ಭಾರತದ ಶೇ.45ರಷ್ಟು ಶಾಸಕರ ಮೇಲಿದೆ ಕ್ರಿಮಿನಲ್ ಪ್ರಕರಣಗಳು
ಭಾರತದಲ್ಲಿರುವ 4,092 ಮಂದಿ ಶಾಸಕರ ಪೈಕಿ ಶೇ.45ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ನ ವರದಿ ಹೇಳಿದೆ. ದೇಶದ 28 ವಿಧಾನಸಭೆಗಳು ಮತ್ತು 3 ಕೇಂದ್ರಾಡಳಿಯ ಪ್ರದೇಶಗಳಲ್ಲಿರುವ ಒಟ್ಟು 4092 ಶಾಸಕರಲ್ಲಿ ಅರ್ಧದಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.ಕೆಲವು ಶಾಸಕರ ವಿರುದ್ಧ ಸಾಮಾನ್ಯ ರೀತಿಯ ಅಪರಾಧಗಳು ದಾಖಲಾಗಿದ್ದರೆ, ಇನ್ನು ಕೆಲವರ ವಿರುದ್ಧ ಗಂಭೀರ ರೀತಿಯ ಅಪರಾಧಗಳು ದಾಖಲಾಗಿರುವುದು ಕಂಡುಬರುತ್ತದೆ.

ನವದೆಹಲಿ, ಮಾರ್ಚ್ 21: ಭಾರತದಲ್ಲಿರುವ 4,092 ಮಂದಿ ಶಾಸಕರ ಪೈಕಿ ಶೇ.45ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ನ ವರದಿ ಹೇಳಿದೆ. ದೇಶದ 28 ವಿಧಾನಸಭೆಗಳು ಮತ್ತು 3 ಕೇಂದ್ರಾಡಳಿಯ ಪ್ರದೇಶಗಳಲ್ಲಿರುವ ಒಟ್ಟು 4092 ಶಾಸಕರಲ್ಲಿ ಅರ್ಧದಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.ಕೆಲವು ಶಾಸಕರ ವಿರುದ್ಧ ಸಾಮಾನ್ಯ ರೀತಿಯ ಅಪರಾಧಗಳು ದಾಖಲಾಗಿದ್ದರೆ, ಇನ್ನು ಕೆಲವರ ವಿರುದ್ಧ ಗಂಭೀರ ರೀತಿಯ ಅಪರಾಧಗಳು ದಾಖಲಾಗಿರುವುದು ಕಂಡುಬರುತ್ತದೆ.
ಅತ್ಯಂತ ಆಘಾತಕಾರಿ ವಿಷಯವೆಂದರೆ ಆಂಧ್ರಪ್ರದೇಶದ ಚುನಾಯಿತ ಶಾಸಕರಲ್ಲಿ ಶೇ. 79 ರಷ್ಟು ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಚುನಾವಣೆಯ ಸಮಯದಲ್ಲಿ ಈ ಶಾಸಕರು ಸಲ್ಲಿಸಿದ ಅಫಿಡವಿಟ್‌ಗಳ ಆಧಾರದ ಮೇಲೆ ಎಡಿಆರ್ ಈ ವರದಿ ನೀಡಿದೆ. ಕೊಲೆ ಅಥವಾ ಕೊಲೆಯತ್ನ, ಅಪಹರಣ, ಮಹಿಳೆಯರೊಂದಿಗೆ ಅನುಚಿತ ವರ್ತನೆಯಂತಹ ಗಂಭೀರ ವರ್ಗದ ಪ್ರಕರಣಗಳು ದಾಖಲಾಗಿವೆ.
ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ಅಂತಹ ಶಾಸಕರ ಸಂಖ್ಯೆ ವಿಧಾನಸಭೆಯಲ್ಲಿ ಮಾತ್ರವಲ್ಲದೆ ಲೋಕಸಭೆಯಲ್ಲೂ ಹೆಚ್ಚುತ್ತಿದೆ. ಹೊಸ ಲೋಕಸಭೆಯಲ್ಲಿ ಇದೀಗ ಹೊರಬಂದಿರುವ ಅಂಕಿಅಂಶಗಳ ಪ್ರಕಾರ, 543 ಸದಸ್ಯರಲ್ಲಿ 251 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅಂದರೆ ಕ್ರಿಮಿನಲ್ ದಾಖಲೆ ಹೊಂದಿರುವ ಲೋಕಸಭಾ ಸದಸ್ಯರ ಸಂಖ್ಯೆ ಬಹುತೇಕ ಅರ್ಧದಷ್ಟು.
ಮತ್ತಷ್ಟು ಓದಿ: ಭಾರತದ ಅತ್ಯಂತ ಶ್ರೀಮಂತ ಶಾಸಕರು: ಡಿಕೆ ಶಿವಕುಮಾರ್ ನಂ.2, ಟಾಪ್ 10ರಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ
ಇವರಲ್ಲಿ ಆಡಳಿತ ಪಕ್ಷವಾಗಲಿ ಅಥವಾ ವಿರೋಧ ಪಕ್ಷವಾಗಲಿ ಎಲ್ಲಾ ಪಕ್ಷಗಳ ಶಾಸಕರು ಸೇರಿದ್ದಾರೆ. ಎಲ್ಲಾ ಪಕ್ಷಗಳಲ್ಲಿ, ಶೇ. 45 ರಿಂದ ಶೇ. 66 ರಷ್ಟು ಶಾಸಕರು ಇಂತಹ ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ. ಇದರಲ್ಲಿ ಆಂಧ್ರಪ್ರದೇಶ ಮುಂಚೂಣಿಯಲ್ಲಿತ್ತು. 80% ಅಂದರೆ ಏನು ಅಂತ ನೀವೇ ಯೋಚಿಸಿ ನೋಡಿ, 100 ಶಾಸಕರಲ್ಲಿ 80 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ತೆಲಂಗಾಣದಲ್ಲೂ ಇದೇ ಪರಿಸ್ಥಿತಿ. ಶೇ. 69 ರಷ್ಟು ಶಾಸಕರು ಕ್ರಿಮಿನಲ್ ಇಮೇಜ್ ಹೊಂದಿದ್ದಾರೆ.
ಇವುಗಳಲ್ಲಿ, ಗಂಭೀರ ಪ್ರಕರಣಗಳು ಅರ್ಧಕ್ಕಿಂತ ಹೆಚ್ಚು. ಬಿಹಾರ 66%, ಮಹಾರಾಷ್ಟ್ರ 65% ಮತ್ತು ತಮಿಳುನಾಡು 69% ಇದೆ. ಈ ರಾಜ್ಯಗಳಲ್ಲಿ ಚುನಾಯಿತ ನಾಯಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ಇದು ತೋರಿಸುತ್ತದೆ. ಆದಾಗ್ಯೂ, ಅಪರಾಧ ನಡೆದಿದೆ ಎಂಬುದು ಅನಿವಾರ್ಯವಲ್ಲ. ಆದರೆ, ಪ್ರಕರಣಗಳು ದಾಖಲಾಗಿವೆ.
1,861 ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ 1,205 ಶಾಸಕರು ಕೊಲೆ, ಕೊಲೆಯತ್ನ, ಅಪಹರಣ ಮತ್ತು ಮಹಿಳೆಯರ ಮೇಲಿನ ಅಪರಾಧಗಳು ಸೇರಿದಂತೆ ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿರುವ ಇತರ ರಾಜ್ಯಗಳಲ್ಲಿ ಬಿಹಾರ (ಶೇ. 66), ಮಹಾರಾಷ್ಟ್ರ (ಶೇ. 65) ಮತ್ತು ತಮಿಳುನಾಡು (ಶೇ. 59) ಸೇರಿವೆ. ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿರುವ ಶಾಸಕರ ಪಟ್ಟಿಯಲ್ಲಿ ಆಂಧ್ರಪ್ರದೇಶ ಅಗ್ರಸ್ಥಾನದಲ್ಲಿದೆ, 98 ಶಾಸಕರು (ಶೇ. 56). ಎಡಿಆರ್ ವಿಶ್ಲೇಷಣೆಯ ಪ್ರಕಾರ, ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಇತರ ರಾಜ್ಯಗಳೆಂದರೆ ತೆಲಂಗಾಣ (ಶೇ. 50), ಬಿಹಾರ (ಶೇ. 49), ಒಡಿಶಾ (ಶೇ. 45), ಜಾರ್ಖಂಡ್ (ಶೇ. 45) ಮತ್ತು ಮಹಾರಾಷ್ಟ್ರ (ಶೇ. 41).
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಶಾಸಕರಲ್ಲಿ ಶೇ. 74 ರಷ್ಟು (132 ರಲ್ಲಿ 98) ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಅದರಲ್ಲಿ 42 ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯ 230 ಶಾಸಕರಲ್ಲಿ 95 ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಈ ಪೈಕಿ 78 ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಎಡಿಆರ್ ವಿಶ್ಲೇಷಣೆಯ ಪ್ರಕಾರ, ಆಮ್ ಆದ್ಮಿ ಪಕ್ಷದ (ಎಎಪಿ) 123 ಶಾಸಕರಲ್ಲಿ 69 (ಶೇಕಡಾ 56) ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 35 (ಶೇ. 28) ಜನರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಎಡಿಆರ್ ವಿಶ್ಲೇಷಣೆಯ ಪ್ರಕಾರ, ಸಮಾಜವಾದಿ ಪಕ್ಷವು 110 ಶಾಸಕರನ್ನು ಹೊಂದಿದ್ದು, ಅವರಲ್ಲಿ 68 (ಶೇ. 62) ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಎಡಿಆರ್ ವಿಶ್ಲೇಷಣೆಯ ಪ್ರಕಾರ, ಇವುಗಳಲ್ಲಿ 48 (ಶೇಕಡಾ 44) ಜನರ ವಿರುದ್ಧ ಗಂಭೀರ ಅಪರಾಧಗಳ ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ