೆ ಹಾಕಿಸಿತು. ಸೋಮವಾರ ರಾತ್ರಿ ಸೀಮಾ ನೀರು ಮತ್ತು ಬೆಳಕಿಗೆ ಹೆದರಲು ಪ್ರಾರಂಭಿಸಿದರು. ಬಳಿಕ ವಾಂತಿ ಮಾಡತೊಡಗಿದರು. ಇದಾದ ನಂತರ ಆಕೆಯ ಕುಟುಂಬವು ಅವರನ್ನು ಆಸ್ಪತ್ರೆಗೆ ಕರೆದೊಯ್ದಿತು. ಚಿಕಿತ್ಸೆಗಾಗಿ ಅವರು ಹಲವಾರು ಆಸ್ಪತ್ರೆಗಳಿಗೆ ಅಲೆದಾಡಬೇಕಾಯಿತು. ಮೊದಲು ಅವರನ್ನು ಸರ್ಕಾರಿ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ: ಅಪ್ಪ ಡ್ರಮ್ನೊಳಗಿದ್ದಾರೆ, ಮುಗ್ಧ ಮಗುವಿನಿಂದ ಬಯಲಾಯ್ತಾ ಸೌರಭ್ ಕೊಲೆಯ ಭಯಾನಕ ಸತ್ಯ
ಯಾವುದೇ ಆಸ್ಪತ್ರೆಯಲ್ಲಿ ಆಕೆಗೆ ರೇಬೀಸ್ ಇರುವುದು ಪತ್ತೆಯಾಗಲಿಲ್ಲ ಎಂದು ಆರೋಪಿಸಲಾಗಿದೆ. ಬಳಿಕ ಬಸಂತ್ ಕುಂಜ್‌ನಲ್ಲಿರುವ ಆಸ್ಪತ್ರೆಯೊಂದು ಅವಳಿಗೆ ರೇಬೀಸ್ ಇದೆ ಎಂದು ಘೋಷಿಸಿ ಮನೆಗೆ ಕಳುಹಿಸಿತ್ತು. ಸೀಮಾ ಗುರುವಾರ ನಿಧನರಾದರು. ಸೀಮಾಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಈ ಘಟನೆಯ ನಂತರ, ಮುನ್ನೆಚ್ಚರಿಕೆಯಾಗಿ ಗ್ರಾಮದ 10 ಜನರು ರೇಬೀಸ್ ಲಸಿಕೆ ತೆಗೆದುಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ